ಧಾರವಾಡ:
ಅಖಿಲ ಭಾರತ ಕಾಂಗ್ರೆಸ್ ಸಮಿತಿ ವಿವಿಧ ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಶಿವಲೀಲಾ ಕುಲಕರ್ಣಿ ಹೆಸರು ಇದೆ. ರಾಜ್ಯ ಸರ್ಕಾರ ಈ ಕುರಿತಾಗಿ ಸೆ. 25ರಂದು ಆದೇಶ ಮಾಡುವ ಸಾಧ್ಯತೆಗಳಿವೆ.
ವಿನಯ ಕುಲಕರ್ಣಿ ಅವರು ಕೊಲೆ ಪ್ರಕರಣದಲ್ಲಿ ಕ್ಷೇತ್ರಕ್ಕೆ ಬರುವಂತಿಲ್ಲ. ಜೊತೆಗೆ ಇತ್ತೀಚೆಗೆ ಅವರ ಜಾಮೀನು ಸಹ ರದ್ದಾಗಿದ್ದರಿಂದ ನಿಗಮ ಮಂಡಳಿಗೂ ರಾಜೀನಾಮೆ ನೀಡಿದ್ದರು. ಇದಕ್ಕಿಂತ ಪ್ರಮುಖವಾಗಿ ಕ್ಷೇತ್ರದಲ್ಲಿ ಆಡಳಿತ ನಿರ್ವಹಣೆ ಕಷ್ಟವಾಗಿತ್ತು. ಕೆಲವು ಸಂದರ್ಭಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಿವಲೀಲಾ ಕುಲಕರ್ಣಿ ಅವರು ಚಾಲನೆ ನೀಡಿದ್ದನ್ನು ಬಿಜೆಪಿ ವಿವಾದ ಸಹ ಮಾಡಿತ್ತು. ಸಂವಿಧಾನಾತ್ಮಕ ಯಾವುದೇ ಹುದ್ದೆ ಇಲ್ಲದೇ ಅವರು ಭೂಮಿ ಪೂಜೆ ಅಂತಹ ಕಾರ್ಯಗಳನ್ನೇಕೆ ಮಾಡಬೇಕೆಂದು ಪ್ರಶ್ನಿಸಲಾಗಿತ್ತು. ಇದೀಗ ನಿಗಮ ಮಂಡಳಿಗೆ ನೇಮಕವಾಗುವುದರಿಂದ ಕ್ಷೇತ್ರದಲ್ಲಿ ಸಂಚರಿಸಿ ವಿವಿಧ ಕಾಮಗಾರಿಗಳಲ್ಲಿ ಭಾಗವಹಿಸಿ ಆಡಳಿತ ಸಹ ಗಮನಿಸಲು ಅವಕಾಶ ದೊರೆತಂತಾಗಲಿದೆ.