ಶಿಗ್ಗಾಂವಿ ಪುರಸಭೆ ಆಯ-ವ್ಯಯ ಮಂಡಿಸಿದ ಶುಭಂ ಶುಕ್ಲಾ

KannadaprabhaNewsNetwork |  
Published : Mar 26, 2026, 02:30 AM IST
ಶಿಗ್ಗಾಂವಿ ಪುರಸಭೆ ಆಡಳಿತಾಧಿಕಾರಿಗಳಾದ ಸವಣೂರು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ಸವಣೂರ ಉಪ ವಿಭಾಗಾಧಿಕಾರಿ ಕಾರ್ಯಾಲಯದಲ್ಲಿ ೨೦೨೬-೨೭ನೇ ಸಾಲಿನ ಬಜೆಟ್ ಮಂಡಿಸಿದರು. | Kannada Prabha

ಸಾರಾಂಶ

ಶಿಗ್ಗಾಂವಿ ಪುರಸಭೆಯಲ್ಲಿ ಒಟ್ಟಾರೆ ಖರ್ಚು ₹೨೫.೯೮ ಕೋಟಿ ವೆಚ್ಚದ ಬಜೆಟ್ ಮಂಡಿಸಿದ ಆಡಳಿತಾಧಿಕಾರಿಗಳು, ₹೩೪.೫೦ ಲಕ್ಷ ಉಳಿತಾಯ ನಿರೀಕ್ಷಿಸಿದ್ದಾರೆ.

ಶಿಗ್ಗಾಂವಿ: ಪಟ್ಟಣದ ಪುರಸಭೆಯ ೨೦೨೪-೨೫ನೇ ಸಾಲಿನ ವಾಸ್ತವಿಕ ಆಯವ್ಯಯ ಲೆಕ್ಕ ಹಾಗೂ ೨೦೨೫-೨೬ನೇ ಸಾಲಿನ ಪರಿಷ್ಕೃತ ಆಯವ್ಯಯದೊಂದಿಗೆ ೨೦೨೬-೨೭ನೇ ಸಾಲಿನ ಆರ್ಥಿಕ ಮುನ್ನೋಟದ ಆಯ-ವ್ಯಯವನ್ನು ಪುರಸಭೆ ಆಡಳಿತಾಧಿಕಾರಿಗಳಾದ ಸವಣೂರು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ಮಂಡಿಸಿದರು.

ಸನ್ ೨೦೨೬-೨೭ನೇ ಸಾಲಿನಲ್ಲಿ ರಾಜಸ್ವ ಖಾತೆಯಲ್ಲಿ ₹೧೦.೪೧ ಕೋಟಿಗಳ ಬಂಡವಾಳ ಖಾತೆಯಲ್ಲಿ ₹೧೨.೪೭ ಕೋಟಿ ಹಾಗೂ ಅಸಾಧಾರಣ ಖಾತೆಯಲ್ಲಿ ₹೩.೪೪ ಕೋಟಿ ಒಟ್ಟು ₹೨೬.೩೨ ಕೋಟಿ ಸ್ವೀಕೃತಿಯನ್ನು ನಿರೀಕ್ಷಿಸಲಾಗಿದೆ.

ಅದೇ ರೀತಿ ರಾಜಸ್ವ ಖಾತೆಯಲ್ಲಿ ₹೯.೬೦ ಕೋಟಿ ರಾಜಸ್ವ ವೆಚ್ಚ ನಿರೀಕ್ಷಿಸಿ, ಬಂಡವಾಳ ಖಾತೆಯಲ್ಲಿ ಆಸ್ತಿ ನಿರ್ಮಾಣಕ್ಕಾಗಿ ₹೧೨.೯೩ ಕೋಟಿಗಳನ್ನು ವೆಚ್ಚಕ್ಕಾಗಿ ಮೀಸಲಿರಿಸಿದೆ. ಅಸಾಧಾರಣ ಖಾತೆಯಲ್ಲಿ ೩.೪೪ ಕೋಟಿ ಅಸಾಧಾರಣ ವೆಚ್ಚ ನಿರೀಕ್ಷಿಸಿದೆ. ಒಟ್ಟಾರೆ ₹೨೬.೩೨ ಕೋಟಿ ಸ್ವೀಕೃತಿ ನಿರೀಕ್ಷಿಸಿದೆ. ₹೨೫.೯೮ ಕೋಟಿ ವೆಚ್ಚ ಅಂದಾಜಿಸಿ, ₹೩೪.೫೦ ಲಕ್ಷ ಉಳಿತಾಯ ಅಂದಾಜು ಅಯ-ವ್ಯಯ ನಿರೀಕ್ಷಿಸಿದೆ.

