
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಕುಂಚಾವರಂ ವೆಂಕಟಾಪುರ್ ಚಂದಾಪುರ್ ಸಾಲೆಬೀರನಳ್ಳಿ, ದೇಗಲಮಡಿ, ಐನೊಳ್ಳಿ, ಸುಲೇಪೇಟ, ಚಂದನಕೇರಾ, ಗಡಿನಿಂಗದಳ್ಳಿ, ಚೆನ್ನೂರ್, ಸಲಗರ ಬಸಂತಪುರ್, ಚಿಂಚೋಳಿ ಪಟ್ಟಣದ ಬಡಿದರ್ಗ ಬೈರಗಲ್ಲಿ ಚಂದಾಪುರ ಹನುಮಾನ್ ದೇವಸ್ಥಾನದ ಭಕ್ತರು ಬೆಳಗಿಂದಲೇ ಆಗಮಿಸಿ, ಆಂಜನೇಯನಿಗೆ ವಿಶೇಷ ಪೂಜೆ ನೈವೇದ್ಯ, ಜಲಅಭಿಷೇಕ, ಹಾಲಿನ ಅಭಿಷೇಕ ಮಾಡಿದರು. ಶ್ರಾವಣ ಮಾಸದ ಕೊನೆ ದಿನ ಆಗಿರುವುದರಿಂದ ತಾಲೂಕಿನ ವೀರಭದ್ರೇಶ್ವರ ದೇವಸ್ಥಾನ, ಭಕ್ತಪ್ರಭು ದೇವಸ್ಥಾನ, ಮಹಾಂತೇಶ್ವರ ಮಠ, ಅಂಬುರಾಮೇಶ್ವರ, ಕರಕನಳ್ಳಿ ಭಕ್ಕಪ್ರಭು ದೇವಸ್ಥಾನಗಳಲ್ಲಿ, ಸುಲೇಪೇಟ ವೀರಭದ್ರೇಶ್ವರ ದೇವಾಲಯ, ಮೊಘಾ ರಾಮಲಿಂಗೇಶ್ವರ ದೇವಸ್ಥಾನ, ದೇಗಲಮಡಿ ಸಂಗಮೇಶ್ವರ ದೇವಸ್ಥಾನ, ಕೊಡ್ಲಿ ಒಡೆಯ ಹನುಮಾನ ದೇವಾಲಯ ವಿಶೇಷ ಪೂಜೆಗಳು ಭಜನೆ ನಡೆದವು.
ಅನೇಕ ದೇವಾಲಯಗಳನ್ನು ದೀಪಗಳ ಅಲಂಕಾರ ತಳಿರುತೋರಣಗಳಿಂದ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಅನೇಕ ಕ್ಷೇತ್ರಗಳಲ್ಲಿ ಭಕ್ತರು ಹರಕೆ ಸಲ್ಲಿಸಿ ಪ್ರಾರ್ಥನೆ ನೆರವೇರಿಸಿದರು.ಅಣವಾರ ಶಾದಿಪುರ್, ಬೋಮ್ಮನಳ್ಳಿ ಗ್ರಾಮದ ಹನುಮಾನ್ ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ, ಭಜನೆ ಹಾಗೂ ಹೋಮ ನೆರವೇರಿದವು. ಸಂಗಮೇಶ್ ಕಲ್ವ, ಲಿಂಬಾಜೀ ಚೌವ್ಹಾಣ್, ವಿಜಯಕುಮಾರ್ ರಾಠೋಡ್, ರಾಜು ರಾಥೋಡ್ ಚೇರಮನ, ಎಲ್.ವೆಂಕಟರೆಡ್ಡಿ, ಗೋವಿಂದ ರಾಠೋಡ್, ಎಮ.ಭೀಮಶೆಟ್ಟಿ, ಮಲ್ಲಯ್ಯ ಸ್ವಾಮಿ ಇನ್ನಿತರರಿದ್ದರು.