ಯಲಬುರ್ಗಾ: ತಾಲೂಕಿನ ವಜ್ರಬಂಡಿ ಗ್ರಾಮದ ಶ್ರೇಯಾ ಸ್ಟೋನ್ ಕ್ರಷರ್ ಹಾಗೂ ಸಾಯಿ ಸ್ಟೋನ್ ಕ್ರಷರ್ ಪರವಾನಗಿ ರದ್ದು ಪಡಿಸುವಂತೆ ಒತ್ತಾಯಿಸಿ ಶುಕ್ರವಾರ ಪಟ್ಟಣದ ತಹಸ್ಹೀಲ್ ಕಚೇರಿ ಮುಂದೆ ತಾಲೂಕು ಜೆಡಿಎಸ್ ಜಿಲ್ಲಾ ವಕ್ತಾರರ ನೇತೃತ್ವದಲ್ಲಿ ವಜ್ರಬಂಡಿ ಗ್ರಾಮಸ್ಥರು ಸೇರಿದಂತೆ ಮತ್ತಿತರರು ಅನಿರ್ದಿಷ್ಟಾವದಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಹೋರಾಟಕ್ಕೆ ಬೆಂಬಲ
ಕರ್ನಾಟಕ ರಕ್ಷಣಾ ವೇದೀಕೆ ಪ್ರವೀಣ ಶೆಟ್ಟಿ ಬಣ ತಾಲೂಕು ಅಧ್ಯಕ್ಷ ಶಿವಕುಮಾರ ನಾಗನಗೌಡ್ರ ಮಾತನಾಡಿ, ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ವ್ಯಾಪಕವಾಗಿದ್ದು, ಯಾವ ಅಧಿಕಾರಿಗಳು ಗಣಿಗಾರಿಕೆಗೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ. ಅಧಿಕಾರಿಗಳು ಇದೇ ಧೋರಣೆ ಮುಂದುವರಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರುಮುತ್ತಪ್ಪ ವಡ್ಡರ ಮಾತನಾಡಿ, ಬುಧವಾರ ಸಂಜೆ ೫:೩೦ರ ಸುಮಾರಿಗೆ ಸ್ಫೋಟಿಸಿದ ವೇಳೆ ಕಲ್ಲುಗಳು ಕ್ಯಾರಿಯಿಂದ ಸುಮಾರು ೨.೫ ಕಿಮೀ ದೂರದವರೆಗೆ ಬಂದಿವೆ. ದೊಡ್ಡ ಗಾತ್ರದ ಕಲ್ಲು ಮನೆಯೊಳಗೆ ಬಂದು ಬಿದ್ದಿದೆ. ಈ ವೇಳೆ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಆರೋಪಿಸಿದರು.
ಈ ಧರಣಿಯಲ್ಲಿ ಜೆಡಿಎಸ್ ಕುಕನೂರು ತಾಲೂಕಾಧ್ಯಕ್ಷ ಕೆಂಚಪ್ಪ ಹಳ್ಳಿ, ಜೆಡಿಎಸ್ ಕಾರ್ಯಾಧ್ಯಕ್ಷ ಶರಣಪ್ಪ ರಾಂಪೂರು, ವಜ್ರಬಂಡಿ ಗ್ರಾಮಸ್ಥರಾದ ಕಲ್ಲಪ್ಪ ಕುರ್ನಾಳ, ಬಸವರಾಜ ಕುರ್ನಾಳ, ಮಂಜುನಾಥ ನರೇಗಲ್, ಮುತ್ತಪ್ಪ ವಡ್ಡರ, ಲಕ್ಷ್ಮಣ್ಣ ವಡ್ಡರ, ಪರಶುರಾಮ ವಡ್ಡರ, ಫಕೀರಪ್ಪ ವಡ್ಡರ, ರಂಗಪ್ಪ ಬಿಸನಾಳ, ಹನುಮೇಶ ವಡ್ಡರ, ಹನುಮೇಶ ಗೊಂಡಬಾಳ, ಶರಣಪ್ಪ ವಡ್ಡರ, ಭೀಮಪ್ಪ ವಡ್ಡರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.