ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿಗೆ ಆಹ್ವಾನ ಟ್ರಸ್ಟ್ ಕಮಿಟಿಗೆ ಬಿಟ್ಟ ವಿಚಾರ
ಶ್ರೀರಾಮಮಂದಿರ ಉದ್ಘಾಟನೆ ಯಾವುದೇ ಪಕ್ಷದ ಕಾರ್ಯಕ್ರಮವಲ್ಲ, ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರನ್ನು ಉದ್ಘಾಟನೆಗೆ ಆಹ್ವಾನ ಕೊಡುವುದು, ಬಿಡುವುದು ಟ್ರಸ್ಟ್ ಕಮಿಟಿಗೆ ಬಿಟ್ಟ ವಿಚಾರ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರು ಮಂದಿರ ನಿರ್ಮಾಣಕ್ಕೆ ಮುತುವರ್ಜಿ ವಹಿಸಿದ್ದಾರೆ. ಅಂದಿನ ಮೆರವಣಿಗೆಗೆ ನರೇಂದ್ರ ಮೋದಿ ಅವರು ಸಹಕಾರ ಕೊಟ್ಟಿದ್ದಾರೆ. ಹೀಗಾಗಿ ಯಾರನ್ನೂ ಕಡೆಗಣಿಸುವ ಪ್ರಶ್ನೆಯಿಲ್ಲ, ಮೊದಲ ಹಂತದಲ್ಲಿ ಸ್ವಾಮೀಜಿಗಳನ್ನು ಕರೆದಿದ್ದಾರೆ. ಎರಡು, ಮೂರನೇ ಹಂತದಲ್ಲಿ ಕರೆಯಬಹುದು ಎಂದರು.ಅಡ್ವಾಣಿ ಸರ್ವೋಚ್ಛ ನಾಯಕ:
ರಾಜಕೀಯಕ್ಕೆ ಬಳಸಿಲ್ಲ:
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರಹ್ಲಾದ ಜೋಶಿ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ, ಕ್ಷೇತ್ರಕ್ಕೆ ಬೇರೆ ಯಾವುದೇ ಆಕಾಂಕ್ಷಿಗಳಿಲ್ಲ. ಕೆಲವರು ಕೇಳಿದಕ್ಕೆ ಹೇಳಿಕೆ ಕೊಟ್ಟಿರಬಹುದು. ಆದರೆ, ನಮ್ಮ ಅಪೇಕ್ಷೆ ಪ್ರಹ್ಲಾದ ಜೋಶಿ ಅವರೇ ಅಭ್ಯರ್ಥಿ ಆಗಬೇಕೆಂಬುದು. ಪಕ್ಷ ಏನೂ ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ನಾವು ಬದ್ಧ ಎಂದರು.
ಲೋಕಸಭಾ ಚುನಾವಣೆ ಮೇಲೆ ಶೆಟ್ಟರ್ ಪ್ರಭಾವ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಟೆಂಗಿನಕಾಯಿ, ಈ ಹಿಂದೆ ಜಗದೀಶ ಶೆಟ್ಟರ್ ಅವರು ಪಂಚರಾಜ್ಯ ಚುನಾವಣೆ ಮೇಲೆ ತಮ್ಮ ಪರಿಣಾಮ ಬೀರುತ್ತದೆ ಎಂದು ಹೇಳಿದರು ಅದರಂತೆ ನಿಜವಾಗಿಯೂ ಪರಿಣಾಮ ಬೀರಿದೆ. ಅವರು ಸೋಲು ಕಂಡಂತೆ ಕಾಂಗ್ರೆಸ್ ಪಂಚರಾಜ್ಯ ಚುನಾವಣೆಯಲ್ಲಿ ಸೋಲು ಕಂಡಿದೆ. ಅವರು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ವ್ಯಂಗ್ಯವಾಡಿದರು.