ಸುದೀರ್ಘ ಆಡಳಿತ ಸರದಾರ ಸಿದ್ದರಾಮಯ್ಯ ಅಪರೂಪದ ನಾಯಕ

KannadaprabhaNewsNetwork |  
Published : Jan 11, 2026, 01:15 AM IST
ಚಿಕ್ಕಮಗಳೂರು ನಗರದ ಕದ್ರಿಮಿದ್ರಿ ಸಮೀಪದ ಜೀವನಸಂಧ್ಯಾ ವೃದ್ದಾಶ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮ ಯ್ಯನವರ ಸುದೀರ್ಘ ಆಡಳಿತದ ದಾಖಲೆ ಅಂಗವಾಗಿ ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್ ಸಹಯೋಗದಲ್ಲಿ ಆಯೋಜಿಸಿದ್ಧ ಅನ್ನದಾಸೋಹ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಚಿಕ್ಕಮಗಳೂರು: ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಭದ್ರಬುನಾದಿ ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುದೀರ್ಘ ಆಡಳಿತದ ಸರದಾರ. ಆಡಳಿತದಲ್ಲಿ ತಾರತಮ್ಯ ಎಸಗದೇ ಸರ್ವರಿಗೆ ಸಮಾನವಾದ ಯೋಜನೆ ಜಾರಿಗೊಳಿಸಿದವರು ಎಂದು ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಹೇಳಿದರು.

ಚಿಕ್ಕಮಗಳೂರು: ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಭದ್ರಬುನಾದಿ ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುದೀರ್ಘ ಆಡಳಿತದ ಸರದಾರ. ಆಡಳಿತದಲ್ಲಿ ತಾರತಮ್ಯ ಎಸಗದೇ ಸರ್ವರಿಗೆ ಸಮಾನವಾದ ಯೋಜನೆ ಜಾರಿಗೊಳಿಸಿದವರು ಎಂದು ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಹೇಳಿದರು.

ನಗರದ ಕದ್ರಿಮಿದ್ರಿ ಸಮೀಪದ ಜೀವನಸಂಧ್ಯಾ ವೃದ್ಧಾಶ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮ ಯ್ಯನವರ ಸುದೀರ್ಘ ಆಡಳಿತದ ದಾಖಲೆ ಅಂಗವಾಗಿ ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್ ಸಹಯೋಗದಲ್ಲಿ ಆಯೋಜಿಸಿದ್ಧ ಅನ್ನದಾಸೋಹದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್ ಮಾತನಾಡಿ ಸಿದ್ದರಾಮಯ್ಯ ರಾಜ್ಯದ ಅಹಿಂದಾ ನಾಯಕ. ಜನಪರ ಅಭಿವೃದ್ಧಿ ಮೂಲಕರ್ತವ್ಯ ಎಂದು ಭಾವಿಸಿರುವ ಮುಖ್ಯಮಂತ್ರಿಗಳಿಗೆ, ಹಿಂದೆ ಮಗನನ್ನು ಕಳೆದುಕೊಂಡ ದುಃಖದ ನಡುವೆಯೂ ದೃತಿಗೆಡದೇ ರಾಜ್ಯದ ಒಳಿತಿಗೆ ಶ್ರಮಿಸಿದ ಕಾಯಕಜೀವಿ ಎಂದು ಬಣ್ಣಿಸಿದರು.ಜೀವನಸಂಧ್ಯಾ ವೃದ್ಧಾದಾಶ್ರಮದ ಮುಖ್ಯಸ್ಥ ಹರಿಸಿಂಗ್ ಮಾತನಾಡಿ ಹಿಂದೆ ವೃದ್ಧಾಶ್ರಮಕ್ಕೆ ಕೇವಲ ೧.೯೬ ಲಕ್ಷ ಅನುದಾನ ಲಭ್ಯವಾಗುತ್ತಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ನಂತರ ಅದನ್ನು ೮ ಲಕ್ಷದವರೆಗೆ ಏರಿಸುವ ಮೂಲಕ ಹಿರಿಯ ಜೀವಗಳಿಗೆ ಸ್ಪಂದಿಸುವ ಕಾರ್ಯ ಮಾಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಸದಸ್ಯೆ ಜಯಂತಿ, ನಗರಸಭೆ ಮಾಜಿ ನಾಮಿನಿ ಸದಸ್ಯೆ ಮಲ್ಲಿಕಾ ದೇವಿ, ಮುಖಂಡರಾದ ಕುಸುಮ ಭರತ್, ಸಿದ್ದೇಶ್, ಆಶ್ರಮದ ಮೇಲ್ವಿಚಾರಕಿ ಚಂದ್ರಕಲಾ ಹಾಗೂ ವೃದ್ದರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರ ಜಾತ್ರೆಗೆ ರಾಜ್ಯದಿಂದ 25 ಸಾವಿರ ಭಕ್ತರು
ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಲಿ: ಸಮ್ಮೇಳನಾಧ್ಯಕ್ಷ ಸುರೇಶ್ ಸಂಸ್ಕೃತಿ