ಆದಾಯ ವಿವರ: ರಾಜ್ಯ ಹಣಕಾಸು ಆಯೋಗ (ಎಸ್‌ಎಫ್‌ಸಿ) ₹೧ ಕೋಟಿ, ೧೫ನೇ ಹಣಕಾಸು ಯೋಜನೆ ಅನುದಾನ ₹೨ ಕೋಟಿ, ವಿಶೇಷ ಅನುದಾನ ₹೧೦ ಕೋಟಿ, ವೇತನ ಅನುದಾನ ₹೩.೧೦ ಕೋಟಿ, ಲೈಸನ್ಸ್ ಫೀ ಶುಲ್ಕ ₹೮ ಲಕ್ಷ, ಸಂತೆ ಶುಲ್ಕ ₹೧೪ ಲಕ್ಷ, ನಲ್ಮ/ ಡೇ-ನಲ್ಮ ಅನುದಾನ ₹೨೦ ಲಕ್ಷ, ವಿದ್ಯುತ್ ಶಕ್ತಿ ಅನುದಾನ ₹೨.೫೦ ಕೋಟಿ, ಆಸ್ತಿ ತೆರಿಗೆ ₹೧.೪೫ ಕೋಟಿ, ನೀರಿನ ತೆರಿಗೆ ₹೬೫ ಲಕ್ಷ, ಮಳಿಗೆ ಬಾಡಿಗೆ ₹೧೮ ಲಕ್ಷ, ಖಾತಾ ಬದಲಾವಣೆ, ಬೋಜಾ ಇತರ ಶುಲ್ಕಗಳು ₹೨೭.೧೫ ಲಕ್ಷ ಹೂಡಿಕೆಗಳಿಂದ ಬಂದ ಬಡ್ಡಿ ₹೨೨ ಲಕ್ಷ, ಇತರ ಯೋಜನೆಗಳು ₹೬೫ ಲಕ್ಷ, ಘನತ್ಯಾಜ್ಯ ವಿಲೇವಾರಿ ಅನುದಾನ ₹೧ ಕೋಟಿ, ಕಟ್ಟಡ ಪರವಾನಗಿ ಇತರ ಶುಲ್ಕಗಳು ₹೩೦ ಲಕ್ಷ, ಅಸಾಮಾನ್ಯ ಆದಾಯ ಮತ್ತು ವೆಚ್ಚ ಖಾತೆ ₹೨.೪೩ ಕೋಟಿ, ಕುಡಿಯವ ನೀರಿನ ಅನುದಾನ ₹೧೫ ಲಕ್ಷ, ಒಟ್ಟು ₹೨೬.೩೨ ಕೋಟಿ.

