ಸಿದ್ದಾಪುರ: ಪೊಲೀಸರಿಂದ ರಸ್ತೆ ಸುರಕ್ಷತೆ ಜಾಗೃತಿ

KannadaprabhaNewsNetwork |  
Published : Jul 21, 2026, 02:45 AM IST
ಸಂಚಾರಿ ನಿಯಮ ಅರಿವು ಮೂಡಿಸುತ್ತಿರುವ ಪಿಎಸ್‌ಐ ಮಂಜುನಾಥ್‌ | Kannada Prabha

ಸಾರಾಂಶ

ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಹೆಲ್ಮೆಟ್ ರಹಿತ ಚಾಲನೆಗೆ ದಂಡ ವಿಧಿಸುವ ಮೂಲಕ ಸಿದ್ದಾಪುರ ಪಿಎಸ್ಐ ಮಂಜುನಾಥ್ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದ್ದಾರೆ.

ಕನ್ನಡಪ್ರಭವಾರ್ತೆ ಮಡಿಕೇರಿ

ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಹೆಲ್ಮೆಟ್ ರಹಿತ ಚಾಲನೆಗೆ ದಂಡ ವಿಧಿಸುವ ಮೂಲಕ ಸಿದ್ದಾಪುರ ಪಿಎಸ್ಐ ಮಂಜುನಾಥ್ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದ್ದಾರೆ. ರಸ್ತೆ ಅಪಘಾತಗಳಲ್ಲಿ ಆಗುವ ಪ್ರಾಣಹಾನಿಯನ್ನು ತಡೆಯಲು, ಸುರಕ್ಷಿತ ಚಾಲನೆಯನ್ನು ಪ್ರೋತ್ಸಾಹಿಸಲು ಈ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ಸವಾರರನ್ನು ತಡೆದು ಮೋಟಾರು ವಾಹನ ಕಾಯ್ದೆಯಡಿ ದಂಡ ವಿಧಿಸಲಾಯಿತು. ಅಪಘಾತ ಸಂಭವಿಸಿದಾಗ ತಲೆಗೆ ಆಗುವ ಗಂಭೀರ ಗಾಯಗಳಿಂದ ಬದುಕುಳಿಯಲು ಹೆಲ್ಮೆಟ್ ಏಕೈಕ ಕವಚವಾಗಿದೆ. ಪೊಲೀಸರ ಭಯಕ್ಕಾಗಿ ಅಥವಾ ದಂಡದಿಂದ ಪಾರಾಗಲು ಹೆಲ್ಮೆಟ್ ಧರಿಸಬೇಡಿ; ನಿಮ್ಮ ಜೀವ ಮತ್ತು ಕುಟುಂಬದ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಇದೇ ಸಂದರ್ಭ ಮಂಜುನಾಥ್ ಮನವಿ ಮಾಡಿದ್ದಾರೆ. ಈ ವೇಳೆ ಪ್ರೊಬೇಷನರಿ ಎಎಸ್ಐ ಚೈತ್ರಾ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂತ್ರಜ್ಞಾನಕ್ಕಿಂತ ಓದು ಮಹತ್ವದ್ದು: ಸುನಿಲ್ ಕುಮಾರ್
ಜುಲೈ ಕೊನೆಯ ವಾರ ‘ರಾಷ್ಟ್ರೀಯ ಪತಂಗ ಸಪ್ತಾಹ’