ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ
ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಜಿಲ್ಲೆ ಪ್ರತಿ ಪಟ್ಟಣದಲ್ಲಿ ಸರದಿಯಂತೆ ಜಿಲ್ಲಾ ಸಮಾವೇಶ ಏರ್ಪಡಿಸಲಾಗುತ್ತಿದ್ದು, ಸಮಾವೇಶ ನಡೆಸುವಲ್ಲಿ ಅತ್ಯಂತ ಉತ್ಸುಕತೆ ಮನೋಭಾವ ಮೆಚ್ಚುವಂಥದ್ದು, ಅದರಂತೆ ೨೦೨೪ರ ಜಿಲ್ಲಾ ಸಮಾವೇಶಕ್ಕೆ ಮಹಾಲಿಂಗಪುರ ಘಟಕ ಒಪ್ಪಿಗೆ ಸೂಚಿಸಿದ್ದನ್ನು ಸ್ವಾಗತಿಸುತ್ತೇವೆ ಎಂದರು.
ಜಿಲ್ಲೆಯಾದ್ಯಂತ ಶಿವಶಿಂಪಿ ಸಮಾಜವರ ಸಮಸ್ಯೆಗಳನ್ನು ಆಲಿಸುವಲ್ಲಿ ಸಭೆ ಯಶಸ್ವಿಯಾಯಿತು. ಪ್ರತಿ ಗ್ರಾಮ ಹಾಗೂ ಪಟ್ಟಣಗಳಲ್ಲಿರುವ ಸಮಾಜ ಬಾಂಧವರ ಸಂಪೂರ್ಣ ಮಾಹಿತಿಯೊಂದಿಗೆ ಆಯಾ ತಾಲೂಕು ಘಟಕಗಳ ಅಧ್ಯಕ್ಷರು ಮಾಹಿತಿ ಪಡೆಯುವ ಮೂಲಕ ಸಮಾಜ ಬಲಪಡಿಸಲು ಕಾರ್ಯಗಳನ್ನು ಮಾಡಬೇಕೆಂದರು.ಜಿಲ್ಲಾ ಉಪಾಧ್ಯಕ್ಷ ಚನಬಸಪ್ಪ ಅಥಣಿ, ಕಾರ್ಯದರ್ಶಿ ಗಣೇಶ ಕುಬಸದ, ಶರಣಪ್ಪ ತಾಳಿಕೋಟಿ, ಕೋಶಾಧ್ಯಕ್ಷ ವೀರಣ್ಣ ಗಂಗಾವತಿ, ವೀರಣ್ಣ ಮುತ್ತಗಿ, ಕೀರ್ತೆಪ್ಪ ಭೂಯ್ಯಾರ, ಸಂಕಣ್ಣ ಗಂಗನ್ನವರ, ಮಹಾಲಿಂಗಪ್ಪ ಕರನಂದಿ, ಪ್ರಕಾಶ ಸಣಕಾಲ, ಪ್ರಕಾಶ ಗಂಗನ್ನವರ, ಮುನವಳ್ಳಿ, ರಮೇಶ ಹೆಬ್ಬಳ್ಳಿ, ಚಿದಾನಂದ ಸೊಲ್ಲಾಪುರ, ಚಂದ್ರಶೇಖರ ಭೂಯ್ಯಾರ, ಬಾಬು ಗಂಗಾವತಿ, ಸಿದ್ಲಿಂಗಪ್ಪ ತುಂಗಳ, ಸದಾಶಿವ ಶಿರೋಳ ಸೇರಿದಂತೆ ಜಮಖಂಡಿ, ರಬಕವಿ-ಬನಹಟ್ಟಿ, ಮುಧೋಳ, ಲೋಕಾಪುರ, ಬದಾಮಿ, ಗುಳೇದಗುಡ್ಡ, ಕೆರೂರ ವಿವಿಧ ಪಟ್ಟಣಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.