ಹಿರಿಯ ವಿದ್ಯಾರ್ಥಿನಿಯರಿಗೆ ತವರು ಮನೆ ಇದ್ದಂತೆ

KannadaprabhaNewsNetwork |  
Published : May 12, 2026, 01:30 AM IST
9999 | Kannada Prabha

ಸಾರಾಂಶ

ಈ ಕಾಲೇಜಿನೊಳಗೆ ಪ್ರವೇಶಿಸಿದಾಗ ನಮಗೆ ತವರು ಮನೆಗೆ ಬಂದಷ್ಟೇ ಸಂತೋಷವಾಗುತ್ತದೆ ಎಂದು ಬೆಂಗಳೂರಿನ ನೃಪತುಂಗ ವಿವಿ ಸಂಸ್ಥಾಪಕ ನಿರ್ದೇಶಕಿ ಮತ್ತು ಹಿರಿಯ ವಿದ್ಯಾರ್ಥಿನಿ ಡಾ. ಎಂ.ಎಸ್ ಸುಶೀಲಾಂಬಳ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರುಸಿದ್ದಗಂಗಾ ಮಹಿಳಾ ಕಾಲೇಜು ನಾಡಿನ ಪ್ರತಿಷ್ಠಿತ ಮಹಿಳಾ ಕಾಲೇಜಾಗಿದ್ದು ಇಲ್ಲಿ ಕಲಿತ ವಿದ್ಯಾರ್ಥಿನಿಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಈ ಕಾಲೇಜಿನೊಳಗೆ ಪ್ರವೇಶಿಸಿದಾಗ ನಮಗೆ ತವರು ಮನೆಗೆ ಬಂದಷ್ಟೇ ಸಂತೋಷವಾಗುತ್ತದೆ ಎಂದು ಬೆಂಗಳೂರಿನ ನೃಪತುಂಗ ವಿವಿ ಸಂಸ್ಥಾಪಕ ನಿರ್ದೇಶಕಿ ಮತ್ತು ಹಿರಿಯ ವಿದ್ಯಾರ್ಥಿನಿ ಡಾ. ಎಂ.ಎಸ್ ಸುಶೀಲಾಂಬಳ್ ಅಭಿಪ್ರಾಯಪಟ್ಟರು. ಅವರು ನಗರದ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರ ಸಂಘ ಏರ್ಪಡಿಸಿದ್ದ ಸ್ನೇಹ ಸಮ್ಮಿಲನ ಮತ್ತು ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಶ್ರೀ ಸಿದ್ಧಗಂಗಾ ಮಠ ಒಂದು ಮೌಲ್ಯ ಸಂಸ್ಕಾರಗಳನ್ನು ಪ್ರತಿಪಾದಿಸುವ ಜ್ಞಾನದೇಗುಲ ಜಾತಿ ರಹಿತ ಸಮಾಜದ ನಿರ್ಮಾಣ ಮಾಡಲು ಪೂಜ್ಯರು ತಮ್ಮ ಮಠದಲ್ಲಿ ಜಾತ್ಯತೀತವಾಗಿ ಎಲ್ಲಾ ಮಕ್ಕಳಿಗೂ ಪ್ರವೇಶ ನೀಡಿ ಅವರಲ್ಲಿ ಸಮಾನತೆಯ ಬೀಜವನ್ನು ಬಿತ್ತುತ್ತಿದ್ದಾರೆ. ಅಂತಹ ಸಂಸ್ಥೆಯೊಂದರಲ್ಲಿ ನಾವು ಕಲಿತಿರುವುದೇ ನಮ್ಮ ಪುಣ್ಯ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಪದವಿ ಕಾಲೇಜುಗಳ ಸಂಯೊಜನಾಧಿಕಾರಿ ಡಾ. ಡಿ.ಎನ್ ಯೋಗೀಶ್ವರಪ್ಪ, ಮಾತನಾಡಿ ಮಹಿಳಾ ಸಬಲೀಕರಣದ ಅಂಗವಾಗಿ ಪೂಜ್ಯ ಡಾ. ಶಿವಕುಮಾರ ಸ್ವಾಮೀಜಿಯವರಿಂದ ತುಮಕೂರು ನಗರದಲ್ಲಿ ಸ್ಥಾಪಿಸಲ್ಪಟ್ಟ ಈ ಕಾಲೇಜು ನಾಡಿಗೆ ಅಧಿಕಾರಿಗಳನ್ನು ಸೃಷ್ಠಿಸಿರುವುದಲ್ಲದೇ, ಅವರು ತಮ್ಮದೇ ಆದ ರೀತಿಯಲ್ಲಿ ಸಮಾಜದ ಅಬಿವೃದ್ದಿಗೆ ಕೊಡುಗೆ ನೀಡುತ್ತಿದ್ದಾರೆ ಎಂದರು.