ಇದು ಹಸಿರು ಗೂಡುದೀಪ!

KannadaprabhaNewsNetwork |  
Published : Nov 12, 2023, 01:00 AM ISTUpdated : Nov 12, 2023, 01:01 AM IST
ಫೋಟೋ ಃ ಹಸಿರು ಗೂಡುದೀಪ | Kannada Prabha

ಸಾರಾಂಶ

ಉಡುಪಿಯಲ್ಲಿ ವಿಶಿಷ್ಟವಾದ ಹಸಿರು ಗೂಡುದೀಪ!

ಉಡುಪಿ: ಸರ್ಕಾರ ಪರಿಸರಪೂರಕ ಹಸಿರು ಪಟಾಕಿ ಬಳಸಲು ಸೂಚಿಸಿದೆ. ಅದಕ್ಕೆ ಪೂರಕ ಎಂಬಂತೆ ಇಲ್ಲಿನ ಯುವಕನೊಬ್ಬ ಪ್ರಕೃತಿಯಲ್ಲಿ ಸಿಗುವ ವಸ್ತುಗಳಲ್ಲಿ ಬಳಸಿ ಹಸಿರು ಗೂಡುದೀಪ ತಯಾರಿಸಿ ಗಮನ ಸೆಳೆದಿದ್ದಾರೆ.

ಇಲ್ಲಿನ ಪರ್ಕಳದ ಅರ್ಜುನ ಯುವಕ ಮಂಡಲದ ವತಿಯಿಂದ ಆಯೋಜಿಸಲಾಗಿದ್ದ ಗೂಡುದೀಪ ಸ್ಪರ್ಧೆಯಲ್ಲಿ ಸರಳೇಬೆಟ್ಟುವಿನ ನಿವಾಸಿ ಶ್ರವಣ್ ನಾಯಕ್ ತೆಂಗಿನಮರದ ಗರಿಯಲ್ಲಿ ತಯಾರಿಸಿದ ಈ ಗೂಡುದೀಪವನ್ನು ಪ್ರದರ್ಶಿಸಿದ್ದರು. ಸಾಂಪ್ರದಾಯಿಕ ಗೂಡುದೀಪಗಳ ಆಕಾರದಲ್ಲಿ ತೆಂಗಿನ ಮರದ ಬಲಿತ ಮತ್ತು ಎಳೆಯ ಗರಿಗಳನ್ನು ಹೆಣೆದು ತಯಾರಿಸಿದ್ದಾರೆ. ಉಡುಪಿಯ ನ್ಯೂಸಿಟಿ ನರ್ಸಿಂಗ್ ಕಾಲೇಜಿನ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಯಾಗಿರುವ ಶ್ರವಣ್ ಕಾಲೇಜಿನಲ್ಲಿ ನಡೆಸಿದ ಸ್ವರ್ಧೆಯಲ್ಲಿ ದ್ವೀತೀಯ ಸ್ಥಾನ ಕೂಡ ಪಡೆದಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