ಜಂಟಿ ಸರ್ವೆಗೆ ಸಿಬ್ಬಂದಿ ಕೊರತೆ: ಪ್ರತ್ಯೇಕ ತಂಡ ರಚನೆಗೆ ಪ್ರಸ್ತಾವ

KannadaprabhaNewsNetwork | Published : Oct 9, 2023 12:47 AM

ಸಾರಾಂಶ

ಜಂಟಿ ಸರ್ವೆಗೆ ಸಿಬ್ಬಂದಿ ಕೊರತೆ: ಪ್ರತ್ಯೇಕ ತಂಡ ರಚನೆಗೆ ಪ್ರಸ್ತಾವ

ಅರಣ್ಯರೋಧನ- 1------------------

ಏನು ಸಮಸ್ಯೆ

ಹಲವು ಸರ್ವೆ ನಂಬರ್‌ಗಳ ಪಹಣಿಗಳಲ್ಲಿ ಅರಣ್ಯ ಮತ್ತು ಗೋಮಾಳ ಎಂಬುದಾಗಿ ದಾಖಲಾಗಿವೆ

ಇದರಿಂದಾಗಿ ಸಾವಿರಾರು ಭೂಮಿ ರಹಿತ ಕುಟುಂಬಗಳಿಗೆ ಭೂಮಿ ಪಡೆಯಲು ತೊಂದರೆಯಾಗಿದೆ

ಭೂ ಹೀನರಿಗೆ ಭೂಮಿ ಮಂಜೂರು ಮಾಡಲು ಆಗುತ್ತಿಲ್ಲ; ರೈತರಿಗೆ ಸರ್ಕಾರಿ ಸೌಲಭ್ಯ ಸಿಗುತ್ತಿಲ್ಲ

ಆಟದ ಮೈದಾನ, ಸ್ಮಶಾನ, ಶಾಲೆ, ಆಸ್ಪತ್ರೆ, ಅಂಗನವಾಡಿ ಕಟ್ಟಡಗಳಿಗೂ ಜಾಗ ಇಲ್ಲದಂತಾಗಿದೆ

--------------ೇ

ಭೂ ಹೀನರಿಗೆ ಭೂಮಿ ಮಂಜೂರು ಮಾಡಲು

ಆರ್. ತಾರಾನಾಥ್ ಕನ್ನಡಪ್ರಭವಾರ್ತೆ ಚಿಕ್ಕಮಗಳೂರುಪಶ್ಚಿಮಘಟ್ಟದ ತಪ್ಪಲಲ್ಲಿರುವ ಚಿಕ್ಕಮಗಳೂರು ಜಿಲ್ಲೆ ಬೆಟ್ಟಗಳ ಎತ್ತರದಷ್ಟು ಸಮಸ್ಯೆಗಳು ಎದುರಿಸುತ್ತಿದೆ. ಕಂದಾಯ ಭೂಮಿಯನ್ನು ಅರಣ್ಯ ಇಲಾಖೆ ತನ್ನ ಮಡಿಲಿಗೆ ಹಾಕಿಕೊಂಡಿದೆ. ಹಲವು ಸರ್ವೆ ನಂಬರ್‌ಗಳ ಪಹಣಿಗಳಲ್ಲಿ ಅರಣ್ಯ ಮತ್ತು ಗೋಮಾಳ ಎಂಬುದಾಗಿ ದಾಖಲಾಗಿವೆ. ಇದರಿಂದಾಗಿ ಸಾವಿರಾರು ಕುಟುಂಬಗಳಿಗೆ ತೊಂದರೆಯಾಗಿದೆ. ಅಂದರೆ, ಭೂ ಹೀನರಿಗೆ ಭೂಮಿ ಮಂಜೂರು ಮಾಡಲು ಆಗುತ್ತಿಲ್ಲ. ನಿವೇಶನ, ಗ್ರಾಮಕ್ಕೆ ಆಟದ ಮೈದಾನ, ಸ್ಮಶಾನ, ಶಾಲೆ, ಆಸ್ಪತ್ರೆ, ಅಂಗನವಾಡಿ ಕಟ್ಟಡ, ಸಮುದಾಯ ಭವನಗಳ ನಿರ್ಮಾಣ ಜಾಗ ಇಲ್ಲದಂತಾಗಿದೆ. ಸಾವಿರಾರು ಜನರು ಹಲವು ವರ್ಷಗಳಿಂದ ಜಮೀನು ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಅವರ ಪಹಣಿಗಳಲ್ಲಿ ಅರಣ್ಯ ಎಂಬುದಾಗಿ ನಮೂದಾಗಿರುವುದರಿಂದ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆಯಲು ಆಗುತ್ತಿಲ್ಲ, ಬರೀ ಇಷ್ಟೆ ಅಲ್ಲ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸರ್ಕಾರದಿಂದ ಬಿಡುಗಡೆಯಾಗಿರುವ ಪರಿಹಾರ ಧನವೂ ಕೂಡ ಸಿಗುತ್ತಿಲ್ಲ. ಮಲೆನಾಡಿನಲ್ಲಿ ಪ್ರಾಣಿ ಹಾಗೂ ಮಾನವನ ನಡುವೆ ಹೇಗೆ ಆಗಾಗ ಸಂಘರ್ಷ ನಡೆಯುತ್ತಿದಿಯೋ ಹಾಗೆಯೇ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ರೈತರ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಹಲವು ಮಂದಿ ಪೆಟ್ಟು ತಿಂದು ಆಸ್ಪತ್ರೆಗೆ ಸೇರಿದ್ದಾರೆ. ಇಂದಿಗೂ ಕೂಡ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿವೆ. ಈ ಸಮಸ್ಯೆಗಳ ಹುಟ್ಟಿಗೆ ಸುಮಾರು 5 ದಶಕಗಳ ಇತಿಹಾಸ ಇದೆ. ಹಿಂದಿನ ಅಧಿಕಾರಿಗಳು ಮಾಡಿದ ತಪ್ಪಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ರೈತ ಮಕ್ಕಳು ಬಡಿದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕಂದಾಯ ಇಲಾಖೆ ಮುತುವರ್ಜಿ ವಹಿಸಿದೆ. ಮೂಡಿಗೆರೆ ತಾಲೂಕಿನಿಂದ ಜಂಟಿ ಸರ್ವೆ ಆರಂಭ ಮಾಡಲಾಗುವುದು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಇತ್ತೀಚೆಗೆ ಹೇಳಿದ್ದಾರೆ.

