ಪಾಂಡವಪುರ:ಮೂಗೂರು ಶ್ರೀತ್ರಿಪುರ ಸುಂದರಮ್ಮ ದೇವಿಯ ರಥೋತ್ಸವದ ಹಿನ್ನೆಲೆಯಲ್ಲಿ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಇವರು ದೇವರ ಭಕ್ತರು ಗ್ರಾಮದಲ್ಲಿ ಇರುವ ಎಲ್ಲಾ ದೇವರಿಗೂ ವಿಶೇಷ ಪೂಜೆಸಲ್ಲಿಸಿ ಭಕ್ತಿಭಾವ ಸಮರ್ಪಿಸಿದರು.ರಥೋತ್ಸವದ ಅಂಗವಾಗಿ ಭಕ್ತರು ಗ್ರಾಮದ ಹೊರವಲಯದಲ್ಲಿ ಇರುವ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಪೂಜೆಸಲ್ಲಿಸಿ ಅಲ್ಲಿಂದ ಭಕ್ತರು, ಮಹಿಳೆಯರು ಮೀಸಲು ನೀರಿನೊಂದಿಗೆ ಹಣ್ಣಿನ ಆರತಿಯ ಜತೆಯೆಲ್ಲಿ ಮೆರವಣಿಗೆ ಮೂಲಕ ಗ್ರಾಮದ ರಂಗದಲ್ಲಿ ಇರುವ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಆಗಮಿಸಿದರು. ಮೆರವಣಿಗೆ ಬರುವ ದಾರಿಯುದ್ದಕ್ಕೂ ಪಟಾಕಿಸಿಡಿಸಿ ಸಂಭ್ರಮಿಸಿದರು. ಬಳಿಕ ಗ್ರಾಮದಲ್ಲಿ ಇರುವಂತಹ ಶ್ರೀ ಆದಿಶಕ್ತಿ, ಮಂಚಮ್ಮ, ಗಣಪತಿ, ದಣ್ಣಮ್ಮ, ಮಾಸ್ತಮ್ಮ ದೇವಸ್ಥಾನಗಳಿಗೆ ತೆರಳಿ ದೇವರಿಗೆ ವಿಶೇಷ ಪೂಜೆಸಲ್ಲಿಸಿದರು. ನಂತರ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ 5 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.ಜಿಪಂ ಮಾಜಿ ಸದಸ್ಯೆ ನಾಗಮ್ಮಪುಟ್ಟರಾಜು, ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.ವಿದೇಶಗಳಲ್ಲಿ ಕನ್ನಡ ಭಾಷೆ ಬೆಳೆಸಲು ಅನುದಾನ ಕೊಡಿ: ಪಿಎಂಗೆ ಮನವಿ ಸಲ್ಲಿಕೆ
ವಿದೇಶಗಳಲ್ಲಿ ಹಿಂದಿ ಬೆಳೆಸಲು ಕೊಡುತ್ತಿರುವ ಅನುದಾನದಷ್ಟೇ ಅನುದಾನವನ್ನು ವಿದೇಶಗಳಲ್ಲಿ ಕನ್ನಡ ಬೆಳೆಸಲು ಕೂಡ ಕೊಡಬೇಕೆಂದು ನಾವು ದ್ರಾವಿಡ ಕನ್ನಡಿಗರು ಚಳವಳಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.