10ಕ್ಕಿಂತ ಹೆಚ್ಚು ಮಹಿಳೆಯರಿರುವ ಕಚೇರಿಯಲ್ಲಿ ಶೀ ಬಾಕ್ಸ್‌ ಕಡ್ಡಾಯ

KannadaprabhaNewsNetwork |  
Published : May 15, 2026, 02:00 AM IST
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ನಿಷೇಧ ಕಾಯ್ದೆ ಜಾರಿಗೊಳಿಸಲು ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ | Kannada Prabha

ಸಾರಾಂಶ

ಪೋಶ್ ಕಾಯ್ದೆ 2013ಕ್ಕೆ ಸಂಬಂಧಿಸಿದಂತೆ ಸ್ಥಳೀಯ ದೂರು ಸಮಿತಿ ರಚಿಸಿದ್ದು ಈ ಮಾಹಿತಿಯನ್ನು ಶೀ ಬಾಕ್ಸ್ ಫೋರ್ಟಲ್‌ನಲ್ಲಿ ಅಳವಡಿಸಲಾಗಿದೆ. ಜಿಲ್ಲೆಯ 66 ಕಚೇರಿಗಳಲ್ಲಿ ಹತ್ತು, ಹತ್ತಕ್ಕಿಂತ ಹೆಚ್ಚು ಮಹಿಳಾ ಸಿಬ್ಬಂದಿ ಇದ್ದಾರೆ.

ಧಾರವಾಡ:

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯಲು ಇದೀಗ ಸರ್ಕಾರಿ, ಖಾಸಗಿ ಕಚೇರಿ ಮತ್ತು ಕೈಗಾರಿಕೆಗಳಲ್ಲಿ 10 ಮತ್ತು ಹತ್ತಕ್ಕಿಂತ ಹೆಚ್ಚು ದುಡಿಯುವ ಮಹಿಳೆಯರು ಇದ್ದಲ್ಲಿ ಶೀ ಬಾಕ್ಸ್ ಅಳವಡಿಸುವುದು ಕಡ್ಡಾಯ...!

