ಹಿಂದೂ ಸಮಾವೇಶ ನಿತ್ಯವೂ ಆಗಲಿ । ಹಿಂದೂ ಸಮಾವೇಶದ ಸಾನಿಧ್ಯ ವಹಿಸಿ ಆಶೀರ್ವಚನ
ನುಡಿದು ತೋರುವುದಕ್ಕಿಂತ ನಡೆದು ತೋರಿಸಿದರೆ ಪರಿಣಾಮ ಹೆಚ್ಚು ಎಂದು ಬೆಳಗಾವಿಯ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಜಡ್ಡಿಗದ್ದೆಯ ಮಂಡಲ ವ್ಯಾಪ್ತಿಯಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಆಶ್ರಯದಲ್ಲಿ ನಡೆದ ಹಿಂದೂ ಸಮಾವೇಶದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ನಾಲಗೆ ಒಂದು, ಕಾಲುಗಳು ಎರಡು. ಒಂದು ನುಡಿದರೆ ಎರಡರಷ್ಟು ನಡೆದು ತೋರಿಸಬೇಕು. ಹಿಂದೂಗಳನ್ನು ಹತ್ತಿರದಿಂದ ಪ್ರೀತಿಸಬೇಕು. ಹಿಂದುತ್ವ ಗಟ್ಟಿಗೊಳಿಸಿಕೊಳ್ಳಲು ಹಿಂದೂ ಸಮಾವೇಶ ಬೇಕು. ನಾವು ಹಿಂದೂ ಎಂದು ಹೇಳಲು ಯಾರೂ ಹಿಂಜರಿಯಬಾರದು. ಅಭಿಮಾನದಿಂದ ಹಿಂದೂ ಎಂದು ಹೇಳಬೇಕು ಎಂದ ಶ್ರೀಗಳು, ಹಿಂದೂ ಸಮಾವೇಶ ನಿತ್ಯವೂ ಆಗಬೇಕು. ಹೋದಲೆಲ್ಲ ನಾಲ್ಕು ಜನ ಸೇರಿದಲ್ಲಿ ಸಂಸ್ಕೃತಿ, ದೇಶದ ಬಗ್ಗೆ ಮಾತನಾಡಬೇಕು ಎಂದರು.ಹಿಂದೂಗಳ ಹೊಸ ವರ್ಷ ಯುಗಾದಿ ದಿನದಂದು ಎಲ್ಲ ಹಿಂದೂಗಳ ಮನೆಗೆ ತೆರಳಿ ಬೇವು-ಬೆಲ್ಲ ಕೊಟ್ಟು ಪ್ರೀತಿಯಿಂದ ಜೊತೆ ಮಾತಾಡಿದರೆ ಅವರು ಎಂದೂ ಎಂಥ ವೇಳೆಯೂ ಮತಾಂತರ ಆಗುವುದಿಲ್ಲ ಎಂದ ಶ್ರೀಗಳು, ಎತ್ತರದಿಂದ ಇರುವುದು ಬಿಟ್ಟು ಹತ್ತಿರದಿಂದ ಇರಬೇಕು ಎಂದರು.ಹಿಂದೂಗಳನ್ನು ಆರ್ಥಿಕ, ಸಾಮಾಜಿಕ, ಧಾರ್ಮಿಕವಾಗಿ ಬೆಳೆಸಿದರೆ ಹಿಂದುತ್ವ ದೇಶ ಉಳಿಯುತ್ತದೆ ಎಂದರು.ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿದ ವಿಶ್ವ ಹಿಂದೂ ಪರಿಷತ್‌ನ ರಾಜ್ಯ ಸಂಚಾಲಕ ಸೂರ್ಯನಾರಾಯಣ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹುಟ್ಟು, ಬೆಳವಣಿಗೆ, ಅಂದಿನ ಅವಶ್ಯಕತೆ, ಕಾರ್ಯ ವಿಸ್ತಾರ ತಿಳಿಸಿದರು.