ಕನ್ನಡಪ್ರಭ ವಾರ್ತೆ ತಾಳಿಕೋಟೆ
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪ್ರಾರಂಭಿಸುವ ಕುರಿತು ಮಂಗಳವಾರ ಶ್ರೀಮಠಕ್ಕೆ ಆಗಮಿಸಿದ ತಾಲೂಕು ತಹಶೀಲ್ದಾರ್ ಹಾಗೂ ಸಿಬ್ಬಂದಿಗೆ ಆಶೀರ್ವದಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾಗಿಯಾಗುವುದರೊಂದಿಗೆ ಹೆಸರು ನೋಂದಣಿಗೆ ಮುಂದಾಗಬೇಕು. ಭಾರತ ದೇಶದ ಸಂವಿಧಾನದಲ್ಲಿ ನಿರ್ಣಯಿಸಿದಂತೆ ಪ್ರಕ್ರಿಯೆಯನ್ನು ಚುನಾವಣೆ ಆಯೋಗ ಮಾಡಿದೆ ಎಂದ ಅವರು, ಜಾತಿ, ಮತ, ಪಂಥ, ಧರ್ಮ ಎಲ್ಲವನ್ನು ಹೊರತು ಪಡಿಸಿ ಪ್ರತಿಯೊಬ್ಬರೂ ಈ ಕಾರ್ಯದಲ್ಲಿ ಭಾಗಿಯಾಗಬೇಕು. ಇಲ್ಲವಾದಲ್ಲಿ ವೋಟರ್ ಐಡಿ ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ ಮುಂದೆ ಪಜೀತಿಗೆ ಈಡಾಗಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ, ತಹಶೀಲ್ದಾರ್ ವಿನಯಾ ಹೂಗಾರ ಮಾತನಾಡಿ, ಎಸ್‌ಐಆರ್ ನಿಂದ ಅರ್ಹ ಮತದಾರರ ಪಟ್ಟಿ ಡಿಲೀಟ್ ಆಗುವುದಿಲ್ಲ. ಯಾರ ಹೆಸರನ್ನೂ ತಗೆಯುವುದಿಲ್ಲ. ಎಸ್‌ಐಆರ್ ಸಮಯದಲ್ಲಿ ನೀಡುವ ಪ್ರತಿ ನಮೂನೆ ತುಂಬಿ ಸಹಿ ಮಾಡಿ ಸಲ್ಲಿಸುವುದು ಕಡ್ಡಾಯವಾಗಿದೆ ಒಂದು ವೇಳೆ ಅರ್ಜಿ ತುಂಬಿ ಮರಳಿಸದಿದ್ದರೆ ಅವರ ಹೆಸರು ಡಿಲೀಟ್ ಆಗುತ್ತದೆ. ಮನೆ ಮನೆಗೆ ಬಿಎಲ್‌ಓ ಗಳಿಗೆ ಬೂತ್ ಮಟ್ಟದ ಅರ್ಜಿಗಳನ್ನು ತುಂಬಿ ಮರಳಿಸಬೇಕು ಮನೆಗಳನ್ನು ಬದಲಾವಣೆ ಮಾಡಿದ್ದಲ್ಲಿ ಮತ ನಿಮ್ಮ ಮತ ಎಲ್ಲಿದೆಯೋ ಅಲ್ಲಿಯ ಬಿಎಲ್‌ಓ ಗಳನ್ನು ಸಂಪರ್ಕಿಸಬೇಕೆಂದರು.ಬಿಎಲ್‌ಓ ಗಳು ಮನೆಗೆ ಬಂದಾಗ ಅರ್ಜಿ ತುಂಬಿಕೊಟ್ಟರೆ ಸಾಕು ಯಾವ ದಾಖಲೆ ಸಲ್ಲಿಸಬೇಕಾಗಿಲ್ಲ ಎಸ್‌ಐಆರ್ ಪ್ರತಿ ೧೦ ವರ್ಷಗಳಿಗೊಮ್ಮೆ ನಡೆಯುವ ಚುನಾವಣಾ ಆಯೋಗದ ಸಂವಿಧಾನಿತ ಪ್ರಕ್ರಿಯೆ. ಈ ಹಿಂದೆ ೨೦೦೨ರಲ್ಲಿ ನಡೆದಿತ್ತು. ಅರ್ಹರನ್ನು ಮತಪಟ್ಟಿಯಲ್ಲಿ ಉಳಿಸುವುದು ಹಾಗೂ ಅನರ್ಹ ಮತಗಳನ್ನು ಮತದಾರರ ಪಟ್ಟಿಯಿಂದ ಕೈ ಬಿಡುವುದೇ ಇದರ ಉದ್ದೇಶವಾಗಿದೆ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ ಎಂದರು.
ಸುಪರ್‌ವೈಸರ್ ರಾಜುಸಿಂಗ್ ವಿಜಾಪೂರ ಮಾತನಾಡಿ ಎಸ್‌ಐಆರ್ ವೇಳೆ ಸತ್ತವರ ಮಾಹಿತಿಯನ್ನು ತುಂಬಿ ಕೊಡಬೇಡಿ ಒಂದುವೇಳೆ ಅಂತವರ ಹೆಸರನ್ನು ನೊಂದಾಯಿಸಲು ಮುಂದಾದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.