ಕರ್ನಾಟಕದಲ್ಲಿ ಪಿಎಫ್ಐ, ಎಸ್‌ಡಿಪಿಐ ಹಾವಳಿ ಹೆಚ್ಚಾಗಲು ಕೇರಳದ ಕಾಕಾಗಳೇ ಕಾರಣ: ಪ್ರತಾಪ್ ಸಿಂಹ

KannadaprabhaNewsNetwork |  
Published : Nov 28, 2026, 12:15 AM IST
47 | Kannada Prabha

ಸಾರಾಂಶ

ರಾಜ್ಯದಲ್ಲಿ ನಡೆದ ಹಿಂದೂ ಮುಖಂಡರ ಹತ್ಯೆಗಳ ಹಿಂದೆ ಇರೋದು ಯಾರು? ಹಿಂದೂ ಹೆಸರಿಟ್ಟು ಕೊಂಡಿರುವ ಕೇರಳದ ಕಾಕಾಗಳು. ಕೇರಳದ ಕಾಕಾಗಳು ಹಿಂದೂಗಳ ಹೆಸರಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇಸ್ಮಾಯಿಲ್, ಮುಬಾರಕ್ ಅಂತಾ ನಿಮ್ಮ ನಿಜವಾದ ಹೆಸರು ಇಟ್ಟುಕೊಂಡು ವ್ಯಾಪಾರ ಮಾಡಿ.

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕದಲ್ಲಿ ಪಿಎಫ್ಐ, ಎಸ್ ಡಿಪಿಐನವರ ಹಾವಳಿ ಹೆಚ್ಚಾಗಲು ಕೇರಳದ ಕಾಕಾಗಳೇ ಕಾರಣ. ಕೇರಳದ ಕಾಕಾಗಳು ಕರ್ನಾಟಕಕ್ಕೆ ಯಾಕೆ ಬರಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.

ನಗರದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತರಕಾರಿ ಖರೀದಿಗೆ ಬರುತ್ತಿದ್ದವರು ಈಗ ಜಮೀನು ಮಾಲೀಕರಾಗಿ ಕರ್ನಾಟಕದ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ. ಕೇರಳದ ಕಾಕಾಗಳಿಂದ ಈ ನಾಡಿನ ಸಂಸ್ಕೃತಿ ಕೆಡುತ್ತಿದೆ. ಮೈಸೂರು, ಬೆಂಗಳೂರಿನಲ್ಲಿ ಕೇರಳದ ಕಾಕಾಗಳ ಹಾವಳಿ ಹೆಚ್ಚಾಗಿದೆ ಎಂದರು.

ರಾಜ್ಯದಲ್ಲಿ ನಡೆದ ಹಿಂದೂ ಮುಖಂಡರ ಹತ್ಯೆಗಳ ಹಿಂದೆ ಇರೋದು ಯಾರು? ಹಿಂದೂ ಹೆಸರಿಟ್ಟು ಕೊಂಡಿರುವ ಕೇರಳದ ಕಾಕಾಗಳು. ಕೇರಳದ ಕಾಕಾಗಳು ಹಿಂದೂಗಳ ಹೆಸರಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಇಸ್ಮಾಯಿಲ್, ಮುಬಾರಕ್ ಅಂತಾ ನಿಮ್ಮ ನಿಜವಾದ ಹೆಸರು ಇಟ್ಟುಕೊಂಡು ವ್ಯಾಪಾರ ಮಾಡಿ. ಇವರನ್ನು ಹೀಗೇ ಬಿಟ್ಟರೆ ಎಲ್ಲಾ ಕಡೆಯೂ ಛೋಟಾ ಜಾರ್ಜ್, ಛೋಟಾ ಹ್ಯಾರೀಸ್ ಗಳು ಶಾಸಕರಾಗುತ್ತಾರೆ ಎಂದರು.

ಕೇರಳದಲ್ಲಿನ ಹಿಂದೂಗಳು ಕೂಡ ಅಲ್ಲಿನ ಕಾಕಾಗಳಿಂದ ಅಪಾಯದಲ್ಲಿದ್ದಾರೆ. ಕೇರಳದಲ್ಲಿನ ಹಿಂದೂಗಳು ಜಾತಿ ಹೆಸರಲ್ಲಿ ಛಿದ್ರವಾಗದೇ ಒಂದಾಗಬೇಕು. ಕೇರಳದ ಕಾಕಾಗಳಿಂದ ಕೊಡಗು ಅಪಾಯದಲ್ಲಿದೆ. ಕೇರಳದವರು ನಮ್ಮಲಿ ಯಾಕೆ ಓದಲು ಬರಬೇಕು? ನಮ್ಮಲಿ ಯಾಕೆ ಕೆಲಸಕ್ಕೆ ಬರಬೇಕು? ಕನ್ನಡಿಗರು ಕೇರಳಕ್ಕೆ ಪ್ರವಾಸ, ದೇವಸ್ಥಾನಕ್ಕೆ ಹೋಗುತ್ತಾರೆ. ಕೆಲಸಕ್ಕಾಗಿ ನಾವೇನು ಅಲ್ಲಿಗೆ ಹೋಗಲ್ಲ. ಕೇರಳದವರು ಅಲ್ಲೇ ಶಿಕ್ಷಣ ಸಂಸ್ಥೆ, ಕೈಗಾರಿಕೆಗಳನ್ನು ಮಾಡಿಕೊಳ್ಳಲಿ. ಕೇರಳಿಗರು ನಮ್ಮಲಿಗೆ ಬರುವುದು ಬೇಡ. ಕೇರಳದ ಕಾಕಾಗಳಿಂದ ಇಡೀ ಕರ್ನಾಟಕಕ್ಕೆ ಕಂಟಕ ಬಂದಿದೆ. ಕರ್ನಾಟಕ ಎಲ್ಲರಿಗೂ ನಿರಾಶ್ರಿತರ ತಾಣವಾಗಿದೆಯಾ ಎಂದು ಅವರು ಪ್ರಶ್ನಿಸಿದರು.

