ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡ ಮೇಲೆ ದಲಿತರು, ಸಂವಿಧಾನ ನೆನಪಾಗಿದೆ: ಪ್ರತಾಪ್ ಸಿಂಹ

KannadaprabhaNewsNetwork |  
Published : Nov 28, 2026, 12:15 AM IST
ಪ್ರತಾಪ್ ಸಿಂಹ | Kannada Prabha

ಸಾರಾಂಶ

ಸಂವಿಧಾನಕ್ಕೆ ಅಂಬೇಡ್ಕರ್ ಬರೆದಿದ್ದ ಪೀಠಿಕೆ ಈಗ ಇಲ್ಲ. ಇಂದಿರಾ ಗಾಂಧಿ ಬರೆಸಿದ ಪೀಠಿಕೆ ಇದೆ. ತುರ್ತು ಪರಿಸ್ಥಿತಿ ಹೇರಿದವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಸಂವಿಧಾನವನ್ನೇ ಅಳ್ಳಾಡಿಸಲು ಹೋಗಿದ್ದರು. ಸಿದ್ದರಾಮಯ್ಯ ಎರಡು ಬಾರಿ ದಲಿತರಿಗೆ ಸಿಎಂ ಖುರ್ಚಿ ಕೊಡಲಿಲ್ಲ. ಈಗಲಾದರೂ ಕೊಡಬಹುದಿತ್ತು.

ಕನ್ನಡಪ್ರಭ ವಾರ್ತೆ ಮೈಸೂರು

ಸಂವಿಧಾನ ದಿನಾಚರಣೆ ಆಗಿದೆ. ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡ ಮೇಲೆ ಈಗ ದಲಿತರು, ಸಂವಿಧಾನ ನೆನಪಾಗಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ದೇಶವನ್ನು ಕಾಂಗ್ರೆಸ್ 54 ವರ್ಷ 4 ತಿಂಗಳು ಆಡಳಿತ ಮಾಡಿದೆ. 1955ರಲ್ಲಿ ನೆಹರು, 76ರಲ್ಲಿ ಇಂದಿರಾ ಗಾಂಧಿ ಎಲ್ಲರೂ ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡರು.

ಅಂಬೇಡ್ಕರ್‌ಗೆ ಭಾರತ ರತ್ನ ಕೊಡಲಿಲ್ಲ. ಅವರ ಅಂತ್ಯಕ್ರಿಯೆಗೆ ಒಂದು ಎಕರೆ ಜಾಗ ಕೂಡ ಕೊಟ್ಟಿಲ್ಲ‌. ನೆಹರು, ಇಂದಿರಾ ಗಾಂಧಿ, ಸಂಜಯ್ ಗಾಂಧಿ ಸ್ಮಾರಕಕ್ಕೆ ನೂರಾರು ಎಕರೆ ಜಾಗ ಕೊಟ್ಟರು. ಅಂಬೇಡ್ಕರ್ ಅವರು ತೀರಿಕೊಂಡಾಗ ಒಂದೇ ಒಂದು ಎಕರೆ ಜಾಗ ಕೊಡಲಿಲ್ಲ. ಅವರ ಮೃತದೇಹ ತರಲು ಪ್ಲೈಟ್ ಕೊಡಲು ಹಣ ಇರಲಿಲ್ಲ. ಈಗ ಸಂವಿಧಾನ ನೆನಪಾಗಿದೆ ಎಂದು ಕಿಡಿಕಾರಿದರು.

ಮಹದೇವಪ್ಪ ಅವರಿಗೆ ಕೈ ಕೊಟ್ಟಿದ್ದೀರ. ಸರ್ಕಾರದ ಹಣದಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ಜನರನ್ನು ಕರೆಸೋಕೆ ಹಣ ಹಂಚಿ ಬಸ್ ಕಳುಹಿಸಿದ್ದಾರೆ. ಶಾಲಾ ಮಕ್ಕಳಿಗೆ ಬಸ್ ಇಲ್ಲ. ಸಿದ್ದರಾಮಯ್ಯ ಮನಮೋಹನ್ ಸಿಂಗ್, ಅಮರ್ತ್ಯ ಸೇನ್ ಗಿಂತಲೂ ದೊಡ್ಡ ಅರ್ಥಶಾಸ್ತ್ರಜ್ಞರು ಎಂದು ಅವರು ವ್ಯಂಗ್ಯವಾಡಿದರು.

ಸಂವಿಧಾನಕ್ಕೆ ಅಂಬೇಡ್ಕರ್ ಬರೆದಿದ್ದ ಪೀಠಿಕೆ ಈಗ ಇಲ್ಲ. ಇಂದಿರಾ ಗಾಂಧಿ ಬರೆಸಿದ ಪೀಠಿಕೆ ಇದೆ. ತುರ್ತು ಪರಿಸ್ಥಿತಿ ಹೇರಿದವರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಸಂವಿಧಾನವನ್ನೇ ಅಳ್ಳಾಡಿಸಲು ಹೋಗಿದ್ದರು. ಸಿದ್ದರಾಮಯ್ಯ ಎರಡು ಬಾರಿ ದಲಿತರಿಗೆ ಸಿಎಂ ಖುರ್ಚಿ ಕೊಡಲಿಲ್ಲ. ಈಗಲಾದರೂ ಕೊಡಬಹುದಿತ್ತು ಎಂದು ಕುಟುಕಿದರು.

ದಲಿತರ ಬಗ್ಗೆ ನಿಜವಾಗಿ ಪ್ರೇಮ ಕಾಳಜಿ ಇರೋದು ಬಿಜೆಪಿಗೆ. ಮಾಯಾವತಿ ಅವರನ್ನು ಎರಡು ಬಾರಿ ಸಿಎಂ ಮಾಡಿದ್ದು ಬಿಜೆಪಿ‌. ನಿಮ್ಮ ವೋಟ್ ಬ್ಯಾಂಕ್ ಪ್ರೇಮ ಗೊತ್ತಿದೆ. ಸತ್ಯ ಮಾತನಾಡಿ ಸಿದ್ದರಾಮಯ್ಯನವರೇ ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕದಾಸರ ಸಮಾನತೆ, ಮಾನವೀಯ ಸಂದೇಶ ಇಂದಿಗೂ ಪ್ರಸ್ತುತ: ಜಯರಾಮ್
ಕನಕದಾಸರ ಸಮಾಜಮುಖಿ ಸಂದೇಶಗಳು ಸಾರ್ವಕಾಲಿಕ ಸತ್ಯ-ಶಾಸಕ ಮಾನೆ