ಕಾರ್ಕಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನತೆಗೆ ಸಾಕಷ್ಟು ಪ್ರಯೋಜನಗಳಾಗಿದ್ದು, ಊರಿನ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ಧರ್ಮಾಧಿಕಾರಿಗಳು ಸಾಕಾರಗೊಳಿಸಿದ ನೂರಾರು ಜನೋಪಯೋಗಿ ಯೋಜನೆಗಳಿಂದ ಜನರ ಬದುಕು ಹಸನಾಗಿದ್ದು, ಬಡವರ ಜೀವನಮಟ್ಟ ಸುಧಾರಿಸಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ಲೀಲಾವತಿ ಹೇಳಿದರು.ಅವರು ಸೋಮವಾರ ಮುದ್ರಾಡಿ ಬಲ್ಲಾಡಿ ವಲಯದಲ್ಲಿ ಉದ್ಘಾಟನೆಯಾದ ಶ್ರೀ ಮಂಜುನಾಥೇಶ್ವರ ನೂತನ ಸ್ವಸಹಾಯ ಸಂಘಕ್ಕೆ ಸಂಘದ ದಾಖಲೆಗಳು ಹಾಗೂ ಕಾರ್ಯವೈಖರಿಗಳ ಮಾಹಿತಿಯನ್ನು ಹಸ್ತಾಂತರಿಸಿ ಮಾತನಾಡಿದರು.
ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ಪೂಜಾರಿ ನೂತನ ಸಂಘಕ್ಕೆ ಶುಭಾಶಯಗಳನ್ನು ತಿಳಿಸಿದರು. ಸುಕುಮಾರ ಪೂಜಾರಿ ಮುದ್ರಾಡಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಯೋಜನೆಯ ವಲಯಾಧ್ಯಕ್ಷ ಯೋಗೇಶ್, ಪ್ರಮುಖರಾದ ಮುದ್ದಣ್ಣ ಪೂಜಾರಿ, ಸಂತೋಷ ಪೂಜಾರಿ, ಸುಕುಮಾರ ಪೂಜಾರಿ, ಪತ್ರಕರ್ತರಾದ ಸುಕುಮಾರ್ ಮುನಿಯಾಲ್, ಬಾಲಚಂದ್ರ ಮುದ್ರಾಡಿ, ನೂತನ ಸಂಘದ ಪದಾಧಿಕಾರಿಗಳಾದ ಜಗದೀಶ್ ಆಚಾರ್ಯ, ಹಿರಿಯರಾದ ಗೋಪಾಲ ಆಚಾರ್ಯ, ಭೋಜ ಪೂಜಾರಿ, ಮೇಲ್ವಿಚಾರಕ ಉಮೇಶ್ ಬಿ.ಕೆ., ಸೇವಾಪ್ರತಿನಿಧಿ ಮಮತಾ, ಒಕ್ಕೂಟದ ಸದಸ್ಯರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಉಮೇಶ್ ಬಿ.ಕೆ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.