ಪರಶಿವಮೂರ್ತಿ ದೋಟಿಹಾಳ
ಶುಖಮುನಿ ತಾತನ ರಥೋತ್ಸವಕ್ಕೆ ಶಾಸಕ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಚಾಲನೆ ನೀಡಿದರು. ತಾತನ ರಥೋತ್ಸವಕ್ಕೆ ದೋಟಿಹಾಳ, ಕೇಸೂರು ಸೇರಿದಂತೆ ವಿವಿಧ ಸುತ್ತಮುತ್ತಲಿನ ನೂರಾರು ಗ್ರಾಮಗಳಿಂದ ಆಗಮಿಸಿದ ಭಕ್ತರು ನಾನಾ ತರಹದ ಹರಕೆಯನ್ನು ತಾತನ ಭಕ್ತಿಗೆ ಸಮರ್ಪಿಸಿದರು.
ಜಾತ್ರೆಯ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ಪಂಚಾಮೃತಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿದವು. ಬೆಳಿಗ್ಗೆ ರಥದ ಮುಂದೆ ಹೋಮ ಹವನಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲಾಯಿತು.ತಾಲೂಕಿನ ದೋಟಿಹಾಳ ಹಾಗೂ ಅನೇಕ ಗ್ರಾಮಗಳಿಂದ ಆಗಮಿಸಿದ ಭಕ್ತರು ಉರುಳು ಸೇವೆ, ದೀರ್ಘದಂಡ ನಮಸ್ಕಾರ ಸೇರಿದಂತೆ ಇನ್ನಿತರ ಧಾರ್ಮಿಕ ಮಾಡುತ್ತಿರುವುದು ಮಠದ ಅಂಗಳದಲ್ಲಿ ಕಂಡು ಬಂತು.
ಜಯಘೋಷ: ರಥಬೀದಿಯಲ್ಲಿರುವ ಸಹಸ್ರಾರು ಭಕ್ತರು ಜೈ ಶುಖಮುನಿ, ಜೈ ಜೈ ಶುಖಮುನಿ, ಓಂ ನಮಃ ಶಿವಾಯ, ಶುಖಮುನಿ ಸ್ವಾಮಿ ಮಹಾರಾಜ್ ಕಿ ಜೈ ಸೇರಿದಂತೆ ಅನೇಕ ಜಯಘೋಷಗಳನ್ನು ಕೂಗುತ್ತಾ ರಥ ಎಳೆದು ತಾತನ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಅಮರೇಗೌಡ ಪಾಟೀಲ ಭಯ್ಯಾಪುರ, ಹಸನಸಾಬ ದೋಟಿಹಾಳ, ತಹಸೀಲ್ದಾರ್ ರವಿ ಅಂಗಡಿ, ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ, ಮಾಜಿ ಜಿಪಂ ಸದಸ್ಯ ಕೆ.ಮಹೇಶ, ಅಶೋಕ ಬಳೂಟಗಿ, ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬಾದಾಮಿ, ಮಾಲತಿ ನಾಯಕ, ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ, ಗ್ರಾಮ ಲೆಕ್ಕಿಗ ಮೌನೇಶ ಮಡಿವಾಳರ, ಸಂಗಮೇಶ ನಾಗೂರು, ದೋಟಿಹಾಳ ಗ್ರಾಪಂ ಪಿಡಿಒ ಮುತ್ತಣ್ಣ, ಗ್ರಾಪಂ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.