ಹಿರಿಯ ನಾಗರಿಕರನ್ನು ಕೊನೆಗಾಲದಲ್ಲಿ ಪಾಲನೆ ಪೋಷಣೆ ಮಾಡಬೇಕು. ಆ ಮೂಲಕ ಅವರಿಗೆ ಶಾಂತಿ, ನೆಮ್ಮದಿ ಕೂಡಬೇಕು. ಪ್ರತಿಯೊಬ್ಬರು ಇದನ್ನು ಅರಿತು ಬಾಳಬೇಕು. 60 ವರ್ಷ ತುಂಬಿದ ಎಲ್ಲಾ ಹಿರಿಯರಿಗೆ ವೃದ್ಧಾಪ್ಯ ವೇತನ ಜಾರಿ ಮಾಡಿರುವುದು ಅನುಕೂಲವಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಇತ್ತೀಚೆಗೆ ಹಿರಿಯ ನಾಗರಿಕರನ್ನು ಸಂಪೂರ್ಣ ಕಡೆಗಣಿಸಲಾಗುತ್ತಿದೆ. ಅವರಿಗೆ ಪ್ರೀತಿ, ವಿಶ್ವಾಸ ತೋರಿಸಿ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಬಾಬು ಅಭಿಪ್ರಾಯಪಟ್ಟರು.ಪಟ್ಟಣದ ತಾಪಂ ಆವರಣದಲ್ಲಿ ಜಿಲ್ಲಾ ವಿಶೇಷಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಆರೋಗ್ಯ ಇಲಾಖೆ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಆಶ್ರಯದಲ್ಲಿ ನಡೆದ ಹಿರಿಯ ನಾಗರಿಕರ ಹಾಗೂ ಮಾನಸಿಕ ಆರೋಗ್ಯ ದಿನ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ನಾಗರಿಕರನ್ನು ಕೊನೆಗಾಲದಲ್ಲಿ ಪಾಲನೆ ಪೋಷಣೆ ಮಾಡಬೇಕು. ಆ ಮೂಲಕ ಅವರಿಗೆ ಶಾಂತಿ, ನೆಮ್ಮದಿ ಕೂಡಬೇಕು. ಪ್ರತಿಯೊಬ್ಬರು ಇದನ್ನು ಅರಿತು ಬಾಳಬೇಕು. 60 ವರ್ಷ ತುಂಬಿದ ಎಲ್ಲಾ ಹಿರಿಯರಿಗೆ ವೃದ್ಧಾಪ್ಯ ವೇತನ ಜಾರಿ ಮಾಡಿರುವುದು ಅನುಕೂಲವಾಗಿದೆ ಎಂದರು.
ತಾಪಂ ಇಒ ಎಂ.ಎಸ್.ವೀಣಾ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅನೇಕ ಸೌಲಭ್ಯಗಳನ್ನು ಸರ್ಕಾರದಿಂದ ಹಿರಿಯ ನಾಗರಿಕರಿಗೆ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ವಿದ್ಯಾವಂತರು ಹೆಚ್ಚಾಗಿ ಹಿರಿಯ ನಾಗರಿಕರನ್ನು ವೃದ್ಧಾಶ್ರಮ, ಅನಾಥಶ್ರಮಕ್ಕೆ ಸೇರುತ್ತಿದ್ದಾರೆ. ಎಲ್ಲಿದೆ ಸಂಸ್ಕಾರ, ವಿದ್ಯಾವಂತರು ಹಿರಿಯರನ್ನು ಕಡೆಗಣಿಸುತ್ತಾರೆ. ಅದಕ್ಕಾಗಿ ವಿದ್ಯೆ ಜತೆಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದರು.
ವಕೀಲ ಕೆ.ಎಸ್.ಮನು ಅವರು ನಾಗರಿಕರ ಹಿರಿಯ ಕಾಯಿದೆ ಸಂರಕ್ಷಣೆ ಬಗ್ಗೆ ನ್ಯಾಯಾಲಯದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಗಂಗರಾಜು, ಕಾರ್ಯದರ್ಶಿ ಕೆ.ಎಸ್.ಮೋಹನ್ ಕುಮಾರ್, ಜಿಲ್ಲಾ ವೈದ್ಯಾಧಿಕಾರಿ ಡಾ.ಪುಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪೂರ್ಣಿಮ, ಡಾ.ಸುಗುಣ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.