ಸೌಲಭ್ಯ ಕಲ್ಪಿಸದ ಅಧಿಕಾರಿಗಳೇಕಿರಬೇಕು?

KannadaprabhaNewsNetwork |  
Published : Jan 08, 2025, 12:15 AM IST
ತೊಂಡೆಭಾವಿ ಗ್ರಾಮದ ಫಲಾನುಭವಿಗಳಿಗೆ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಇ-ಸ್ವತ್ತುಗಳನ್ನು ವಿತರಿಸುತ್ತಿರುವುದು. | Kannada Prabha

ಸಾರಾಂಶ

ಗೌರಿಬಿದನೂರು ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಪ್ರತಿ ಮನೆಗೂ, ಖಾಲಿ ನಿವೇಶನಗಳಿಗೂ ಸರ್ಕಾರದಿಂದ ಸಿಗುವ ಈ-ಸ್ವತ್ತುಗಳನ್ನು ಪಡೆಯಲು ಸಾರ್ವಜನಿಕರು ಪರದಾಡುತ್ತಿದ್ದಾರೆ. ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿಯೇ ಗ್ರಾಮದಲ್ಲಿಯೇ ಇಲಾಖೆಯ ಅಧಿಕಾರಿಗಳೊಡನೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಚರಂಡಿ, ನೀರು, ಸ್ವಚ್ಛತೆಯಂತಹ ಸೌಲಭ್ಯ ಕಲ್ಪಿಸದ ಪಂಚಾಯಿತಿಗಳು ಮತ್ತು ಪಿಡಿಒಗಳು ಏಕಿರಬೇಕು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಪ್ರಶ್ನಿಸಿದರು. ತಾಲೂಕಿನ ತೊಂಡೇಭಾವಿ ಹೋಬಳಿಯ ರೈಲ್ವೇ ನಿಲ್ದಾಣದ ಬಳಿ ಮಹೇಶ್ವರಮ್ಮ ದೇವಾಲಯದ ಆವರಣದಲ್ಲಿ ತಾಲ್ಲೂಕು ಪಂಚಾಯತಿ ವತಿಯಿಂದ ತೊಂಡೇಭಾವಿ ಹೋಬಳಿ ಮಟ್ಟದಲ್ಲಿ ಆಯೋಜಿಸಲಾಗಿದ್ದ ಇ ಸ್ವತ್ತು ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಗಳಲ್ಲೇ ಈ - ಸ್ವತ್ತು

ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಪ್ರತಿ ಮನೆಗೂ, ಖಾಲಿ ನಿವೇಶನಗಳಿಗೂ ಸರ್ಕಾರದಿಂದ ಸಿಗುವ ಈ-ಸ್ವತ್ತುಗಳನ್ನು ಪಡೆಯಲು ಸಾರ್ವಜನಿಕರು ಪರದಾಡುತ್ತಿದ್ದಾರೆ. ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿಯೇ ನಿಮ್ಮ ಗ್ರಾಮದಲ್ಲಿಯೇ ಇಲಾಖೆಯ ಅಧಿಕಾರಿಗಳೊಡನೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿಯೇ ಪ್ರಥಮಬಾರಿಗೆ ಜಿ.ಪಿ.ಎ‌ಲ್.ಎಫ್.ನ ಅಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸಮವಸ್ತ್ರವನ್ನು ವಿತರಿಸಿ ಸನ್ಮಾನ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರಿಗೂ ಕೂಡ ಸನ್ಮಾನ ಮಾಡಲಾಯಿತು. ಇ ಸ್ವತ್ತು ವಿತರಿಸಲು ಕ್ರಮ

ತಾ.ಪಂ.ಇಒ ಜೆ.ಕೆ.ಹೊನ್ನಯ್ಯ ಮಾತನಾಡಿ, ಹಕ್ಕು ಪತ್ರ ನೀಡಿದ್ದರೂ ದಾಖಲೆಗಳಲ್ಲಿ ಸರ್ವೇ ನಂಬರ್ ಬರುತ್ತಿರುವ ದೂರುಗಳು ಇವೆ. ಕಾನೂನು ವ್ಯಾಪ್ತಿಯಲ್ಲಿ ಪರಿಹಾರ ಸೂಚಿಸಲಾಗುವುದು. ಶಾಸಕರ ಸೂಚನೆಯಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಮನೆ ಮನೆಗೆ ಹೋಗಿ ದಾಖಲೆಗಳನ್ನು ಸಂಗ್ರಹಿಸಿ ಇ ಸ್ವತ್ತು ವಿತರಿಸಲಾಗುವುದು ಎಂದರುಕೋಚಿಮುಲ್ ನಿರ್ದೇಶಕ ಜೆ .ಕಾಂತರಾಜು ಮಾತನಾಡಿ, ಈ ಸ್ವತ್ತು ಸಿಗದೆ ವರ್ಷಾನುಗಟ್ಟಲೆ ಕಾಯುತ್ತಿರುವವರು ಇದ್ದಾರೆ. ನಗರ ಪ್ರದೇಶದಲ್ಲಿ ನಡೆಯುತ್ತಿದ್ದ ಇ ಸ್ವತ್ತು ವಿತರಣೆ ಅಭಿಯಾನವನ್ನು ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಲಾಗಿದೆ. ಕಾನೂನು ವ್ಯಾಪ್ತಿಯಲ್ಲಿ ಹಕ್ಕು ಪತ್ರ ಹಾಗೂ ಈ ಸ್ವತ್ತು ವಿತರಣೆ ಮಾಡಿದರೆ ಜನಕ್ಕೆ ಅನುಕೂಲವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ತೊಂಡೆಬಾವಿ ಗ್ರಾಪಂ ಅಧ್ಯಕ್ಷ ಕಾಮಾಕ್ಷಿ ರಾಮದಾಸ್, ಪಿಡಿಒ ಬಸವರಾಜ್ ಬಳೂಟಗಿ , ಸೇರಿದಂತೆ ಅಲಕಾಪುರ, ಜಿ ಬೊಮ್ಮಸಂದ್ರ, ಕಲ್ಲಿನಾಯಕನಹಳ್ಳಿ, ತರಿದಾಳು, ಅಲ್ಲಿಪುರ, ಬೇವನಹಳ್ಳಿ ಗ್ರಾಪಂ ಅಧ್ಯಕ್ಷರು ಸದಸ್ಯರು, ಪಿಡಿಒಗಳು ಮತ್ತು ಅಧಿಕಾರಿಗಳು ಇದ್ದರು.

ಫೋಟೋ............ಗೌರಿಬಿದನೂರಿನ ತೊಂಡೆಭಾವಿಯಲ್ಲಿ ಏರ್ಪಡಿಸಿದ್ದ ಇ ಸ್ವತ್ತು ಅಭಿಯಾನದಲ್ಲಿ ಶಾಸಕ ಕೆ.ೆಚ್.ಪುಟ್ಟಸ್ವಾಮಿಗೌಡ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!