ಕಾಂಗ್ರೆಸ್‌ಗೆ ಮತ್ತೊಮ್ಮೆ ಅನುಕಂಪ ತೋರಿ: ಅಭ್ಯರ್ಥಿ ವೇಣುಗೋಪಾಲ

KannadaprabhaNewsNetwork |  
Published : Apr 04, 2024, 01:01 AM IST
ಹುಣಸಗಿ ತಾಲೂಕಿನ ಬರದೇವನಾಳ, ಯರಕಿಹಾಳ ಗ್ರಾಮಗಳು ಸೇರಿದಂತೆ ವಿವಿಧ ತಾಂಡಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಪ್ರಚಾರ ನಡೆಸಿದರು. | Kannada Prabha

ಸಾರಾಂಶ

ಹುಣಸಗಿ ತಾಲೂಕಿನ ಬರದೇವನಾಳ, ಯರಕಿಹಾಳ ಗ್ರಾಮಗಳು ಸೇರಿದಂತೆ ವಿವಿಧ ತಾಂಡಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಪ್ರಚಾರ ನಡೆಸಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ನಮ್ಮ ತಂದೆ ದಿ.ರಾಜಾ ವೆಂಕಟಪ್ಪ ನಾಯಕ ಅವರು ಜನಪರ ಕೆಲಸಗಳ ಮಾಡಲು ಆಸೆ ಇಟ್ಟುಕೊಂಡಿದ್ದರು. ಅಧಿಕಾರ ಪಡೆದು ಕೆಲವೇ ತಿಂಗಳಲ್ಲಿ ನಮ್ಮನ್ನು ಅಗಲಿದ್ದು, ತೀವ್ರ ನೋವು ತಂದಿದೆ. ಹೀಗಾಗಿ ಈ ಉಪಚುನಾವಣೆಯಲ್ಲಿ ಮತಬಾಂಧವರು ನನಗೆ ಅನುಕಂಪ ತೋರಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಹೇಳಿದರು.ತಾಲೂಕಿನ ಬರದೇವನಾಳ, ಯರಕಿಹಾಳ-ತಾಂಡ, ಕುರೇಕನಾಳ-ತಾಂಡ, ರೇವನಾಯ್ಕ ತಾಂಡ, ಉಪ್ಪಲದಿನ್ನಿ ಹಾಗೂ ತಾಂಡ, ಮಾವಿನಗಿಡ ತಾಂಡಾ, ಜಾಲಿಗಿಡ ತಾಂಡ ಹಾಗೂ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು.

ಕ್ಷೇತ್ರದ ಜನರಿಗೆ ಶಾಂತಿ ಮುಖ್ಯ. ಪ್ರತಿಯೊಂದು ಜನಾಂಗದ ನೋವು ನಲಿವಿಗೆ ಭಾಗಿಯಾಗುತ್ತೇನೆ. ಸರ್ವಜನಾಂಗದ ಏಳ್ಗೆಗಾಗಿ ಶ್ರಮಿಸುತ್ತೇನೆ. ಪಾರದರ್ಶಕ ಆಡಳಿತ ನೀಡಲು ನನಗೆ ಆರ್ಶೀವದಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಒಳ್ಳೆಯ ಆಡಳಿತ ನಡೆಸಿಕೊಂಡು ಬರುತ್ತಿದೆ. ಜನರಿಗೆ ಈಗಾಗಲೇ ನೀಡಿದ ಭರವಸೆಗಳು ತಲುಪಿವೆ. ಇನ್ಮುಂದೆ ಜನರ ಶ್ರೇಯಾಭಿವೃದ್ಧಿಯೇ ನಮ್ಮ ಗುರಿಯಾಗಿದೆ. ಬಿಜೆಪಿ ಅವರ ಬಗ್ಗೆ ಏನೂ ಮಾತನಾಡುವುದಿಲ್ಲ. ಏನಿದ್ದರೂ ಜನರಿಗೆ ಸುಭದ್ರ ಸೇವೆ ನೀಡುವುದಾಗಿದೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ಜನಸಾಮಾನ್ಯರಿಗೆ ಯಾವುದೇ ಕೆಲಸ ಮಾಡಿಲ್ಲ. ಅವರಿಗೆ ಕೆಲಸ ಇಲ್ಲದೆ, ಕಾಂಗ್ರೆಸ್‌ನವರ ಬಗ್ಗೆ ಟೀಕೆ ಮಾಡುತ್ತಾರೆ ಎಂದು ಕುಟುಕಿದ ಅವರು, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಜನರು ಆರ್ಶೀವದಿಸಿ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರನ್ನು ಗೆಲ್ಲಿಸಬೇಕು ಎಂದರು.

ಈ ವೇಳೆ ಬಿಜೆಪಿ ವಿವಿಧ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ರಾಜಾ ಕೃಷ್ಣಪ್ಪನಾಯಕ, ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ರಾಜಾ ಕುಮಾರ ನಾಯಕ, ಪ್ರಚಾರ ಸಮಿತಿ ಅಧ್ಯಕ್ಷ ಆರ್.ಎಂ. ರೇವಡಿ, ಮಲ್ಲಣ್ಣ ಸಾಹು ಮುಧೋಳ, ಬಿ.ಎಂ. ಬಳಿ, ದೊಡ್ಡ ದೇಸಾಯಿ, ನಿಂಗರಾಜ ಬಾಚಿಮಟ್ಟಿ, ಬಸವರಾಜ ಸಜ್ಜನ್, ರವಿ ಸಾಹುಕಾರ ಆಲ್ದಾರ, ನಿಂಗಾನಾಯ್ಕ ರಾಠೋಡ, ಹಣಮಂತ್ರಾಯ ಪೂಜಾರಿ, ಎ.ಜಿ. ಕುಂಬಾರ, ಉಮೇಶ ಯರಕಿಹಾಳ ತಾಂಡ, ಕೃಷ್ಣಾ ಜಾಧವ ಸೇರಿದಂತೆ ಇತರರಿದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