ಮಂಗಳೂರು : ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆಗೈದಿರುವ ಕು. ಶ್ರಾವ್ಯ ಬಿ.ಎಸ್ ಅ.23 ರಂದು ಮಂಗಳೂರಿನ ಪುರಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ರಂಗಪ್ರವೇಶಗೈಯ್ಯಲಿದ್ದಾರೆ.
ಮೈಸೂರು ಅರಮನೆಯಂತಹ ಪ್ರತಿಷ್ಠಿತ ವೇದಿಕೆ, ಮೌಂಟ್ ಅಬುವಿನ ಗ್ಲೋಬಲ್ ಸಮಿಟ್, ನೃತ್ಯ ಸ್ಪಟಿಕ, ಆಳ್ವಾಸ್ ಜಾಂಬೂರಿ ಉತ್ಸವ, ಮಡಿಕೇರಿ ದಸರಾ, ಜೆ.ಸಿ. ಸಪ್ತಾಹ ಹಾಗೂ ಅಬ್ಬಕ್ಕೋತ್ಸವ ಸೇರಿದಂತೆ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಪಾಲ್ಗೊಂಡು ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಪೃಥ್ವಿ, ಶೇಡ್ಸ್ ಆಫ್ ಶ್ಯಾಮ, ಶ್ರೀ ರಾಮಾಯಣ ದರ್ಶನಂ, ಕರ್ನಾಟಕ ಸಂಭ್ರಮ ಮತ್ತು ಶ್ರೀನಿವಾಸ ಕಲ್ಯಾಣ ಮುಂತಾದ ಮನಮುಟ್ಟುವ ನೃತ್ಯ ರೂಪಕಗಳಲ್ಲಿಯೂ ಅವಳು ಭಾಗವಹಿಸಿದ್ದಾರೆ. ಶ್ರಾವ್ಯ ಕಾಸರಗೋಡು ತಾಲೂಕಿನ ಉಪ್ಪಳ ಬಳಿಯ ಬಜೆ ಕುಟುಂಬದ ಶ್ರೀಕೃಷ್ಣ ಮಯ್ಯ ಹಾಗೂ ಬಬಿತಾ ಕೃಷ್ಣ ಮಯ್ಯ ಅವರ ಸುಪುತ್ರಿ ಶ್ರಾವ್ಯ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಕಾಡೆಮಿ ಬಾಲ ಗೌರವ ಪ್ರಶಸ್ತಿ, ತಿರುವನಂತಪುರಂನಲ್ಲಿ ನಡೆದ ಅನಂತಪುರಿ ಇಂಟರ್‌ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಫೆಸ್ಟಿವಲ್‌ನಲ್ಲಿ ನೃತ್ಯ ಗುಣಶ್ರೀ, ಬೆಂಗಳೂರಿನಲ್ಲಿ ನಡೆದ ಮಣಿಕರ್ಣಿಕಾ ನೃತ್ಯ ಉತ್ಸವದಲ್ಲಿ ನೃತ್ಯ ಮಾಣಿಕ್ಯ ಸಮ್ಮಾನ್, ಹೊಸದಿಲ್ಲಿಯ ವಿಶಾರದ ಕಲಾ ಉತ್ಸವದಲ್ಲಿ ನೃತ್ಯಶ್ರೀ, ಕತಾರ್‌ನ ದೋಹಾದಲ್ಲಿ ನಾದಂ ಸಿಲ್ಕ್ಸ್ ಡೆವಲಪ್‌ಮೆಂಟ್ ಸೆಂಟರ್‌ನಿಂದ ನಾಟ್ಯ ಬಾಲ ಕಲಾಮಣಿ ಪುರಸ್ಕಾರ, ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್‌ಡ್ಯಾನ್ಸ್ ಅಕಾಡೆಮಿಯಿಂದ ನಾಟ್ಯ ನಿನಾದ ರಾಷ್ಟ್ರೀಯ ಪ್ರಶಸ್ತಿ, ಬೆಂಗಳೂರಿನ ನಂದಗೋಕುಲ ಡ್ಯಾನ್ಸ್ ಸ್ಕೂಲ್‌ನಿಂದ ನಾಟ್ಯ ಕಲಾಮಣಿ ಪ್ರಶಸ್ತಿ, ಬೆಂಗಳೂರಿನ ಝೇಂಕಾರದಿಂದ ಶ್ರೀ ಕಲಾಪೂರ್ಣ ಪ್ರಶಸ್ತಿ, ಅಸ್ಸಾಮಿನ ವಿಶ್ವವಿಖ್ಯಾತ ಕಾಮಾಖ್ಯ ಉತ್ಸವದಲ್ಲಿ ಅತ್ಯುತ್ತಮ ಪ್ರಶಸ್ತಿ, ಒಡಿಶಾದ ರಿದಮ್ ಕಲ್ಚರಲ್ ಸೆಂಟರ್‌ನಲ್ಲಿ ಭರತನಾಟ್ಯದ ಸೀನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನ, ಗೋವಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ನೃತ್ಯ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ.