ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸೇವಾ ಮನೋಭಾವದಿಂದ ಆರಂಭವಾದ ಲಯನ್ಸ್ ಸಂಸ್ಥೆ ಪ್ರಪಂಚದ ಅತ್ಯುನ್ನತ ಸಂಸ್ಥೆಯಾಗಿ ಹೊರ ಹೊಮ್ಮಿ ಸಾಮಾಜಿಕ ಕಾರ್ಯಗಳತ್ತ ಸಾಧನೆ ಮಾಡುತ್ತe ದುರ್ಬಲ ವರ್ಗದವರಿಗೆ ಆಸರೆಯಾಗಿ ಕಾರ್ಯ ನಿರ್ವಹಿಸಿ ಜನಾನುರಾಗಿ ಸೇವೆ ಸಲ್ಲಿಸುತ್ತಿದೆ ಎಂದರು.
ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ನಿಕಟ ಪೂರ್ವ ಮಲ್ಟಿ ಕೌನ್ಸಿಲ್ ಚೇರ್‍ಮನ್ ಡಾ.ಎಲ್.ಕೃಷ್ಣೇಗೌಡ ಮಾತನಾಡಿ, ಹಣವಂತರೆಲ್ಲ ಸೇವೆ ಮಾಡಲು ಸಾಧ್ಯವಿಲ್ಲ. ನಾವು ಸಂಪಾದನೆ ಮಾಡಿದ ಒಂದು ಭಾಗವನ್ನು ಸೇವೆಗಾಗಿ ಮುಡಿಪಾಗಿಡಬೇಕು. ಎಲ್ಲರಿಗೂ ಸೇವೆ ಮಾಡುವ ಭಾಗ್ಯ ಸಿಗುವುದಿಲ್ಲ ಎಂದರು.ಬಡವರು, ಸರ್ಕಾರಿ ಶಾಲಾ ಮಕ್ಕಳು, ನಿರ್ಗತಿಕರಿಗೆ ಸಹಾಯ ಹಸ್ತ ಚಾಚಬೇಕು. ನೀವು ಮಾಡುವ ಸಹಾಯ ಸಾರ್ಥಕತೆ ತಲುಪಬೇಕು. ಆ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂಸ್ಥೆ ಬೆಳೆಸುವ ಮೂಲಕ ತಾವು ಸಹ ಮುಖ್ಯ ರಂಗಕ್ಕೆ ಬರಬೇಕು ಎಂದರು.
ಈ ವೇಳೆ ಭಾರತೀ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಎಂ.ಮಾಯಪ್ಪಮತ್ತು ಕೃಷ್ಣೇಗೌಡ ದಂಪತಿಯನ್ನು ಸನ್ಮಾನಿಸಲಾಯಿತು. ಅರ್ಹ ಬಡವರಿಗೆ ಕಂಬಳಿ ವಿತರಿಸಲಾಯಿತು. ಸಂಸ್ಥೆ ಅಧ್ಯಕ್ಷರಾಗಿ ಕೆ.ಪಿ.ದೊಡ್ಡಿ ಶಿವರಾಮು, ಉಪಾಧ್ಯಾಕ್ಷರಾಗಿ ಕರಡಕೆರೆ ಹನುಮಂತೇಗೌಡ, ಮಂಚಶೆಟ್ಟಿ, ಕಾರ್ಯದರ್ಶಿ ಪ್ರೊ.ಬಿ.ಎಸ್.ಬೋರೇಗೌಡ, ಸಹ ಕಾರ್ಯದರ್ಶಿ ರಘುವೆಂಕಟೇಗೌಡ, ಖಜಾಂಚಿ ಪುಟ್ಟರಾಮರಾಜೇಅರಸ್, ಅಣ್ಣೂರು ಸಂದೀಪ್, ದೇವರಹಳ್ಳಿ ರಘು, ಅಣ್ಣೂರು ಶಿವರಾಮು, ಎ.ಬಿ.ಹಳ್ಳಿ ಪುಟ್ಟ, ಕರಡಕೆರೆ ಸುರೇಂದ್ರ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆ ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ.ಎಚ್.ವೆಂಕಟೇಶ್, ಜಿಲ್ಲಾ ಸಂಪುಟ ಖಜಾಂಚಿ ಕೆ.ಎಸ್.ಸುನೀಲ್ ಕುಮಾರ್, ಜಿಲ್ಲಾ ರಾಯಭಾರಿ ಕೆ.ಡಿ.ಕಾರ್ಯಪ್ಪ, ಜಿಲ್ಲಾ ಸಂಪುಟ ಸಂಯೋಜಕ ಎಂ.ವಿ.ನಂದೀಶ್, ಸಂಯೋಜಕ ಜಯಕುಮಾರ್, ವಿ.ಹರ್ಷ, ಜಿಲ್ಲಾಧ್ಯಕ್ಷ ಎಂ.ಸಿದ್ದೇಗೌಡ, ಸಿ.ಪಿ.ಆದರ್ಶ, ಗೌರವ ಕಾರ್ಯದರ್ಶಿಗಳಾದ ಕೆ.ಶೆಟ್ಟಹಳ್ಳಿ ನಾಗರಾಜು, ಶಿವಲಿಗಯ್ಯ ಟಿ.ಎನ್.ಶಿವಲಿಂಗೇಗೌಡ, ಡಿ.ಎ.ಕೆರೆ ಚಿಕ್ಕಹುಚ್ಚೇಗೌಡ, ಬೊಮ್ಮನದೊಡ್ಡಿ ಬಸವರಾಜು, ಅಣ್ಣೂರು ದೇವರಾಜು, ಚಿಕ್ಕರಸಿನಕೆರೆ ಗಿರೀಶ್ ಸೇರಿದಂತೆ ಮತ್ತಿತರಿದ್ದರು.