ಈ ವೇಳೆ ಜಡ್ಡಿಗದ್ದೆ ಮಂಡಲದ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಅಧ್ಯಕ್ಷ ಶಿವರಾಮ ನಾ. ಭಟ್ಟ, ಹೊಸ್ಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಗ್ರಾಮದ ಪ್ರಮುಖರಾಗಿ ಗಿರಿಜಾ ಹೆಗಡೆ ಹಾಗೂ ರತ್ನಾವತಿ ನಾಯ್ಕ ಉಪಸ್ಥಿತರಿದ್ದರು. ಸೀಮಾ ವೈದಿಕ ಪರಿಷತ್ ಪ್ರಮುಖರು ವೇದಘೋಷ ಮಾಡಿದರು.ಶಿವರಾಮ ಭಟ್ಟ ಪ್ರಕಾಶ ಪೂಜಾರಿ, ನಾರಾಯಣ ಭಟ್ಟ, ಮಂಜು ಪೂಜಾರಿ ಶ್ರೀಗಳಿಗೆ ಫಲಸಮರ್ಪಣೆ ಮಾಡಿದರು. ರಾಘವೇಂದ್ರ ಹೆಗಡೆ ಮೆಣಸಿ ಸೀಮೆಯ ವಿಶೇಷ ಕಾಳುಮೆಣಸು ನೀಡಿದರು. ಭಾಗವತ ತುಳಗೇರಿ ಗಜಾನನ ಭಟ್ಟ ಪ್ರಾರ್ಥಿಸಿದರು. ಭಗವದ್ಗೀತೆಯ ಪಠಣ ಕೂಡ ನಡೆಯಿತು. ಶಿವರಾಮ ಭಟ್ ಸ್ವಾಗತಿಸಿದರು. ಪ್ರವೀಣ ಮಣ್ಮನೆ ಪ್ರಾಸ್ತಾವಿಕ ಮಾತನಾಡಿದರು. ಪಿ.ಜಿ. ಹೆಗಡೆ ನಿರ್ವಹಿಸಿದರು. ಚೈತ್ರ ಭಟ್ಟ ದೇಶಭಕ್ತಿಗೀತೆ ಹಾಡಿದರು. ಅರವಿಂದ ಹೆಗಡೆ ನಿರ್ಣಯ ಮಂಡಿಸಿದರು. ರಮೇಶ ಪೂಜಾರಿ ವಂದಿಸಿದರುಕಾರ್ಯಕ್ರಮದ ಅಂಗವಾಗಿ ಜಡ್ಡಿಗದ್ದೆಯ ದೇವಸ್ಥಾನದ ಆವರಣದಿಂದ ಸಮಾವೇಶ ನಡೆಯುವ ಸ್ಥಳದವರೆಗೆ ಭಾರತ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಿತು. ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಸೇರಿದಂತೆ ಐನೂರಕ್ಕೂ ಅಧಿಕ ಜನರು ಭಾಗವಹಿಸಿದ್ದರು.ಸಮಾವೇಶದ ನಿರ್ಣಯಗಳುಹಿಂದೂ ಧರ್ಮದ ರಕ್ಷಣೆ, ಮಠ, ಮಂದಿರ, ಗೋವುಗಳ ಹಾಗೂ ಮಾತೃ ರಕ್ಷಣೆ ಪೂರ್ವಿಕರಿಂದ ಬಂದ ಎಲ್ಲಾ ಚರ, ಸ್ಥಿರ ಆಸ್ತಿಗಳ ಅಭಿವೃದ್ಧಿ ಪಡಿಸುತ್ತ ಸಂರಕ್ಷಿಸುವ ಜವಬ್ದಾರಿನಮ್ಮ ನೆಲ, ಜಲ, ಸಂಸ್ಕೃತಿ, ಸಂಪ್ರದಾಯ ರಕ್ಷಣೆಪರಿಸರಕ್ಕೆ ಮಾರಕವಾದ ಬೇಡ್ತಿ ಅಘನಾಶಿನಿ ಶರಾವತಿ ನದಿ ತಿರುವು ಯೋಜನೆ ತಡೆಗೆ ಎಂತಹ ಸ್ಥಿತಿಗೂ ಸಿದ್ದ.ವ್ಯಸನಮುಕ್ತ ಸಮಾಜ ರಚನೆಗೆ ಬದ್ಧತೆಸ್ವದೇಶಿ ವಸ್ತು ಬಳಕೆಗೆ ಸಂಕಲ್ಪ