ನಗರದ ಜಿಲ್ಲಾಕಾರಿ ಕಚೇರಿ ಎದುರು ಸೇರಿದ ವಿದ್ಯಾರ್ಥಿಗಳು, ಹಿಂದಿ ಭಾಷೆಗೆ ನೀಡುತ್ತಿರುವಂತೆ ಕನ್ನಡ ಭಾಷೆಗೂ ಅನದಾನ ನೀಡುವಂತೆ ಕೂಡಲೇ ಆದೇಶ ಮಾಡಬೇಕು. ಇಲ್ಲದಿದ್ದರೆ ಫೆಬ್ರವರಿಯಲ್ಲಿ ಆದಿಚುಂಚನಗಿರಿಗೆ ಭೇಟಿ ಕೊಡುವ ಪ್ರಧಾನ ಮಂತ್ರಿಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಕರ್ನಾಟಕ ಸಂವಿಧಾನ ಸೇನೆ ಮತ್ತು ಕರವೇ ಪದಾಧಿಕಾರಿಗಳು ಬೆಂಬಲದೊಂದಿಗೆ ವಿದ್ಯಾರ್ಥಿಗಳ ಬೇಡಿಕೆ ಸರಿಯಾಗಿದ್ದು, ಕೂಡಲೇ ಕೇಂದ್ರ ಸರ್ಕಾರ ಪ್ರತಿಕ್ರಿಯೆ ಕೊಡದೆ ಹೋದರೆ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಕರವೇ ಎಚ್.ಡಿ.ಜಯರಾಂ, ಪ್ರದೀಪ್, ಆಫಿಯಾ, ನಂದಿನಿ, ಸಚಿನ್ ಒಕ್ಕಲಿಗ, ಕುಮಾರ್ ಇತರರು ಭಾಗವಹಿಸಿದ್ದರು.ಜ.11 ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಹಲಗೂರು: ಸಮೀಪದ ಅಗಸನಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಅವರಣದಲ್ಲಿ ಜ.11ರಂದು ಉಚಿತ ಆರೋಗ್ಯ ಮತ್ತು ದಂತ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಎ.ಎಸ್.ಮನು ಗೆಳೆಯರ ಬಳಗ, ಕಿಮ್ಸ್ ಬೆಂಗಳೂರು ಒಕ್ಕಲಿಗರ ಸಂಘ ದಂತ ವೈದ್ಯಕೀಯ ಮಹಾ ವಿದ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಅಗಸನಪುರ ಆಶ್ರಯದಲ್ಲಿ ಅಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆವರೆಗೆ ಶಿಬಿರ ನಡೆಯಲಿದೆ ಶಿಬಿರ ನಡೆಯಲಿದೆ. ಕೀಲು ಮತ್ತು ಮೂಳೆ ತಜ್ಞ ಡಾ.ಸೋಮಶೇಖರ್, ಹೃದ್ರೋಗ ತಜ್ಞ ಡಾ.ಎನ್.ಸೋಮಶೇಖರ್, ದಂತ ವೈದ್ಯರಾದ ಡಾ.ಎಚ್.ಎ.ಅಮಿತಾ, ಡಾ.ಡಿ.ಆರ್.ಮಾನಸ ಸೇರಿದಂತೆ ಇನ್ನಿತರು ತಜ್ಞ ವೈದ್ದರು ತಪಾಸಣೆ ನಡೆಸಲಿದ್ದಾರೆ.ಜನರಲ್ ಫಿಜಿಷಿಯನ್, ಚರ್ಮರೋಗ, ಕೀಲು ಮತ್ತು ಮೂಳೆ ಸಮಸ್ಯೆ, ಹೃದಯ ತೊಂದರೆ, ಸ್ತ್ರೀ ರೋಗ ಸಮಸ್ಯೆ, ಕಣ್ಣಿನ ಸಮಸ್ಯೆ, ಮೂತ್ರ ರೋಗ, ಕಿವಿ ಮೂಗು ಮತ್ತು ಗಂಟಲು ಸಮಸ್ಯೆ, ಶ್ವಾಸಕೋಶ, ದಂತ ಸಮಸ್ಯೆ, ರಕ್ತದೊತ್ತಡ, ಸಕ್ಕರೆ ಖಾಯಿಲೆ ಮತ್ತು ಇ.ಸಿ.ಜಿ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಅಗಸನಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಾರ್ವಜನಿಕ ಪ್ರಕಟಣೆಯಲ್ಲಿ ಕೋರಲಾಗಿದೆ.