ಸೂಲಿಬೆಲೆ: ಕಾಲೋನಿ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸಿಗಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಇಲ್ಲಿನ ೬ನೇ ವಾರ್ಡಿನಲ್ಲಿ ₹೫೦ ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಯ ಎಸ್‌ಟಿಪಿ ಟಿಎಸ್‌ಪಿ ಯೋಜನೆಯಡಿ ₹೫೦ ಲಕ್ಷ ವೆಚ್ಚದಲ್ಲಿ ೬ನೇ ವಾರ್ಡಿನ ಮುಖ್ಯರಸ್ತೆಯ ಪರಿಶಿಷ್ಟರ ಕಾಲೋನಿ ನಿವಾಸಿಗಳ ಅನುಕೂಲಕ್ಕಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ ಎಂದು ಹೇಳಿದರು.ಗ್ರಾಮೀಣ ಭಾಗದಲ್ಲಿ ನಡೆಯುವ ಸರ್ಕಾರಿ ಅನುದಾನಿಕ ಕಾಮಗಾರಿಗಳನ್ನು ಗ್ರಾಮಸ್ಥರು ನಿಗಾ ವಹಿಸಬೇಕು. ಕಾಮಗಾರಿಗಳಲ್ಲಿ ಲೋಪದೋಷಗಳು ಕಂಡು ಬಂದಲ್ಲಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಇಲ್ಲವೇ ನನ್ನ ಗಮನಕ್ಕೆ ತರಬೇಕು ಎಂದು ಹೇಳಿದರು.ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಮಾತನಾಡಿ, ಶಾಸಕ ಶರತ್ ಬಚ್ಚೇಗೌಡರ ಕಾಳಜಿಯಿಂದ ತಾಲೂಕಿನಲ್ಲಿ ಅಭಿವೃದ್ಧಿಯಾಗುತ್ತಿದೆ. ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸಿಕ್ಕಿದೆ. ಹೋಬಳಿ ವ್ಯಾಪ್ತಿಯ ಅನುಪಹಳ್ಳಿಯಲ್ಲಿ ₹೧೯ ಲಕ್ಷದಲ್ಲಿ ಸಿಸಿ ರಸ್ತೆ, ಈಸ್ತೂರು ಗ್ರಾಮದಲ್ಲಿ ₹೧೩ ಲಕ್ಷ ಸಿಸಿ ರಸ್ತೆ, ಈಸ್ತೂರು ಹೊಸಹಳ್ಳಿ ಗ್ರಾಮದಲ್ಲಿ ₹೧೫ ಲಕ್ಷ ಸಿಸಿ ರಸ್ತೆ ನಿರ್ಮಾಣ, ಎಸ್‌ಸಿಪಿ-ಟಿಎಸ್‌ಪಿ ಹಾಗೂ ಅಲ್ಪಸಂಖ್ಯಾತರ ಜಂಟಿ ₹೨೪ ಲಕ್ಷ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಸಲಾಗುತ್ತದೆ ಎಂದರು.
ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ, ಉಪಾಧ್ಯಕ್ಷೆ ಷಾಜಿಯಾಖಾನಂ ಜಿಯಾವುಲ್ಲಾ, ಯುವ ಮುಖಂಡ ನಾರಾಯಣಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶಗೌಡ, ಬಿ.ಎನ್.ಗೋಪಾಲಗೌಡ, ಸದಸ್ಯರಾದ ಶಬಿರ್, ನರಸಿಂಹಮೂರ್ತಿ, ಆನಂದ್, ಕೃಷ್ಣಪ್ಪ, ನಾರಾಯಣಪ್ಪ ಇತರರಿದ್ದರು.(ಫೋಟೋ ಕ್ಯಾಪ್ಷನ್)
ಸೂಲಿಬೆಲೆ ೬ನೇ ವಾರ್ಡಿನಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಗುದ್ದಲಿಪೂಜೆ ನೆರವೇರಿಸಿದರು,