ರಂಭಾಪುರಿ ಪೀಠದಲ್ಲಿ 5 ರಿಂದ ಶ್ರಾವಣ ತಪೋನುಷ್ಠಾನ

KannadaprabhaNewsNetwork |  
Published : Aug 03, 2024, 12:44 AM IST
೦೨ಬಿಹೆಚ್‌ಆರ್ ೬: ಇಷ್ಟಲಿಂಗ ಪೂಜಾನಿರತ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು. | Kannada Prabha

ಸಾರಾಂಶ

ಬಾಳೆಹೊನ್ನೂರು, ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಮ್ಮ 33ನೇ ವರ್ಷದ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನವನ್ನು ಆ. 5ರಿಂದ ಸೆ.2ರವರೆಗೆ ನಡೆಸುವರು ಎಂದು ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡರ್ ತಿಳಿಸಿದ್ದಾರೆ.

ತ್ರಿಕಾಲ ಇಷ್ಟಲಿಂಗ ಪೂಜಾನುಷ್ಠಾನ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಮ್ಮ 33ನೇ ವರ್ಷದ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನವನ್ನು ಆ. 5ರಿಂದ ಸೆ.2ರವರೆಗೆ ನಡೆಸುವರು ಎಂದು ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡರ್ ತಿಳಿಸಿದ್ದಾರೆ. ಜಗದ್ಗುರುಗಳ ಶ್ರಾವಣ ತಪೋನುಷ್ಠಾನದ ಅಂಗವಾಗಿ ಮಲಯಾಚಲ ತಪೋಭೂಮಿ ಬಾಳೆಹೊನ್ನೂರಿನ ಶ್ರೀ ಜಗದ್ಗುರು ರಂಭಾಪುರಿ ಮಹಾಸಂಸ್ಥಾನ ಪೀಠದಲ್ಲಿ ತ್ರಿಕಾಲ ಇಷ್ಟಲಿಂಗ ಪೂಜಾನುಷ್ಠಾನ ನಡೆಯಲಿದ್ದು, ಪ್ರತಿ ದಿನ ಬೆಳಿಗ್ಗೆ 8.30ಕ್ಕೆ ನಡೆಸುವ ಮಹಾಪೂಜೆಯಲ್ಲಿ ಸೇವಾಕರ್ತರು, ಭಕ್ತರಿಗೆ ಪಾಲ್ಗೊಳ್ಳಲು ಅವಕಾಶವಿದೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ.8ರಂದು ಲಿಂ. ಶ್ರೀ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ 77ನೇ ವರ್ಷದ ಪುಣ್ಯ ಸ್ಮರಣೋತ್ಸವ ನಡೆಯಲಿದ್ದು, ಖಾಂಡ್ಯ ಮತ್ತು ಜಾಗರ ಹೋಬಳಿ ಶಿಷ್ಯ ಸದ್ಭಕ್ತರಿಂದ ದಾಸೋಹ ಸೇವೆ ನಡೆಯಲಿದೆ.

ಆ.12ರಂದು ಲಿಂ. ಶ್ರೀ ರಂಭಾಪುರಿ ಜಗದ್ಗುರು ವೀರ ರುದ್ರಮುನಿ ದೇವ ಶಿವಾಚಾರ್ಯ ಭಗವತ್ಪಾದರ ೩೨ನೇ ವರ್ಷದ ಪುಣ್ಯ ಸ್ಮರಣೋತ್ಸವ ನಡೆಯಲಿದ್ದು, ಆಲ್ದೂರು ಹೋಬಳಿ ವೀರಶೈವ ಸಮಾಜದಿಂದ ಪೂಜಾ, ದಾಸೋಹ ಸೇವೆ ನಡೆಯಲಿದೆ. ಶ್ರಾವಣ ಮಾಸ ಪರ್ಯಂತರ ಮಹಾರುದ್ರಾಭಿಷೇಕ ಹಾಗೂ ಸಿಹಿ ಪ್ರಸಾದ ವಿತರಣೆ ಸೇವೆ ಭದ್ರಾವತಿ ಲಿಂ.ಎಸ್.ಜಿ. ಶಿವಶಂಕರಯ್ಯ ಮಕ್ಕಳು ನೆರವೇರಿಸುವರು.ಶ್ರಾವಣ ಮಾಸದಲ್ಲಿ ಪ್ರತಿ ದಿನ ಸಂಜೆ 7 ಕ್ಕೆ ಮಹಾರಾಷ್ಟ್ರದ ಉಟಗಿ ಹಿರೇಮಠದ ಶಿವಪ್ರಸಾದ ಅವರಿಂದ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ನಡೆಯಲಿದ್ದು ಆಗಮಿಸುವ ಪಟ್ಟಾಧ್ಯಕ್ಷರು ಹಾಗೂ ವಾಗ್ಮಿಗಳಿಂದ ನುಡಿ ಸೇವೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವಿದೆ. ಪ್ರತಿ ಸೋಮವಾರ ಹಾಗೂ ಗುರುವಾರ ರಂಭಾಪುರಿ ಜಗದ್ಗುರು ಶುಭಾಶೀರ್ವಾದ ಸಂದೇಶ ಅನುಗ್ರಹಿಸುವರು.ಪ್ರತಿ ನಿತ್ಯ ಪ್ರಾತಃಕಾಲದಲ್ಲಿ ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ, ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ, ಶಕ್ತಿಮಾತೆ ಚೌಡೇಶ್ವರಿ-ಭದ್ರಕಾಳಿ, ಪಾರ್ವತಿ ಅಮ್ಮನವರಿಗೆ ಹಾಗೂ ಲಿಂಗೈಕ್ಯ ಜಗದ್ಗುರುಗಳ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಲ ವಿಶೇಷ ಪೂಜೆ ನಡೆಯುವುದು.ಶ್ರಾವಣ ಪರ್ಯಂತ ಪುರಾಣ ಪೂಜಾ ಸೇವೆಯನ್ನು ಬೆಂಗಳೂರಿನ ಲತಾ ಡಾ.ಬಸವರಾಜ ಜಿಗಳೂರ, ಗದ್ದಿಗೆ ಹೂವಿನ ಸೇವೆಯನ್ನು ಚಿಕ್ಕಮಗಳೂರಿನ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್, ದಾಸೋಹ ಸೇವೆಯನ್ನು ಗದಗ ಬೆಟಗೇರಿ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರ ಟ್ರಸ್ಟ್‌ ನ ಹೂವಿನ ಸೇವೆ, ಭದ್ರಾವತಿಯ ಎಸ್.ಎಸ್.ಉಮೇಶ್, ಕ್ಷೀರಾಭಿಷೇಕ ಸೇವೆಯನ್ನು ಬೆಂಗಳೂರಿನ ಆರ್.ಗಣೇಶಕುಮಾರ್ ಹಾಗೂ ಪತ್ರಿಕಾ ಮುದ್ರಣ ಸೇವೆಯನ್ನು ಚಿಕ್ಕಮಗಳೂರಿನ ಶ್ರೀ ದೇವ ಮತ್ತು ಕೋ ಇವರು ನೆರವೇರಿಸಲಿದ್ದಾರೆ.೦೨ಬಿಹೆಚ್‌ಆರ್ ೬: ಇಷ್ಟಲಿಂಗ ಪೂಜಾನಿರತ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