ಉಚಿತ ಪ್ರಸಾದ ನಿಲಯಗಳ ಹರಿಕಾರ ಜಯದೇವ ಶ್ರೀ

KannadaprabhaNewsNetwork |  
Published : Oct 01, 2024, 01:21 AM IST
ಕ್ಯಾಪ್ಷನಃ30ಕೆಡಿವಿಜಿ35ಃದಾವಣಗೆರೆಯಲ್ಲಿ ನಡೆದ ಶ್ರೀ ಜಯದೇವ ಜಗದ್ಗುರು ಮುರುಘರಾಜೇಂದ್ರ ಮಹಾಸ್ವಾಮೀಜಿಯವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಬಸವಪ್ರಭು ಸ್ವಾಮೀಜಿ ಇತರರು ಪುಷ್ಪ ಅರ್ಪಿಸಿದರು.........ಕ್ಯಾಪ್ಷನಃ30ಕೆಡಿವಿಜಿ36ಃದಾವಣಗೆರೆಯಲ್ಲಿಂದು ನಡೆದ ಶ್ರೀ ಜಯದೇವ ಜಗದ್ಗುರು ಮುರುಘರಾಜೇಂದ್ರ ಸ್ವಾಮೀಜಿಯವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ ಇತರೆ ಸ್ವಾಮೀಜಿಗಳು ಪೂಜ್ಯರ ಗದ್ಗುಗೆಗೆ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಶ್ರೀ ಜಯದೇವ ಜಗದ್ಗುರು ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಆಯಾ ಊರಿನ ಜನರಿಂದ ಪಡೆದ ಕಾಣಿಕೆಯನ್ನು ಅದೇ ಸ್ಥಳದಲ್ಲೇ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ವಿದ್ಯಾ ಪ್ರಸಾರವನ್ನು ಮಾಡಿದರು. ಶ್ರೀಗಳು ಕೇವಲ ತಮ್ಮ ಆತ್ಮೋದ್ಧಾರಕ್ಕಾಗಿ ಶ್ರಮಿಸದೇ, ಜನರ ಮಧ್ಯೆ ಬದುಕಿ ಜನಸಾಮಾನ್ಯರಲ್ಲಿದ್ದ ಅಸ್ಪೃಶ್ಯತೆ, ಅಸಮಾನತೆ, ಬಡತನ, ಹಸಿವು, ಅಜ್ಙಾನ ಮುಂತಾದ ಸಮಾಜದ ರೋಗಗಳನ್ನು ಕಿತ್ತುಹಾಕಿದ ಮಹಾನ್ ದಾರ್ಶನಿಕರು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ದಾವಣಗೆರೆಯಲ್ಲಿ ನುಡಿದಿದ್ದಾರೆ.

- ಸ್ಮರಣೋತ್ಸವ, ವಚನಗ್ರಂಥ ಮೆರವಣಿಗೆ ಕಾರ್ಯಕ್ರಮದಲ್ಲಿ ಬಸವಪ್ರಭು ಶ್ರೀ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಶ್ರೀ ಜಯದೇವ ಜಗದ್ಗುರು ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಆಯಾ ಊರಿನ ಜನರಿಂದ ಪಡೆದ ಕಾಣಿಕೆಯನ್ನು ಅದೇ ಸ್ಥಳದಲ್ಲೇ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ವಿದ್ಯಾ ಪ್ರಸಾರವನ್ನು ಮಾಡಿದರು. ಶ್ರೀಗಳು ಕೇವಲ ತಮ್ಮ ಆತ್ಮೋದ್ಧಾರಕ್ಕಾಗಿ ಶ್ರಮಿಸದೇ, ಜನರ ಮಧ್ಯೆ ಬದುಕಿ ಜನಸಾಮಾನ್ಯರಲ್ಲಿದ್ದ ಅಸ್ಪೃಶ್ಯತೆ, ಅಸಮಾನತೆ, ಬಡತನ, ಹಸಿವು, ಅಜ್ಞಾನ ಮುಂತಾದ ಸಮಾಜದ ರೋಗಗಳನ್ನು ಕಿತ್ತುಹಾಕಿದ ಮಹಾನ್ ದಾರ್ಶನಿಕರು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.

