-ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಸಿ ಭಾಗಿ. ಎರಡು ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆ
ಕನ್ನಡಪ್ರಭವಾರ್ತೆ, ಚಿತ್ರದುರ್ಗಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ದೀಕ್ಷಾ ರಜತಮಹೋತ್ಸವ ಕ್ಕೆ ಚಿತ್ರದುರ್ಗ ಸಜ್ಜಾಗಿದ್ದು, ಸಿಎಂ ಸಿದ್ದರಾಮಯ್ಯಶನಿವಾರ ಮಧ್ಯಾಹ್ನ 2 ಗಂಟೆಗೆ ದೀಕ್ಷಾ ರಜತಮಹೋತ್ಸವಕ್ಕೆ ಚಾಲನೆ ನೀಡುವರು.
ಕಾರ್ಯಕ್ರಮಕ್ಕೆ ಚಿತ್ರದುರ್ಗ ನಗರ ಸಿಂಗಾರಗೊಂಡಿದೆ. ಸಿಎಂ ಆಗಮನದ ದಾರಿಯುದ್ದಕ್ಕೂ ಕಟೌಟ್ ಗಳ ಕಟ್ಟಲಾಗಿದೆ. ರಜತ ಮಹೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಜನತೆ ಆಗಮಿಸುವ ನಿರೀಕ್ಷೆ ಇದ್ದು ಎರಡು ಲಕ್ಷಕ್ಕೂ ಅಧಿಕ ಜಮಾವಣೆ ಗೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಮಹೋತ್ಸವಕ್ಕೆ ಬಂದ ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು ಇದಕ್ಕಾಗಿ ಬಾಣಸಿಗರು ಶುಕ್ರವಾರ ರಾತ್ರಿಯಿಡೀ ಅಡುಗೆ ಮಾಡುವುದರಲ್ಲಿ ನಿರತರಾಗಿದ್ದರು.ದೀಕ್ಷಾ ಮಹೋತ್ಸವದ ಪೂರ್ವ ಸಿದ್ದತೆ ವೀಕ್ಷಿಸಿ ಮಾತನಾಡಿದ ಇಮ್ಮಡಿ ಸಿದ್ದರಾಮೇಶ್ವರ ಶ್ರೀ, ಸಮುದಾಯದ ಜನ ಮಹೋತ್ಸವವವನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ. ರಾಜ್ಯದ 30 ಜಿಲ್ಲೆಗಳಿಂದ ಎರಡು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ವಿವಿಧ ರಾಜ್ಯಗಳಿಂದ ಸಮುದಾಯದ ಮುಖಂಡರು, ಆಯಾ ಜಿಲ್ಲೆಯ ಸಮಾಜದ ಮುಖಂಡರು ಸ್ವ-ಪ್ರೇರಣೆಯಿಂದ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸುವ ಕಾರ್ಯವನ್ನು ಕಳೆದ ಎರಡು ತಿಂಗಳಿನಿಂದ ನಡೆಸಿದ್ದಾರೆ ಎಂದರು.
ಎಸ್ಎಸ್ಎಲ್ ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದಿರುವ 500 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹೊಸದಾಗಿ ಆಯ್ಕೆಯಾದ ಸಂಸದರಿಗೆ, ನಿಗಮದ ಅಧ್ಯಕ್ಷರುಗಳಿಗೆ ಸನ್ಮಾನಿಸಲಾಗುವುದು. ಡಾಕ್ಟರೇಟ್ ಪಡೆದವರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಅಭಿನಂದಿಸಲಾಗುವುದು ಎಂದರು.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಶಿವರಾಜ್ ಎಸ್.ತಂಗಡಗಿ , ಡಿ.ಸುಧಾಕರ್, ಸಂತೋಷ್‍ಲಾಡ್, ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಪ್ರಹ್ಲಾದ್‍ಜೋಶಿ, ಶೋಭಾಕರಂದ್ಲಾಜೆ ಸೇರಿದಂತೆ ಹಾಲಿ ಮಾಜಿ ಶಾಸಕರು ಭಾಗವಹಿಸುವರು. ರಾಜ್ಯದ ವಿವಿಧ ಮಂತ್ರಿಗಳು, ಕೇಂದ್ರದ ಮಂತ್ರಿಗಳು ಸಮಾವೇಶದಲ್ಲಿ ಭಾಗವಹಿಸುವರು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಬರುವ ಜನರಿಗೆ ಉತ್ತಮ ಬೋಜನಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರಲಕುಂಟೆ ರಾಮಪ್ಪ, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ಎಸ್ ಜೆಎಸ್ ಜ್ಞಾನಪೀಠದ ನಿರ್ದೇಶಕ ಇ.ಮಂಜುನಾಥ, ಹೆಚ್.ಆಂಜನೇಯ, ಸಮಾಜದ ಮುಖಂಡರಾದ ತಿಮ್ಮಣ್ಣ, ಸಿದ್ದುಬಂಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
--------------ಫೋಟೋ:19 ಸಿಟಿಡಿ 9
ಭೋವಿ ಶ್ರೀಗಳ ದೀಕ್ಷಾ ಮಹೋತ್ಸವ ಕಾರ್ಯಕ್ರಮಕ್ಕೆ ವೇದಿಕೆ ಅಂತಿಮ ಸಿದ್ದತೆಯಲ್ಲಿರುವುದು.--------
ಫೋಟೋ:19 ಸಿಟಿಡಿ10ದೀಕ್ಷಾ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಬಾಣಸಿಗರು ಅಡುಗೆ ತಯಾರು ಮಾಡುತ್ತಿರುವುದು.