ರಾಷ್ಟ್ರೀಯತೆಗಾಗಿ ಶ್ರಮಿಸಿದ ಶ್ಯಾಮಪ್ರಸಾದ್ ಮುಖರ್ಜಿ

KannadaprabhaNewsNetwork |  
Published : Jun 23, 2025, 11:49 PM IST
23ಕೆಕೆಆರ್2:ಕುಕನೂರು ತಾಲೂಕಿನ ಮಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಬಲಿದಾನ ದಿವಸ ಪ್ರಯುಕ್ತ ಪುಷ್ಪಾರ್ಚನೆ ಜರುಗಿತು. | Kannada Prabha

ಸಾರಾಂಶ

ಶ್ಯಾಮಪ್ರಸಾದ್ ಮುಖರ್ಜಿ ಅವರು ಶಿಕ್ಷಣ ತಜ್ಞರಾಗಿದ್ದರು. ರಾಷ್ಟ್ರ ಭವಿಷ್ಯದ ಬಗ್ಗೆ ಚಿಂತನಾಶೀಲರಾಗಿದ್ದರು. ಅದಕ್ಕಾಗಿ ಅವರು ಜನಸಂಘ ಸ್ಥಾಪಿಸಿದರು. ನಂತರ ಇದು ಬಿಜೆಪಿ ಪಕ್ಷವಾಗಿ ಬೆಳೆದಿದೆ. ಇಡೀ ವಿಶ್ವದಲ್ಲಿ ಬಿಜೆಪಿ ಸಂಘಟನೆ ಹಾಗೂ ಸದಸ್ಯರ ನೋಂದಣಿಯಿಂದ ಮಾದರಿ ಆಗಿದೆ.

ಕುಕನೂರು:

ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರು ರಾಷ್ಟ್ರೀಯತೆಗಾಗಿ ಶ್ರಮಿಸಿದರು ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಶ್ಯಾಮಪ್ರಸಾದ್ ಮುಖರ್ಜಿ ಅವರು ಶಿಕ್ಷಣ ತಜ್ಞರಾಗಿದ್ದರು. ರಾಷ್ಟ್ರ ಭವಿಷ್ಯದ ಬಗ್ಗೆ ಚಿಂತನಾಶೀಲರಾಗಿದ್ದರು. ಅದಕ್ಕಾಗಿ ಅವರು ಜನಸಂಘ ಸ್ಥಾಪಿಸಿದರು. ನಂತರ ಇದು ಬಿಜೆಪಿ ಪಕ್ಷವಾಗಿ ಬೆಳೆದಿದೆ. ಇಡೀ ವಿಶ್ವದಲ್ಲಿ ಬಿಜೆಪಿ ಸಂಘಟನೆ ಹಾಗೂ ಸದಸ್ಯರ ನೋಂದಣಿಯಿಂದ ಮಾದರಿ ಆಗಿದೆ. ಅಂದು ಅವರು ನೆಟ್ಟ ಈ ಪಕ್ಷ ಹೆಮ್ಮರವಾಗಿ ಬೆಳೆದಿದೆ. ಜನಸೇವೆ ಹಾಗೂ ರಾಷ್ಟ್ರೀಯತೆಗೆ ಪಕ್ಷ ಬದ್ಧವಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಜನ ಸೇವೆಗೆ ಅರ್ಪಿಸಿಕೊಂಡಿದ್ದಾರೆ. ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳು ಮನೆ ಬಾಗಿಲಿಗೆ ತಲುಪುತ್ತಿವೆ. ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ. ದೇಶದ ರಕ್ಷಣಾ ಭದ್ರತೆ ಹೆಚ್ಚಿದೆ. ರೈತರಿಗೆ ನಾನಾ ಯೋಜನೆ ದೊರಕಿವೆ. ಸುಗಮ ಸಂಚಾರಕ್ಕೆ ಹಲವಾರು ಕೊಡುಗೆ ನೀಡಿದ್ದಾರೆ ಎಂದ ಅವರು, ಬಿಜೆಪಿ ತತ್ವ-ಸಿದ್ದಾಂತಗಳು ಭಾರತವನ್ನು ವಿಶ್ವಗುರು ಮಾಡುತ್ತಿವೆ. ಭಾರತ ಹಾಗೂ ಭಾರತೀಯರ ಸದೃಢತೆಗೆ ಪಕ್ಷ ಕಾರ್ಯ ಮಾಡುತ್ತಿದೆ ಎಂದರು.

ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಹೊಸಮನಿ, ಮಸಬಹಂಚಿನಾಳ ಗ್ರಾಪಂ ಅಧ್ಯಕ್ಷ ಹನುಮಂತ ಬನ್ನಿಕೊಪ್ಪ, ಶರಣಪ್ಪ ಬಣ್ಣದಬಾವಿ, ಮಂಜುನಾಥ ನಾಡಗೌಡ್ರು, ಮಹಾಂತೇಶ ಹೂಗಾರ, ಲಕ್ಷ್ಮಣ ಕಾಳಿ, ಪಪಂ ಸದಸ್ಯರಾದ ಸಿದ್ಲಿಂಗಯ್ಯ ಉಳ್ಳಾಗಡ್ಡಿ, ಬಾಲರಾಜ ಗಾಳಿ, ಜಗನ್ನಾಥ ಭೋವಿ, ಸಾಧೀಕ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರು 5 ಪಾಲಿಕೆಗೆ ಎಲೆಕ್ಷನ್‌ ನಡೆಸುವುದಕ್ಕೆ ಜೂ.30 ಡೆಡ್ಲೈನ್‌
ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