ಕನ್ನಡಪ್ರಭ ವಾರ್ತೆ ಚಾಮರಾಜನಗರ
ಇದೇ ವೇಳೆ ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಎಂ.ಎಸ್.ರವಿಶಂಕರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳು ಜರುಗುತ್ತಿದ್ದು, ಒಂದು ಹೆಮ್ಮೆಯ ಸಂಗತಿ, ಸ್ವಸಹಾಯ ಸಂಘಗಳಿಂದ ಸಾಲಸೌಲಭ್ಯ, ವಸತಿರಹಿತರಿಗೆ ಮನೆನಿರ್ಮಾಣ, ಶಾಲೆಗಳಿಗೆ ಶಿಕ್ಷಕರ ನೇಮಕ, ಇಂತಹ ಜನಪರ ಕಾರ್ಯಕ್ರಮಗಳ ಜತೆಗೆ ಧರ್ಮಸ್ಥಳ ಧರ್ಮಾಧಿಕಾರಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಮೀಣ ಭಾಗದ ರೈತಾಪಿ ವರ್ಗದವರ ಬದುಕನ್ನು ಕೇಂದ್ರವಾಗಿರಿಸಿಕೊಂಡು, ಮಳೆಬಂದ ವೇಳೆ ಮಳೆನೀರು ತುಂಬಲು ಹೂಳು ತುಂಬಿರುವ ಕೆರೆಗಳನ್ನು ಗುರ್ತಿಸಿ, ನೀರಿನ ಸಂಗ್ರಹಣೆ ಸಾಮರ್ಥ್ಯ ಹೆಚ್ಚಿಸಲು ಕೆರೆಕಟ್ಟೆ ಹೂಳೆತ್ತಿಸುವ ಕಾರ್ಯಕ್ರಮಕ್ಕೆ ದಶಕಗಳ ಹಿಂದೆಯೇ ಚಾಲನೆ ನೀಡಿದ್ದಾರೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಿರ್ಗತಿಕರಿಗೆ ಮಾಸಾಶನ, ಒಂದೂವರೆ ಲಕ್ಷ ರು.ವೆಚ್ಚದಲ್ಲಿ ವಾತ್ಸಲ್ಯಮನೆ ನಿರ್ಮಾಣ, ಸುಜ್ಞಾನ ನಿಧಿಯೋಜನೆಯಡಿ ಶಿಷ್ಯ ವೇತನ, ಕೆರೆಗಳ ಪುನಚೇತನ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಪ್ರಸ್ತುತ ರಾಜ್ಯಾದ್ಯಂತ 1 ಸಾವಿರ ಕೆರೆಗಳನ್ನು ಹೂಳೆತ್ತುವ ಮೂಲಕ ಪುನಶ್ಚೇತನಗೊಳಿಸಲಾಗಿದೆ. ಉತ್ತಮ ಮಳೆಯಾಗುವ ಮೂಲಕ ಗ್ರಾಮದ ಕೆರೆ ತುಂಬಿ ಅಂತರ್ಜಲ ಹೆಚ್ಚಳವಾಗಿ ಈ ಭಾಗದ ಕೃಷಿಕರು ಉತ್ತಮ ಫಸಲು ಬೆಳೆದು ಸಮೃದ್ಧ ಜೀವನ ನಡೆಸುವಂತಾಗಬೇಕು ಎಂದರು.ಬಸವೇಗೌಡನ ಕಟ್ಟೆ ಕೆರೆ ಸಮಿತಿ ಅಧ್ಯಕ್ಷ ದೇವಣ್ಣ, ಗೌರವಾಧ್ಯಕ್ಷ ನಾಗಣ್ಣ,ಜಿಲ್ಲಾ ಜನಜಾಗೃತಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ರಾಜಶೇಖರರಾಧ್ಯ, ಕೆರೆ ಸಮಿತಿ ಉಪಾಧ್ಯಕ್ಷ ಡೇರಿ ನಾಗೇಶ್, ಎಂಪಿಸಿಎಸ್ ಅಧ್ಯಕ್ಷ ಸಿ.ಎನ್. ಬಾಬು ತಾಲೂಕು ಯೋಜನಾಧಿಕಾರಿ ಶಶಿಕುಮಾರ್, ಕೆರೆನಿರ್ಮಾಣ ಎಂಜಿನಿಯರ್ ಪುಷ್ಪ ರಾಜ್, ವಲಯ ಮೇಲ್ವಿಚಾರಕ ಎಚ್.ಬಿ.ಹರೀಶ್, ಕೃಷಿ ಮೇಲ್ವಿಚಾರಕ ಮಂಜುನಾಥ್, ಸಮಿತಿ ಸದಸ್ಯರು, ಸೇವಾಪ್ರತಿನಿಧಿ ಪ್ರಕಾಶ್ ಗ್ರಾಮಸ್ಥರು ಭಾಗವಹಿಸಿದ್ದರು.