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ನಿಷೇಧ ಕಾಯ್ದೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ನಿಷೇಧ ಕಾಯ್ದೆಯ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಆರ್‌. ಸ್ನೇಹಲ್‌ ಗುರುವಾರ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆ ನಡೆಸಿ ಈ ಆದೇಶ ಮಾಡಿದ್ದಾರೆ. ಅಲ್ಲಿನ ಮಹಿಳೆಯರು ತಮಗೆ ಲೈಂಗಿಕ ದೌರ್ಜನ್ಯ ಲೈಂಗಿಕ ಕಿರುಕುಳ ಉಂಟಾದರೆ ಶೀ ಬಾಕ್ಸ್‌ನಲ್ಲಿ ಹಾಕಬೇಕು. ಅಲ್ಲದೇ, ಜಿಲ್ಲಾ ಆಂತರಿಕ ಮಹಿಳಾ ದೂರು ಸಮಿತಿಗೆ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಪೋಶ್ ಕಾಯ್ದೆ 2013ಕ್ಕೆ ಸಂಬಂಧಿಸಿದಂತೆ ಸ್ಥಳೀಯ ದೂರು ಸಮಿತಿ ರಚಿಸಿದ್ದು ಈ ಮಾಹಿತಿಯನ್ನು ಶೀ ಬಾಕ್ಸ್ ಫೋರ್ಟಲ್‌ನಲ್ಲಿ ಅಳವಡಿಸಲಾಗಿದೆ. ಜಿಲ್ಲೆಯ 66 ಕಚೇರಿಗಳಲ್ಲಿ ಹತ್ತು, ಹತ್ತಕ್ಕಿಂತ ಹೆಚ್ಚು ಮಹಿಳಾ ಸಿಬ್ಬಂದಿ ಇದ್ದಾರೆ. 1408 ತಾಲೂಕು ಕಚೇರಿಗಳಲ್ಲಿಯೂ ಆಂತರಿಕ ದೂರು ಸಮಿತಿ ಸೃಜಿಸಲಾಗಿದೆ. ಇದರಲ್ಲಿ 928 ಕಚೇರಿಗಳ ವಿವರಗಳನ್ನು ಶೀ ಬಾಕ್ಸ್‌ನಲ್ಲಿ ಅಳವಡಿಸಿದ್ದು 840 ಕಚೇರಿಗಳ ಮಾಹಿತಿ ಅಳವಡಿಕೆ ಪ್ರಗತಿಯಲ್ಲಿದೆ. ಹಾಗೆಯೇ, 391 ಖಾಸಗಿ ಕಚೇರಿಗಳ ಮಾಹಿತಿಯನ್ನು ಪೋರ್ಟಲ್‌ದಲ್ಲಿ ಅನುಮೋದಿಸಲಾಗಿದೆ. 314 ಕಚೇರಿಗಳು ತಮ್ಮ ಕಚೇರಿಯಲ್ಲಿನ ಆಂತರಿಕ ದೂರು ಸಮಿತಿಯ ಮಾಹಿತಿ ಅಳವಡಿಸುವುದು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಾಯ್ದೆಯ ಸಮಗ್ರ ಅನುಷ್ಠಾನಕ್ಕಾಗಿ ಸರ್ಕಾರದ ಆದೇಶದಂತೆ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ, ತಾಲೂಕು ಮಟ್ಟದಲ್ಲಿ ತಹಸೀಲ್ದಾರ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಿ, ಸಮಿತಿಗಳ ಸಭಾ ಪ್ರಗತಿಯನ್ನು ಪರಿಶೀಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಸಂಬಂಧಿಸಿದಂತೆ ದೂರು ಪರಿಶೀಲಿಸಲು ಕಚೇರಿಗಳಲ್ಲಿ ಅಳವಡಿಸಿರುವ ಶೀ ಬಾಕ್ಸ್‌ಗಳನ್ನು ಪ್ರತಿ ವಾರಕ್ಕೊಮ್ಮೆ ತೆರೆದು ನೋಡಬೇಕು. ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಪೂರಕ ವಾತಾವರಣ ರೂಪಿಸಲು ಬದ್ಧರಾಗಿರಬೇಕು. ದೂರು ಬಂದಲ್ಲಿ ಪಾರದರ್ಶಕ ಮತ್ತು ಕಾನೂನಾತ್ಮಕವಾಗಿ ಪರಿಶೀಲಿಸಿ, ಕ್ರಮವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಮಟ್ಟದ ಸ್ಥಳೀಯ ದೂರು ಸಮಿತಿಯನ್ನು ಡಾ. ಸಂಗೀತಾ ಮಾನೆ (ಮೊ 9880866796) ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ ಎಂದ ಜಿಲ್ಲಾಧಿಕಾರಿ, ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು, ಮಹಾನಗರ ಪಾಲಿಕೆ ವ್ಯಾಪ್ತಿಯ ಸಮನ್ವಯ ಸಮಿತಿ ಸಭೆ ಜರುಗಿಸಿ, ವರದಿ ಸಲ್ಲಿಸಬೇಕು. ಮಹಿಳೆಯರು ಯಾವುದೇ ತೊಂದರೆ, ಅವಮಾನ, ಕಿರಿಕಿರಿ ಅನುಭವಿಸದೆ, ನಿರ್ಭಯವಾಗಿ, ಸಂತೋಷದಿಂದ ಕೆಲಸ ಮಾಡುವ ವಾತಾವರಣವನ್ನು ಕೆಲಸದ ಸ್ಥಳದಲ್ಲಿ ನಿರ್ಮಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ತಿಳಿಸಿದರು.

ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ ಸ್ವಾಗತಿಸಿದರು. ಎಸ್ಪಿ ಗುಂಜನ್ ಆರ್ಯ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಡಾ. ಸುಜಾತಾ ಮಾನೆ ಸೇರಿದಂತೆ ಸಮಿತಿ ಸದಸ್ಯರಿದ್ದರು.

ಕಡ್ಡಾಯ ನೋಂದಣಿ...

ಹತ್ತು ಅಥವಾ ಅದಕ್ಕಿಂತ ಹೆಚ್ಚು ನೌಕರರನ್ನು ಹೊಂದಿರುವ ಎಲ್ಲ ಖಾಸಗಿ ಸಂಸ್ಥೆಗಳು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ, ಶ್ರೀ ಬಾಕ್ಸ್ ಪೋರ್ಟಲ್‌ನಲ್ಲಿ ನೊಂದಣಿಯಾಗದಿದ್ದರೆ ₹ 50 ಸಾವಿರ ದಂಡ ವಿಧಿಸಲಾಗುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾನತೆಯ ಹೆಸರಿನಲ್ಲಿ ಮಹಿಳೆಯರ ಶೋಷಣೆ
ಸಿಐಟಿಯು ಕಾರ್ಯಕರ್ತರಿಂದ ಪ್ರತಿಭಟನೆ