ಪ್ಲಾನ್- 1

ಜಂಟಿ ಸರ್ವೆ ಸುಲುಭದ ಮಾತಲ್ಲ, ಈ ರೀತಿ ಪ್ರಯತ್ನಗಳು ಹಲವು ಬಾರಿ ನಡೆದಿದೆ. ಆದರೆ, ಯಾವುದೇ ಸರ್ವೆಯ ಫೈನಲ್ ರಿಪೋರ್ಟ ಸಿದ್ಧಪಡಿಸಲು ಸಾಧ್ಯವಾಗಿಲ್ಲ. ಕಾರಣ, ಇದಕ್ಕೆ ಹಲವು ತೊಡಕುಗಳು ಇವೆ. ಇವುಗಳ ನಿವಾರಣೆಗೆ ಯಾವ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂಬ ಪ್ಲಾನ್ ಮೊದಲು ಮಾಡಿಕೊಳ್ಳಬೇಕಾಗಿದೆ. ಒಂದೇ ಸರ್ವೆ ನಂಬರ್‌ನಲ್ಲಿ ಗೋಮಾಳ, ಅರಣ್ಯದ ಜತೆಗೆ 18 ಜನರ ಸಾಗುವಳಿ ಜಮೀನು ಕೂಡ ಇದೆ. ಇಲ್ಲಿ ಉದಾಹರಣೆಗೆ ಹೇಳುವುದಾದರೆ, ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಹವ್ವಳ್ಳಿ ಗ್ರಾಮದ ಸರ್ವೆ ನಂಬರ್ 303 ರಲ್ಲಿ ಆರ್‌ಟಿಸಿಯಲ್ಲಿ ದಾಖಲಾಗಿರುವ ಪ್ರಕಾರ 448 ಎಕರೆ 31 ಗುಂಟೆ ಪ್ರದೇಶ ಇದೆ. ಇದಕ್ಕೆ ಒಂದೇ ಭೂ ನಕ್ಷೆ ಇದೆ. ಯಾರಿಗೆ ಯಾವ ಜಾಗ ಎಂಬುದು ಗುರುತು ಮಾಡಬೇಕಾಗಿದೆ.

ಪ್ಲಾನ್ -2

ಜಾಗ ಗುರುತು ಮಾಡಲು ಇಡೀ ಸರ್ವೆ ನಂಬರ್ ನಕ್ಷೆಯನ್ನು ತೆಗೆದು ಪೋಡಿ ಮಾಡಬೇಕು, ಅಂದರೆ ಯಾರಿಗೆ ಯಾವ ಜಾಗ ಎಂಬುದನ್ನು ಗುರುತು ಮಾಡಿ, ಸರ್ವೆ ನಕ್ಷೆ ಸಿದ್ಧಪಡಿಸಬೇಕು. ಆ ನಂತರದಲ್ಲಿ ಪಹಣಿಯಲ್ಲಿರುವವರ ಹೆಸರಿನಲ್ಲಿ ಹೊಸದಾಗಿ ಹಿಸ್ಸಾ ಸಂಖ್ಯೆ ಬರಲಿದೆ. ಅಲ್ಲಿಗೆ ಈ ಸಮಸ್ಯೆ ಇತ್ಯರ್ಥವಾಗಲಿದೆ. ಈಗಾಗಲೇ ಸರ್ವೆ ಇಲಾಖೆಯಲ್ಲಿ ಗ್ರಾಮ ಹಾಗೂ ಸರ್ವೆ ನಂಬರ್‌ವಾರು ನಕ್ಷೆ ಹಾಗೂ ಅವುಗಳ ಎಡ- ಬಲ ಇರುವುದರಿಂದ ಅದರ ಆಧಾರದ ಮೇಲೆ ಬಾಂದ್ ಕಲ್ಲು ಹುಡುಕುವುದು ಕಷ್ಟವಾಗಲಾರದು, ಆದರೆ, ಸರ್ವೆ ಮಾಡಿ ನಕ್ಷೆ ಸಿದ್ಧಪಡಿಸಲು ಕಷ್ಟವಾಗಲಿದೆ. ಈ ಕೆಲಸ ಸಮರೋಪಾದಿಯಲ್ಲಿ ಮಾಡಿದರೆ ಮಾತ್ರ ಹಲವು ದಶಕಗಳ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಇಲ್ಲದೆ ಹೋದರೆ, ಮಲೆನಾಡಿನ ಜನರ ಸಮಸ್ಯೆ ಅರಣ್ಯರೋಧನವಾಗಲಿದೆ.

