ಕನ್ನಡಪ್ರಭ ವಾರ್ತೆ ವಿಜಯಪುರ
ಅಂತಾರಾಷ್ಟ್ರೀಯ ನೃತ್ಯ ದಿನದಂದು ನಟರಾಜನಿಗೆ ನೃತ್ಯಸಭಾ ಸಮರ್ಪಣೆಗಾಗಿ ನಗರದ ಅಂಬೇಡ್ಕರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವಿಶ್ವದಾಖಲೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಏಕಕಾಲಕ್ಕೆ 300 ನುರಿತ ಭರತನಾಟ್ಯ ಕಲಾವಿದರು ಸತತ 30 ನಿಮಿಷಗಳ ಕಾಲ ನಿರಂತರ ಭರತನಾಟ್ಯ ನೃತ್ಯ ಪ್ರದರ್ಶಿಸಿರುವುದು ಹೊಸ ದಾಖಲೆಯಾಗಲಿದೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಜಗತ್ತಿನ ಇತಿಹಾಸದಲ್ಲಿ ನಾಟ್ಯಕಲೆಗೆ ಇರುವ ಬೆಲೆ ಯಾವುದೇ ನೃತ್ಯಕ್ಕೆ ಇಲ್ಲ. ಇಂದಿನ ಈ ಕಾರ್ಯಕ್ರಮದ ಆಯೋಜಕಿ ಲಕ್ಷ್ಮೀ ತೆರದಾಳಮಠ ಅವರು ಸಾಮೂಹಿಕ ನೃತ್ಯ ಪ್ರದರ್ಶಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಅವರ ಈ ನಾಟ್ಯಕಲಾ ಅಕಾಡೆಮಿಯೂ ಬರುವಂತಹ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳನ್ನು ಒಳಗೊಂಡು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಿಡುವಂತಾಗಲಿ ಎಂದರು.ಯುವಜನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಮಾತನಾಡಿ, ಇಂದಿನ ಪೀಳಿಗೆ ಹೆಚ್ಚು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಇಂತಹ ನಾಟ್ಯಕಲಾ ಅಕಾಡೆಮಿ ಪ್ರವೇಶ ಪಡೆದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ತಂದೆ ತಾಯಿಗೆ ಹಾಗೂ ಜಿಲ್ಲೆಗೆ ಹೆಸರು ತರುವಂತಾಗಬೇಕು. ಮುಂಬರುವ ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ಇಂತಹ ವಿದ್ಯಾರ್ಥಿಗಳ ಭರತನಾಟ್ಯ ಕಲೆಯನ್ನು ಸಾದರಪಡಿಸಲು ಅವಕಾಶಗಳು ನೀಡಲಾಗುವುದು ಎಂದರು.