ರಾಮನಗರ : ಬಡ ಮಕ್ಕಳಲ್ಲಿ ಭಗವಂತನ ಕಂಡ ಸಿದ್ದಗಂಗಾ ಶ್ರೀಗಳು

KannadaprabhaNewsNetwork |  
Published : Apr 02, 2024, 01:10 AM ISTUpdated : Apr 02, 2024, 08:37 AM IST
1ಕೆಆರ್ ಎಂಎನ್ 1.ಜೆಪಿಜಿರಾಮನಗರದ ಹಳೇ ಬಸ್ ನಿಲ್ದಾಣದ ದೇವೇಗೌಡ ಕಾಂಪ್ಲೆಕ್ಸ್ ಮುಂಭಾಗ ಸೋಮವಾರ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗಳವರ 117 ನೇ ವರ್ಷದ ಜಯಂತ್ಯುತ್ಸವ ಆಚರಿಸಲಾಯಿತು. | Kannada Prabha

ಸಾರಾಂಶ

ರಾಮನಗರ: ಮಠ ಕಟ್ಟಿ ಮಠದಲ್ಲಿ ಪೂಜೆಗಷ್ಟೇ ಸೀಮಿತವಾಗದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರು ಪ್ರತಿ ಕ್ಷಣ ನಾಡಿನ ಜನರ ಒಳಿತಿಗಾಗಿ ಬಡ ವಿದ್ಯಾರ್ಥಿಗಳ ಪಾಲಿಗೆ ಬೆಳಕಾಗಿ ನಡೆದವರು ಎಂದು ರಾಮನಗರ ತಾಲೂಕು ವೀರಶೈವ ಯುವಕ ಸಂಘದ ಅಧ್ಯಕ್ಷ ಎಂ.ಆರ್. ಶಿವಕುಮಾರ ಸ್ವಾಮಿ ಹೇಳಿದರು.

ರಾಮನಗರ: ಮಠ ಕಟ್ಟಿ ಮಠದಲ್ಲಿ ಪೂಜೆಗಷ್ಟೇ ಸೀಮಿತವಾಗದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರು ಪ್ರತಿ ಕ್ಷಣ ನಾಡಿನ ಜನರ ಒಳಿತಿಗಾಗಿ ಬಡ ವಿದ್ಯಾರ್ಥಿಗಳ ಪಾಲಿಗೆ ಬೆಳಕಾಗಿ ನಡೆದವರು ಎಂದು ರಾಮನಗರ ತಾಲೂಕು ವೀರಶೈವ ಯುವಕ ಸಂಘದ ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ ಹೇಳಿದರು.

ನಗರದ ಹಳೇ ಬಸ್ ನಿಲ್ದಾಣದ ದೇವೇಗೌಡ ಕಾಂಪ್ಲೆಕ್ಸ್ ಮುಂಭಾಗ ರಾಮನಗರ ತಾಲೂಕು ವೀರಶೈವ ಯುವಕ ಸಂಘ, ಸಿದ್ದಗಂಗಾ ಶ್ರೀಗಳ ಭಕ್ತ ವೃಂದದಿಂದ ಏರ್ಪಡಿಸಿದ್ದ ತುಮಕೂರು ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗಳವರ 117ನೇ ವರ್ಷದ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಉದ್ಧಾರಕ್ಕಾಗಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಡಾ.ಶಿವಕುಮಾರ ಶ್ರೀಗಳು ಮಹಾಚೇತನ. ಬಡವರಿಗೆ ವಸತಿ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರಲ್ಲಿಯೇ ಭಗವಂತನನ್ನು ಕಂಡವರು. ಇಂದು ಲಕ್ಷಾಂತರ ಮಂದಿ ಶ್ರೀಮಠದಲ್ಲಿ ಅಕ್ಷರ ಜ್ಞಾನ ಪಡೆದು ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಇಂದು ಶ್ರೀಗಳು ನಮ್ಮೊಡನೆ ಇಲ್ಲದಿರಬಹುದು. ಆದರೆ ಅವರು ನಡೆದ ದಾರಿ ನಮಗೆ ಅವರ ಇರುವಿಕೆಯನ್ನು ತೋರುತ್ತದೆ ಅವರ ಆದರ್ಶದ ಬದುಕು ನಮಗೆ ಇಂದು ಬೆಳಕು ತೋರುತ್ತಿದೆ ಎಂದು ಹೇಳಿದರು.

ವೀರಶೈವ ಮುಖಂಡ ಕೇತೋಹಳ್ಳಿ ಕೆ.ಎಸ್.ಶಂಕರಯ್ಯ ಮಾತನಾಡಿ, ಡಾ. ಶಿವಕುಮಾರ ಮಹಾಸ್ವಾಮೀಜಿಗಳ ಕಾಯಕ ನಿಷ್ಠೆ ದೊಡ್ಡದು. ಅವರು ಹಾಕಿಕೊಟ್ಟ ಸನ್ಮಾರ್ಗ, ಆದರ್ಶಗಳು ನಮಗೆ ದಾರಿದೀಪವಾಗಿ ಸಿಕ್ಕಿವೆ. ಶ್ರೀಗಳು ತೋರಿದ ಹಾದಿಯಲ್ಲಿ ನಾವುಗಳು ನಡೆದು ಅವರ ಕಾಯಕನಿಷ್ಟೆ ಮೈಗೂಡಿಸಿಕೊಂಡು ಜೀವನ ನಡೆಸಿದಾಗ ಮಾತ್ರ ಯಶಸ್ವಿ ಜೀವನ ನಮ್ಮದಾಗುವ ಜೊತೆಗೆ ಶ್ರೀಗಳ ಸಾಮಾಜಿಕ ಸೇವೆ ನಮಗೆ ದಾರಿತೋರುತ್ತದೆ ಎಂದು ಹೇಳಿದರು.

