ರೋಗಿಗೆ ಚಿಕಿತ್ಸೆಯೊಂದಿಗೆ ಕರುಣೆ, ಪ್ರೀತಿಯೂ ತೋರಿಸಿ

KannadaprabhaNewsNetwork | Published : Apr 13, 2025 2:09 AM

ಸಾರಾಂಶ

ರೋಗಿಗಳಿಗೆ ವೈದ್ಯರ ಚಿಕಿತ್ಸೆ ಜೊತೆಗೆ ಮಾನವೀಯತೆ, ಕರುಣಿ, ಪ್ರೀತಿ ಕೂಡ ಅತ್ಯಗತ್ಯವಾಗಿ ಮುಖ್ಯವಾಗಿದ್ದು ಯುವ ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ರಾಜೀವ್ ಗಾಂಧಿ ಯೂನಿವರ್ಸಿಟಿ ಉಪ ಕುಲಪತಿ ಡಾ.ಬಿ.ಸಿ.ಭಗವಾನ್ ತಿಳಿಸಿದರು.

ಕನ್ನಡಪ್ರಭವಾರ್ತೆ ಹೊಸಕೋಟೆ

ರೋಗಿಗಳಿಗೆ ವೈದ್ಯರ ಚಿಕಿತ್ಸೆ ಜೊತೆಗೆ ಮಾನವೀಯತೆ, ಕರುಣಿ, ಪ್ರೀತಿ ಕೂಡ ಅತ್ಯಗತ್ಯವಾಗಿ ಮುಖ್ಯವಾಗಿದ್ದು ಯುವ ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ರಾಜೀವ್ ಗಾಂಧಿ ಯೂನಿವರ್ಸಿಟಿ ಉಪ ಕುಲಪತಿ ಡಾ.ಬಿ.ಸಿ.ಭಗವಾನ್ ತಿಳಿಸಿದರು.

ನಗರದ ಎಂವಿಜೆ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವೈದ್ಯ ವಿದ್ಯಾರ್ಥಿಗಳ ೧೬ನೇ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.

ವೈದ್ಯಕೀಯ ಶಿಕ್ಷಣ ಮುಗಿಸಿ ವೈದ್ಯ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿರುವವರಿಗೆ ಜೀವನದಲ್ಲಿ ಸಾಧನೆ ಒಂದು ಭಾಗವಾದರೆ ನಿಮ್ಮನ್ನು ಈ ಸಾಧನೆಯತ್ತ ದಾಪುಗಾಲಿಡಲು ಅವಿರತ ಶ್ರಮಿಸಿದ ಪೋಷಕರು, ಉಪನ್ಯಾಸಕರನ್ನು ಜೀವನ ಪರ್ಯಂತ ಸ್ಮರಿಸಬೇಕು. ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಪ್ರಪಂಚ ವೇಗವಾಗಿ ಬೆಳೆಯುತ್ತಿದ್ದು ಪ್ರಪಂಚ ಬದಲಾಗುತ್ತಿದ್ದೆ. ಎಐ, ನ್ಯಾನೋ ತಂತ್ರಜ್ಞಾನ ಮಾನವ ಸಂಪನ್ಮೂಲದ ಕೆಲಸ ಕಸಿಯಲಿದೆ. ಆದ್ದರಿಂದ ನೀವು ಕೂಡ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಬಳಸಿಕೊಂಡು ಬದಲಾಗುವ ತಯಾರಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಂವಿಜೆ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಆಸ್ಪತ್ರೆ ವ್ಯವಸ್ಥಾಪಕ ಡಾ.ಮೋಹನ್ ಮಾತನಾಡಿ, ವೈದ್ಯಕೀಯ ವೃತ್ತಿ ಅತ್ಯಂತ ಶ್ರೇಷ್ಠವಾದುದು. ರೋಗಿಗಳ ಪಾಲಿಗೆ ವೈದ್ಯರೇ ದೇವರಾಗಿರುತ್ತಾರೆ. ರೋಗ ಸಮಸ್ಯೆಯ ಆಳ ಅಗಲ ಅರಿತು ಚಿಕಿತ್ಸೆ ನೀಡಬೇಕು. ಕೇವಲ ಹಣ ಸಂಪಾದನೆಗೆ ಆದ್ಯತೆ ನೀಡದೆ, ಸೇವಾ ಮನೋಭಾವದ ದೃಷ್ಠಿಯಿಂದ ರೋಗಿಯನ್ನು ಸತ್ಕರಿಸಬೇಕು. ವೈದ್ಯರಿಗೆ ಹೆಚ್ಚು ಅವಕಾಶಗಳಿವೆ. ತಮ್ಮ ವೃತ್ತಿಯನ್ನು ಆರೋಗ್ಯಕರ ಸಮಾಜ ನಿರ್ಮಾಣ ಮಾಡುವತ್ತ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಾಂಶುಪಾಲ ಡಾ.ರವೀಚಂದ್ರ ಪದವಿ ಪಡೆದ 150 ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅತಿ ಹೆಚ್ಚು ಅಂಕ ಪಡೆದ ಹಾಗೂ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪಾರಿತೋಷಕ, ಬಹುಮಾನ ವಿತರಿಸಿದರು. ಎಂವಿಜೆ ವೈದ್ಯಕೀಯ ಕಾಲೇಜು ಹಾಗು ಸಂಶೋಧನಾ ಆಸ್ಪತ್ರೆ ಸಿಇಒ ಡಾ.ಧರಣಿ ಮೋಹನ್, ಉಪ ಪ್ರಾಂಶುಪಾಲ ಡಾ.ದಯಾನಂದ್, ಮೇಲ್ವಿಚಾರಕ ಡಾ.ವಸಂತ್ ಕುಮಾರ್, ರೋಟರಿ ಝೋನಲ್ ಛರ‍್ಮನ್ ಡಿ.ಎಸ್.ರಾಜ್ ಕುಮಾರ್, ಆಸ್ಪತ್ರೆ ಆಡಳಿತ ವೈಧ್ಯಾಧಿಕಾರಿ ಡಾ.ಪ್ರಮೋದ್, ಡಾ.ಅಂಜನ್‌ರೆಡ್ಡಿ ಹಾಜರಿದ್ದರು.

Share this article