ಖರ್ಚಿನ ವಿವರ: ಕಟ್ಟಡ ನಿರ್ಮಾಣ ₹೨ ಕೋಟಿ. ವಾಹನ ಖರೀದಿಗಾಗಿ ₹೫೦ ಲಕ್ಷ, ಕೆರೆ ಮತ್ತು ಉದ್ಯಾನ ಅಭಿವೃದ್ಧಿ ₹೧.೫ ಕೋಟಿ, ರಸ್ತೆ ನಿರ್ಮಾಣಕ್ಕಾಗಿ ₹೨.೪೦ ಕೋಟಿ, ಚರಂಡಿ ನಿರ್ಮಾಣ ₹೯೨.೬೫ ಲಕ್ಷ, ಅಭಿವೃದ್ಧಿ ಕಾಮಗಾರಿಗಳು ₹೨.೨೦ ಕೋಟಿ, ಬೀದಿ ದೀಪ ನಿರ್ವಹಣೆ, ಸಾಮಗ್ರಿ ₹೧.೫೦ ಕೋಟಿ, ಸಿಡಿ ನಿರ್ಮಾಣ ₹೧.೨೦ ಕೋಟಿ, ನೀರು ಸರಬರಾಜು ಸಾಮಗ್ರಿ ಖರೀದಿ ಮತ್ತು ನಿರ್ವಹಣೆ ₹೧.೫೦ ಕೋಟಿ, ಡಿನಲ್ಮ್‌ ಯೋಜನೆಗಳ ವೆಚ್ಚ ₹೨೦ ಲಕ್ಷ, ಇತರ ಯೋಜನೆಗಳು ₹೬೫ ಲಕ್ಷ, ಹೊರಗುತ್ತಿಗೆ ನೌಕರರ ವೆಚ್ಚ ₹೮೫ ಲಕ್ಷ. ರಸ್ತೆ, ಚರಂಡಿ, ಸಿಡಿ ಇತ್ಯಾದಿ ನಿರ್ವಹಣೆ ₹೫೬.೪೮ ಲಕ್ಷ, ಡೀಸೆಲ್‌ ಬಿಲ್ಲು, ವಾಹನ ದುರಸ್ತಿ ನಿರ್ವಹಣೆ ₹೩೦ ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಯೋಜನಾ ವೆಚ್ಚ ₹೩೫.೫೧ ಲಕ್ಷ, ಇತರ ಸಾಮಾನ್ಯ ವರ್ಗದ ಯೋಜನಾ ವೆಚ್ಚ ₹೮.೮೭ ಲಕ್ಷ, ಅಂಗವಿಕಲರ ವರ್ಗದ ಯೋಜನಾ ವೆಚ್ಚ ₹೬.೧೨ ಲಕ್ಷ, ಅಸಾಮಾನ್ಯ ಆದಾಯ ಮತ್ತು ವೆಚ್ಚದ ಖಾತೆ ₹೨.೪೩ ಕೋಟಿ, ವೇತನ ಅನುದಾನ ವೆಚ್ಚ ₹೩.೧೦ ಕೋಟಿ, ವಿದ್ಯುತ್ ಶಕ್ತಿ ಯೋಜನಾ ವೆಚ್ಚ ₹೨.೫೦ ಕೋಟಿ, ಕುಡಿಯುವ ನೀರು ಅನುದಾನ ವೆಚ್ಚ ₹೧೫ ಲಕ್ಷ, ಘನತ್ಯಾಜ್ಯ ವಿಲೇವಾರಿ ಯೋಜನಾ ವೆಚ್ಚ ₹೧ ಕೋಟಿ, ಒಟ್ಟಾರೆ ಖರ್ಚು ₹೨೫.೯೮ ಕೋಟಿ ವೆಚ್ಚದ ಬಜೆಟ್ ಮಂಡಿಸಿದ ಆಡಳಿತಾಧಿಕಾರಿಗಳು, ₹೩೪.೫೦ ಲಕ್ಷ ಉಳಿತಾಯ ಬಜೆಟ್ ನೀಡಿದ್ದಾರೆ.

ಮುಖ್ಯಾಧಿಕಾರಿ ಮಲ್ಲೇಶ್ ಆರ್., ಖಜಾಂಚಿ ರಾಜೇಶ ಕಹಾರ್ ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳ ಮೀಸಲಾತಿ ತಕ್ಷಣ ಜಾರಿಗಾಗಿ ಮಾದಿಗ ಸಮುದಾಯದ ಪ್ರತಿಭಟನೆ
ಆಲಿಕಲ್ಲು ಮಳೆಗೆ ನೂರಾರು ಎಕರೆ ಕಲ್ಲಂಗಡಿ, ಪಪ್ಪಾಯಿ ಬೆಳೆಹಾನಿ