ಬ್ರಹ್ಮಗಡ್ಡಿ ಮಠದ ಸಿದ್ಧಲಿಂಗೇಶ್ವರ ಮಹಾರಥೋತ್ಸವ

KannadaprabhaNewsNetwork |  
Published : Apr 28, 2026, 02:45 AM IST
ಪೊಟೋ ಏ.27ಎಂಡಿಎಲ್ 3. ಮುಧೋಳ ನಗರದ ಶ್ರೀ ಸಿದ್ಧಕ್ಷೇತ್ರ ಬ್ರಹ್ಮಗಡ್ಡಿ ಮಠದ ಶ್ರೀ ಸಿದ್ಧಲಿಂಗೇಶ್ವರರ 45ನೇ ಮಹಾರಥೋತ್ಸವವು ಸೋಮವಾರ ಸಂಜೆ ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯಿಂದ ಜರುಗಿತು. | Kannada Prabha

ಸಾರಾಂಶ

ಮುಧೋಳ ನಗರದ ಶ್ರೀ ಸಿದ್ಧಕ್ಷೇತ್ರ ಬ್ರಹ್ಮಗಡ್ಡಿ ಮಠದ ಶ್ರೀ ಸಿದ್ಧಲಿಂಗೇಶ್ವರರ 45ನೇ ಮಹಾರಥೋತ್ಸವವು ಸೋಮವಾರ ಸಂಜೆ ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಮುಧೋಳ

ಮುಧೋಳ ನಗರದ ಶ್ರೀ ಸಿದ್ಧಕ್ಷೇತ್ರ ಬ್ರಹ್ಮಗಡ್ಡಿ ಮಠದ ಶ್ರೀ ಸಿದ್ಧಲಿಂಗೇಶ್ವರರ 45ನೇ ಮಹಾರಥೋತ್ಸವವು ಸೋಮವಾರ ಸಂಜೆ ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯಿಂದ ಜರುಗಿತು.

ಸೋಮವಾರ ಬೆಳಗ್ಗೆ 7.15ಕ್ಕೆ ಶ್ರೀ ವೇದಮೂರ್ತಿ ಮಾದನಹಿಪ್ಪರಗಾ ಗ್ರಾಮದ ಸಿದ್ದಯ್ಯ ಕಣ್ಣಿ ಅವರ ರುದ್ರ ಅಧ್ಯಯನದೊಂದಿಗೆ ಶ್ರೀ ಸಿದ್ಧಲಿಂಗ ಋಷಿಗಳ ರುದ್ರಾಭಿಷೇಕ ಪೂಜೆ, ಬೆಳಗ್ಗೆ 10.15ಕ್ಕೆ ರಥಕ್ಕೆ ಕಳಸಾರೋಹಣ, ಮಧ್ಯಾಹ್ನ 12.30ಕ್ಕೆ ಮಹಾಪ್ರಸಾದ, ಮಧ್ಯಾಹ್ನ 2.15ಕ್ಕೆ ಕುಂಭ ಕಳಸ, ಪುರವಂತ, ಡೊಳ್ಳಿನಮೇಳ, ಝಾಂಜ್ ಪಥಕ್‌ ಹಾಗೂ ವಿವಿಧ ವಾದ್ಯ ವೈಭವಗಳೊಂದಿಗೆ ಶ್ರೀ ಸಿದ್ಧಲಿಂಗ ಋಷಿಗಳ ಅಡ್ಡಪಲ್ಲಕ್ಕಿ ಮೆರವಣಿಗೆ ಪುರಪ್ರವೇಶವಾಯಿತು.

ಏ.28ರಂದು ಬೆಳಗ್ಗೆ 7.15ಕ್ಕೆ ಶ್ರೀ ಸಿದ್ಧಲಿಂಗ ಋಷಿಗಳ ವಿಭೂತಿ ಮಹಾಪೂಜೆ, ರಾತ್ರಿ 7.15ಕ್ಕೆ ಸಂಗೀತ ಭಜನೆಯೊಂದಿಗೆ ಪತ್ರಿ ಪುಷ್ಪಗಳಿಂದ ಕೈಲಾಸ ಮಂಟಪದಲ್ಲಿ ಶ್ರೀ ಸಿದ್ಧಲಿಂಗ ಋಷಿಗಳ ಕೌದಿ ಮಹಾಪೂಜೆ ನಂತರ ಶ್ರೀ ಸಿದ್ಧಲಿಂಗ ಋಷಿಗಳ ಜಯ ಜಯಕಾರಯೊಂದಿಗೆ ಕಾರ್ಯಕ್ರಮ ಮಹಾಮಂಗಲಗೊಳ್ಳಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೇಪರ ಹಂಚಿದ ಹುಡುಗ 20 ಕೃತಿ ರಚಿಸಿದ ಸಾಹಿತಿ: ಡಾ.ವಿ.ಡಿ.ಐಹೊಳ್ಳಿ
ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯತ್ನಾಳ ಭೂಮಿಪೂಜೆ