ಕುಶಲಕರ್ಮಿಗಳ ಘನತೆ ಹೆಚ್ಚಿಸಲು ಪ್ರಧಾನಿ ದೃಢ ಹೆಜ್ಜೆ

KannadaprabhaNewsNetwork | Published : Mar 9, 2024 1:31 AM

ಸಾರಾಂಶ

ಸೋಮೇಶ್ವರದಲ್ಲಿ ನಸುಕಿನಿಂದಲೇ ಶಿವನಿಗೆ ವಿಶೇಷ ಪೂಜೆಗಳು ನಡೆದವು. ಶಿವನಿಗೆ ಅತೀ ಶ್ರೇಷ್ಠವಾಗಿರುವ ಬಿಲ್ವ ಪತ್ರೆ ಅರ್ಪಿಸಿ, ತುಪ್ಪ, ಹಾಲಿನಿಂದ ಅಭಿಷೇಕ ಮಾಡಿ, ತುಳಸಿಯಿಂದ ಶಿವಲಿಂಗ ಅಲಂಕಾರ ಮಾಡಿ ಶಿವನನ್ನು ಭಜಿಸಲಾಯಿತು

ಧಾರವಾಡ: ನಮ್ಮ ಕುಶಲಕರ್ಮಿಗಳನ್ನು ಘನತೆಯ ಜೀವನಕ್ಕಾಗಿ ಉಪಕರಣಗಳು ಮತ್ತು ಸಲಕರಣೆಗಳ ಮೂಲಕ ಬಲಪಡಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಧ್ಯೇಯ. ಅವರ ಕೈಹಿಡಿಯುವ ಮೂಲಕ ಅವರ ಧ್ಯೇಯ ಮುಂದುವರಿಸಲು ಮತ್ತು ಅವರಿಗೆ ಹೊಸದನ್ನು ನೀಡಲು ನಾವು ಪ್ರತಿಜ್ಞೆ ಮಾಡಿದ್ದೇವೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಅಧ್ಯಕ್ಷ ಮನೋಜ್ ಕುಮಾರ್ ಹೇಳಿದರು.

ತಾಲೂಕಿನ ಗರಗ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದಲ್ಲಿ ಸಣ್ಣ-ಪ್ರಮಾಣದ ಗ್ರಾಮ ಕೈಗಾರಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಗ್ರಾಮೋದ್ಯೋಗ ವಿಕಾಸ್ ಯೋಜನೆ (ಜಿವಿವೈ) ಅಡಿಯಲ್ಲಿ 460 ಕ್ಕೂಹೆಚ್ಚು ಕುಶಲಕರ್ಮಿಗಳಿಗೆ ಅಗತ್ಯ ಉಪಕರಣಗಳನ್ನು ವಿತರಿಸಿ,ಗರಗದಲ್ಲಿ ರಾಷ್ಟ್ರಧ್ವಜ ಉತ್ಪಾದನಾ ಘಟಕ ಉದ್ಘಾಟಿಸಿ ಮಾತನಾಡಿದರು.

ಕುಶಲಕರ್ಮಿಗಳಿಗೆ ತಾಂತ್ರಿಕ ಮತ್ತು ಆರ್ಥಿಕ ಬೆಂಬಲದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ವಿಕ್ಷಿತ್ ಮತ್ತು ಆತ್ಮನಿರ್ಭರ್ ಭಾರತ್ ಮಿಷನ್ ವಿಸ್ತರಿಸಲು ಕೆವಿಐಸಿ ವಾಗ್ದಾನ ಮಾಡಿದೆ ಎಂದರು.

ಜೇನುಸಾಕಣೆ, ಕುಂಬಾರಿಕೆ, ಕೊಳಾಯಿ,ಎಲೆಕ್ಟ್ರಿಷಿಯನ್ ಸೇವೆಗಳು, ಪಾದರಕ್ಷೆಗಳ ತಯಾರಿಕೆ ಮತ್ತು ಹಣ್ಣು ಮತ್ತು ತರಕಾರಿ ಸಂಸ್ಕರಣೆ ಸೇರಿದಂತೆ ಸುಮಾರು 370 ಕುಶಲಕರ್ಮಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದ ಅವರು, ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ (ಫೆಡರೇಶನ್) ಅಡಿಯಲ್ಲಿ ಇದುವರೆಗೆ ಒಂದೇ ಒಂದು ರಾಷ್ಟ್ರಧ್ವಜ ಉತ್ಪಾದನಾ ಘಟಕ ಕಾರ್ಯನಿರ್ವಹಿಸುತ್ತಿದೆ.ಈ ಹೊಸ ಉಪಕ್ರಮವು ರಾಷ್ಟ್ರದಾದ್ಯಂತ ರಾಷ್ಟ್ರಧ್ವಜದ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ರಾಷ್ಟ್ರೀಯ ಧ್ವಜಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುತ್ತದೆ. ಧ್ವಜ ಉತ್ಪಾದನೆಯಲ್ಲಿ ಉತ್ಕೃಷ್ಟತೆಗೆ ಹೆಸರುವಾಸಿಯಾದ ಗರಗ ಪ್ರದೇಶವು ಈಗ ನಿಗದಿತ ಮಾನದಂಡಗಳ ಅಡಿಯಲ್ಲಿ ರಾಷ್ಟ್ರೀಯ ಅವಶ್ಯಕತೆಗಳನ್ನು ಪೂರೈಸಲು ಗಣನೀಯ ಕೊಡುಗೆ ನೀಡಲಿದೆ ಎಂಬ ನಂಬಿಕೆ ನಮಗಿದೆ ಎಂದರು.

ರಾಷ್ಟ್ರಧ್ವಜದ ಉತ್ಪಾದನೆಯಲ್ಲಿ ತೊಡಗಿರುವ ಕುಶಲಕರ್ಮಿಗಳು ಮತ್ತು ನೇಕಾರರ ಪ್ರಯತ್ನ ಶ್ಲಾಘಿಸಿದರು. ರಾಷ್ಟ್ರೀಯ ಹೆಮ್ಮೆ ಎತ್ತಿಹಿಡಿಯುವಲ್ಲಿ ಮತ್ತು ಏಕತೆ ಮತ್ತು ದೇಶ ಪ್ರೇಮದ ಚೈತನ್ಯ ಸಂಕೇತಿಸುವಲ್ಲಿ ಅವರ ಕೊಡುಗೆಗಳ ಮಹತ್ವ ಮನೋಜಕುಮಾರ ಹೇಳಿದರು.

Share this article