ನಗರದ ಶಿವಯೋಗಾಶ್ರಮದ ಆವರಣದಲ್ಲಿ ಸೋಮವಾರ ಬಸವ ಕೇಂದ್ರ, ಶಿವಯೋಗಾಶ್ರಮ ಟ್ರಸ್ಟ್ ವಿರಕ್ತ ಮಠದ ಸಹಯೋಗದಲ್ಲಿ ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರು ಮುರುಘ ರಾಜೇಂದ್ರ ಮಹಾಸ್ವಾಮಿಗಳ 68ನೇ ಸ್ಮರಣೋತ್ಸವ, ರಥೋತ್ಸವ ಹಾಗೂ ವಚನಗ್ರಂಥ ಮೆರವಣಿಗೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ರಾಜ್ಯಾದ್ಯಂತ ಉಚಿತ ಪ್ರಸಾದ ನಿಲಯ:

19ನೇ ಶತಮಾನದಲ್ಲಿ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಉದಯಿಸದೇ ಇದ್ದಿದ್ದರೆ ಇವತ್ತು ದೇಶದಲ್ಲಿ ಹೆಬ್ಬೆಟ್ಟು ಒತ್ತುವ ಜನರೇ ಅಧಿಕವಾಗಿರುತ್ತಿದ್ದರು. ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂಬಂತೆ ನಾಡನ್ನು ಸಂಚರಿಸಿ ದಾವಣಗೆರೆ, ಚಿತ್ರದುರ್ಗ, ಬೆಂಗಳೂರು, ತುಮಕೂರು, ತಿಪಟೂರು, ಅರಸೀಕೆರೆ, ಧಾರವಾಡ, ಕೊಲ್ಲಾಪುರ, ನಿಪ್ಪಾಣಿ, ಕಾಶಿ ಇನ್ನೂ ಮುಂತಾದ ಸ್ಥಳಗಳಲ್ಲಿ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿದರು. ಅಲ್ಲಿ ಸರ್ವರಿಗೂ ವಿದ್ಯೆಯನ್ನು ನೀಡಿದ ಪುಣ್ಯಾತ್ಮರು ಶ್ರೀ ಜಯದೇವ ಜಗದ್ಗುರು ಎಂದರು.

ಚನ್ನಗಿರಿಯ ಶ್ರೀ ಮಹಾಂತೇಶ ಶಾಸ್ತ್ರಿಗಳು ಜಯದೇವ ಲೀಲೆ ಪ್ರವಚನ ನಡೆಸಿಕೊಟ್ಟರು. ಗುರುಕಲ್ ಮಠದ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮೀಜಿ, ಹಾವೇರಿಯ ಬಸವ ಶಾಂತಲಿಂಗ ಸ್ವಾಮೀಜಿ, ಶಿಕಾರಿಪುರದ ಚನ್ನಬಸವ ಸ್ವಾಮೀಜಿ, ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ಚಿತ್ರದುರ್ಗದ ಬಸವಮುರುಗೇಂದ್ರ ಸ್ವಾಮೀಜಿ, ಹೊಳಲ್ಕೆರೆಯ ತಿಪ್ಪೇರುದ್ರ ಸ್ವಾಮೀಜಿ, ತಿಳುವಳ್ಳಿಯ ಬಸವನಿರಂಜನ ಸ್ವಾಮೀಜಿ, ಐರಣಿಯ ಗಜದಂಡ ಸ್ವಾಮೀಜಿ, ಮೈಸೂರಿನ ಬಸವಲಿಂಗಮೂರ್ತಿ ಸ್ವಾಮೀಜಿ, ಐರಣಿಯ ಪ್ರಭುಲಿಂಗ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಚಿತ್ರದುರ್ಗದ ಬಸವಾದಿತ್ಯ ದೇವರು, ಭಕ್ತರು ಭಾಗವಹಿಸಿದ್ದರು.

- - - -30ಕೆಡಿವಿಜಿ35ಃ:

ದಾವಣಗೆರೆಯಲ್ಲಿ ನಡೆದ ಶ್ರೀ ಜಯದೇವ ಜಗದ್ಗುರು ಮುರುಘರಾಜೇಂದ್ರ ಮಹಾಸ್ವಾಮೀಜಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಬಸವಪ್ರಭು ಸ್ವಾಮೀಜಿ ಇತರರು ಪುಷ್ಪಗಳ ಅರ್ಪಿಸಿದರು. -30ಕೆಡಿವಿಜಿ36ಃ:

ದಾವಣಗೆರೆಯಲ್ಲಿಂದು ನಡೆದ ಶ್ರೀ ಜಯದೇವ ಜಗದ್ಗುರು ಮುರುಘರಾಜೇಂದ್ರ ಸ್ವಾಮೀಜಿಯವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ ಇತರೆ ಸ್ವಾಮೀಜಿಗಳು ಪೂಜ್ಯರ ಗದ್ಗುಗೆಗೆ ಪೂಜೆ ಸಲ್ಲಿಸಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?