ವೀರಶೈವ ಮುಖಂಡ ರಾಜಶೇಖರ್ ಮಾತನಾಡಿ, ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನ್ನ, ವಿದ್ಯೆ ನೀಡುವ ಮೂಲಕ ಬಡವರ ಪಾಲಿನ ದೇವರಾಗಿ ಅವರ ಆಧಾರಸ್ಥಂಭವಾಗಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಅನ್ನದಾನ ಮಾಡಿ ಅವರ ಜೀವನದ ದಿಕ್ಕನ್ನೇ ಬದಲಾಯಿಸಿದ ಮಹಾಪುರುಷರು ಎಂದು ಬಣ್ಣಿಸಿದರು.

ಸಿದ್ದಗಂಗಾ ಕ್ಷೇತ್ರವನ್ನು ಪುಣ್ಯ ಕ್ಷೇತ್ರವನ್ನಾಗಿ ಮಾಡಿ ನಿತ್ಯವೂ ಬಡ ಜನರ ಸೇವೆ ಮಾಡಿ ತಮ್ಮ ಕಾಯಕ ನಿಷ್ಟೆಯನ್ನು ಜಗತ್ತಿಗೆ ಸಾರಿದ ಮಹಾಮಹಿಮರು ಸಿದ್ದಗಂಗಾ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ಅವರ ಸೇವೆ ಅನನ್ಯವಾದದ್ದು ಎಂದರು.

ರೇಷ್ಮೆ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಗೌತಮ್‌ಗೌಡ, ಬಿಡದಿ ಸ್ಮಾರ್ಟ್ ಸಿಟಿ ಪ್ರಾಧಿಕಾರ ಮಾಜಿ ಅಧ್ಯಕ್ಷ ವರದರಾಜುಗೌಡ ಬಾಬು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನರಸಿಂಹಯ್ಯ, ಜೆಡಿಎಸ್ ಮುಖಂಡ ನರಸಿಂಹಮೂರ್ತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶ್ರೀಗಳ ಭಾವಚಿತ್ರ, ಜಗಜ್ಯೋತಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನಡೆಸಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ನಡೆಸಲಾಯಿತು.

ತಾಪಂ ಮಾಜಿ ಅಧ್ಯಕ್ಷ ಭದ್ರಯ್ಯ, ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಪೋಲೀಸ್ ಶಂಕರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಭೂತಿಕೆರೆ ಮಹೇಶ್ ವೀರಶೈವ ಸಂಘದ ಕಾರ್ಯದರ್ಶಿ ರೇವಣ್ಣ, ವಿದ್ವಾನ್ ಚಂದ್ರಶೇಖರಯ್ಯ, ನಗರಸಭಾ ಸದಸ್ಯ ಮಂಜುನಾಥ್, ಬಿಜೆಪಿ ಗ್ರಾ ಮಂಡಲ ಅಧ್ಯಕ್ಷ ಜಗದೀಶ್, ಮುಖಂಡರಾದ ಶಿವಕುಮಾರಸ್ವಾಮಿ, ಹೊನ್ನಶೆಟ್ಟಿ ರಾಜಣ್ಣ, ಚಿಕ್ಕೇನಹಳ್ಳಿ ಸಿ.ನಾಗರಾಜು, ವಿಭೂತಿಕೆರೆ ಶಿವಲಿಂಗಯ್ಯ, ರುದ್ರದೇವರು, ಸುಗ್ಗನಹಳ್ಳಿ ಮಹದೇವ್, ಶಿವಾನಂದ, ಬೆಂಕಿ ಮಹದೇವ್, ಗುರುಲಿಂಗಯ್ಯ, ಬಸವರಾಜು, ವಿಜಯಕುಮಾರ್, ರಾಜಶೇಖರ್, ವೆಂಕಟೇಶ್, ಗೂಳಿಕುಮಾರ್, ಕಿಶನ್‌ಗೌಡ, ಶಿವಶಂಕರಯ್ಯ, ಬಸವರಾಜು, ಅರ್ಚಕ ಬಸವರಾಜು, ಶಂಕರ್, ಬೇಕರಿ ಶಿವಕುಮಾರ್, ಪೈಂಟ್ ರಾಜಣ್ಣ, ಯತೀಶ್, ರೇಣುಕಾಪ್ರಸಾದ್, ರವಿ ಹಾಜರಿದ್ದರು.1ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಹಳೇ ಬಸ್ ನಿಲ್ದಾಣದ ದೇವೇಗೌಡ ಕಾಂಪ್ಲೆಕ್ಸ್ ಮುಂಭಾಗ ಸೋಮವಾರ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗಳವರ 117 ನೇ ವರ್ಷದ ಜಯಂತ್ಯುತ್ಸವ ಆಚರಿಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