ಪ್ಲಾನ್- 3

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಲ್ಲಿ 20 ಹಾಗೂ ಕಂದಾಯ ಇಲಾಖೆಯ ಅಧೀನದಲ್ಲಿರುವ ಸರ್ವೆಯರ್ ಇಲಾಖೆಯಲ್ಲಿ ಲೈಸನ್ಸ್ ಹಾಗೂ ಸರ್ಕಾರಿ ಸೇರಿದಂತೆ ಸುಮಾರು 250 ಮಂದಿ ಸರ್ವೆಯರ್‌ಗಳು ಇದ್ದಾರೆ. ಇವರಲ್ಲಿ ಕೆಲವರನ್ನು ಜಂಟಿ ಸರ್ವೆಗೆ ತೆಗೆದುಕೊಂಡರೆ ದೈನಂದಿನ ಕೆಲಸಗಳಿಗೆ ಹಿನ್ನಡೆಯಾಗಲಿದೆ. ಇದರಿಂದ ಇತರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಈ ವಾಸ್ತವಿಕತೆ ಅರಿತ ಜಿಲ್ಲಾಡಳಿತ ಜಂಟಿ ಸರ್ವೆಗೆ ಅರಣ್ಯ ಮತ್ತು ಕಂದಾಯ ಇಲಾಖೆಯ ಸರ್ವೆಯರ್ ಒಳಗೊಂಡ ಪ್ರತ್ಯೇಕ ತಂಡ ರಚನೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಈ ನಿಟ್ಟಿನ ಪ್ರಯತ್ನ ಜನರಲ್ಲಿ ಆಶಾಭಾವನೆ ಮೂಡಿಸಿದೆ. ಇದು, ಕಾರ್ಯರೂಪಕ್ಕೆ ಬಂದರೆ ಮಾತ್ರ ಸಮಸ್ಯೆಗೆ ಪರಿಹಾರ ಸಿಗಲಿದೆ. ಇಲ್ಲದೆ ಹೋದರೆ, ಹಳೆ ಕಥೆಗೆ ಹೊಸ ಹೆಸರಿಟ್ಟಂತಾಗುತ್ತದೆ.

------------------------------

ಬಾಕ್ಸ್ -----------------------------

ಜಿಲ್ಲೆಯ ಕೆಲವು ಮೀಸಲು ಅರಣ್ಯದೊಳಗೆ ಜನವಸತಿ ಪ್ರದೇಶ ಇದೆ. ಸಕ್ಷನ್ 4(1) ಆಗಿ ಹಲವು ವರ್ಷಗಳೇ ಕಳೆದು ಹೋಗಿದೆ. ಈವರೆಗೆ ಸಕ್ಷನ್ 17 ಘೋಷಣೆ ಆಗಿಲ್ಲ. ಹಲವು ತಲೆಮಾರುಗಳಿಂದ ಉಳುಮೆ ಮಾಡುತ್ತಿರುವ ಜಮೀನಿನ ಆರ್‌ಟಿಸಿಯಲ್ಲಿ ಡೀಮ್ಡ್ ಎಂಬುದಾಗಿ ದಾಖಲಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಆಗಬೇಕು.

ಎಸ್. ವಿಜಯಕುಮಾರ್ ಪ್ರಧಾನ ಸಂಚಾಲಕರು,

ಕಸ್ತೂರಿ ರಂಗನ್ ವರದಿ ಮತ್ತು ಮುಳ್ಳಯ್ಯನಗಿರಿ ವರದಿ ವಿರೋಧಿ ಹೋರಾಟ ಸಮಿತಿ.

ಪೋಟೋ ಪೈಲ್ ನೇಮ್ 8 ಕೆಸಿಕೆಎಂ 2

-----------------------ಪೋಟೋ ಪೈಲ್ ನೇಮ್ 8 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಹವ್ವಳ್ಳಿ ಗ್ರಾಮದ ಸರ್ವೆ ನಂಬರ್ 303 ರಲ್ಲಿ ಗೋಮಾಳ, ಅರಣ್ಯ ಹಾಗೂ ಕೆಲವು ಜನರ ಜಮೀನು ಇರುವ ಆರ್‌ಟಿಸಿ.

Share this article