ನವಲಗುಂದ:
ಸರ್ಕಾರದ ನಿರ್ದೇಶನದಂತೆ ಅವರು ಸೋಮವಾರ ಪಟ್ಟಣದ ತಾಲೂಕು ಆಸ್ಪತ್ರೆ ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳ ಕುಂದು-ಕೊರತೆಗಳ ಕುರಿತು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೇನೆ. ಆದರೆ, ನವಲಗುಂದ ತಾಲೂಕು ಆಸ್ಪತ್ರೆ ಅತ್ಯಂತ ಶುಚಿಯಾಗಿದೆ. ಆದರೆ, ವೈದ್ಯರ ಕೊರತೆ ಬಗ್ಗೆ ಕೇಳಿ ಬರುತ್ತಿವೆ ಎಂದರುಮುಖ್ಯ ವೈದ್ಯಾಧಿಕಾರಿ ರೂಪಾ ಕಿಣಗಿ ಮಾತನಾಡಿ, ಆಸ್ಪತ್ರೆಯಲ್ಲಿ ಆಕ್ಸಿಜನ್ ನಿರ್ವಹಣೆ, ಆಸ್ಪತ್ರೆ ಹಾಗೂ ಎಕ್ಸ್-ರೆ ಮಷಿನ್ ವಾರ್ಷಿಕ ನಿರ್ವಹಣೆ, ವೈದ್ಯರ ಕೊರತೆ, ಆಸ್ಪತ್ರೆಯಲ್ಲಿ ಔಷಧಿ ಕೊಠಡಿ ನಿರ್ಮಿಸಲು ಹಾಗೂ ಇತರೆ ಬೇಡಿಕೆಗಳನ್ನು ನೀಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು.
ಈ ವೇಳೆ ತಹಸೀಲ್ದಾರ್ ಸುಧೀರ ಸಾಹುಕಾರ, ನೀಲಪ್ಪ ಕರ್ಲವಾಡ, ಸುಭಾಷ ಮಂಗಳಿ, ಮುತ್ತು ಚಿಕ್ಕನರಗುಂದ, ಸಹದೇವ ಪೂಜಾರ, ಉಮೇಶ ಪರಕಾಳಿ, ಎಸ್.ಎನ್. ಸಿದ್ರಾಮಶೆಟ್ಟರ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಹಾಗೂ ಅಧಿಕಾರಿಗಳಿದ್ದರು.