ಹಳೆಯ ವಿದ್ಯಾರ್ಥಿನಿಗಳನ್ನು ಸಂಸ್ಥೆಯೊಂದಿಗೆ ಸಂಪರ್ಕಿಸಲು ಅದ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಹನದ ಅಂತರವನ್ನು ಕಡಿಮೆ ಮಾಡಲು ಸಂಘ ಅವಶ್ಯಕವಾಗಿದ್ದು ಆ ಸಂಘ ವಿದ್ಯಾರ್ಥಿಗಳಲ್ಲಿ ಕಲಿತ ಕಾಲೇಜಿನ ಬಗ್ಗೆ ಹೆಮ್ಮೆಯನ್ನು ಮೂಡಿಸಲು ಸಹಕಾರಿಯಾಗುತ್ತದೆ ಎಂದ ಅವರು ಹಳೆಯ ವಿದ್ಯಾರ್ಥಿನಿಯರು ಸದಾಕಾಲ ಕಾಲೇಜಿನೊಂದಿಗೆ ಸಂಪರ್ಕವನ್ನಿಟ್ಟುಕೊಂಡರೆ ಸಂಘವನ್ನು ಬಲಿಷ್ಠಗೊಳಿಸಬಹುದು ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್.ಎಂ ದಕ್ಷಿಣಾಮೂರ್ತಿಯವರು ಮಾತನಾಡಿ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರ ಸಂಘ ಕಾಲೇಜಿನ ಅಭಿವೃದ್ದಿಗೆ ವಿಶೇಷವಾದ ಕೊಡುಗೆ ನೀಡಿದೆ. ಕಾಲೇಜಿನಲ್ಲಿನ ಒಂದು ಕೋಣೆಯನ್ನು ಸ್ಮಾರ್ಟ್‌ ರೂಂ ಆಗಿ ಮಾಡಿ ಇಂದಿನ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದ ಅವರು ತಾವೆಲ್ಲ ಸಂಘದ ಆಜೀವ ಸದಸ್ಯರು ಕಾಲೇಜಿನ ಉನ್ನತಿಗೆ ತಮ್ಮ ಸಲಹೆ ಸಹಕಾರ ಅಗತ್ಯ ಅದನ್ನು ನೀವು ನೀಡುತ್ತಿರೆಂದು ಭಾವಿಸಿದ್ದೇನೆ ಎಂದರು. ವೇದಿಕೆಯಲ್ಲಿ ಸಂಘದ ಉಪಾದ್ಯಕ್ಷ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಮುಕ್ತಾಬಸವರಾಜು ಸಂಘದ ಹಿರಿಯ ವಿದ್ಯಾರ್ಥಿನಿ ಸಹನಾ ದೊಡ್ಡಮನೆ ಮಾತನಾಡಿದರು ಸಂಘದಿಂದ ರ್ಯಾಂ ಕ್ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು ದಿವ್ಯಶ್ರೀ ಎಚ್ ಯು ರವರು ಸಂಘದ ಲೆಕ್ಕಪತ್ರಗಳನ್ನು ಮಂಡಿಸಿದರು. ಸಂಘದ ಕಾರ್ಯದರ್ಶಿ ಪಾವನ ಬಿ.ಎಸ್ ವರದಿ ವಾಚಿಸಿದರು ಉಪಾದ್ಯಕ್ಷ ಡಾ. ಸೌಮ್ಯಶ್ರೀ ಪ್ರಾಸ್ತವಿಕವಾಗಿ ಮಾತನಾಡಿದರು ಪುನೀತ ಸ್ವಾಗತಿಸಿದರು ಜಂಟಿ ಕಾರ್ಯದರ್ಶಿಗಳಾದ ಸಿ.ಎಸ್ ಶ್ವೇತರವರು ನಿರೂಪಿಸಿದರು ಡಾ. ಜಗದೀಶ್ ಎಂ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭತ್ತದ ಬೆಳೆ ರಕ್ಷಣೆಗೆ ನೀರು ಹರಿಸಲು ರವೀಂದ್ರ ಶ್ರೀಕಂಠಯ್ಯ ಆಗ್ರಹ
ನೀರಿದ್ದಾಗ ತಾತ್ಸಾರ, ಬರವಿದ್ದಾಗ ಲೆಕ್ಕಾಚಾರ..!