ಕೊಡವರಿಗೆ ಕೇರಳದವರಿಂದ ಅಪಾಯ:

ಮೊನ್ನೆ ಕೊಡಗಿನ ಗೋಣಿಕೊಪ್ಪದಲ್ಲಿ ನಾನು ಮಾತನಾಡಿದೆ. ಕೊಡಗಿನ ಪ್ರತಿನಿಧಿಯಾಗಿ 10 ವರ್ಷ ಇದ್ದೆ. ಕೊಡವರು, ಕೊಡಗಿನ ಸಂಸ್ಕೃತಿ ಅಂದ್ರೆ ಕೇವಲ ಪುತ್ತರಿ ಕಾವೇರಮ್ಮ ಅಷ್ಟೇ ಅಲ್ಲ. ನಮ್ಮ ತೋಟ, ಭತ್ತದ ಭೂಮಿ ಹಾಳು ಆಗ್ತಿದೆ. ಕೇರಳದವರಿಗೆ ಮಾರಾಟ ಆಗ್ತಿದೆ. ಕಾಫಿ ತೋಟ, ಗದ್ದೆ ಎಲ್ಲವನ್ನೂ ಉಳಿಸಿಕೊಳ್ಳಿ ಎಂದು ಹೇಳಿದ್ದೆ. ಯಾವುದೇ ಕಾರಣಕ್ಕೂ ಮಾರಾಟ ಮಾಡೋದು ಬೇಡ ಅಂದೆ‌. ನಾನು ಕೇರಳದವರು ಅಂತ ಹೇಳಿದ್ದೇನೆ ಎಂದುರು.

ಕೊಡಗಿನ ಮಲಯಾಳಿ ಹಿಂದೂಗಳು ದೂರು ಕೊಟ್ಟಿದ್ದಾರೆ‌. ಅವರು ಕೂಡ ನಮ್ಮ ಸಂಸ್ಕೃತಿ ಉಳಿಸಬೇಕು. ಕೇರಳದಲ್ಲಿ ನಮ್ಮ ಸಂಸ್ಕೃತಿ ಉಳಿಯುತ್ತಿಲ್ಲ. ನಾನು ಕೇರಳದಿಂದ ಬರುತ್ತಿರುವ ಹಿಂದೂ ವಿರೋಧಿ ಕಾಕರಿಗೆ ಹೇಳಿದ್ದೇನೆ. ಕೊಡಗಿನ ಸೋಮವಾರಪೇಟೆಯಲ್ಲಿ ಪಾಕಿಸ್ತಾನ ಬಾವುಟ ಹಾರಿಸಿದ್ದು ಯಾರು? ಟಿಪ್ಪು ಜಯಂತಿ ಮಾಡಬೇಕು ಅಂತ ಸಿದ್ದರಾಮಯ್ಯ ಹೋದರು. ಅದನ್ನು ವಿರೋಧ ಮಾಡಿದ್ದ ಕುಟ್ಟಪ್ಪನನ್ನು ಕೊಂದವರು ಯಾರು? ಪ್ರವೀಣ್ ಪೂಜಾರಿಯನ್ನು ಕೊಂದು ಹಾಕಿದವರು ಯಾರು? ಗಣೇಶನ ಕುತ್ತಿಗೆ ಸೀಳಿದ್ದು ಯಾರು? ಮಡಿಕೇರಿ ನಗರಸಭೆಯಲ್ಲಿ ಬೀಫ್ ಮಾರಾಟ ಮಾಡ್ತೀವಿ ಅಂತ ಹೇಳಿದ್ದು ಯಾರು? ಇಂತಹ ಕೇರಳದವರು ಬಂದ್ರೆ ನಮ್ಮ ಸಂಸ್ಕೃತಿ ಉಳಿಯಲ್ಲ ಅಂತ ನಾನು ಹೇಳಿದ್ದೇನೆ. ಕೊಡಗಿನಲ್ಲಿ ಇರುವವರಿಗೂ ಇದಕ್ಕೂ ಸಂಬಂಧ ಇಲ್ಲ. ನಾನು ಹೇಳಿದವರು ಕಳ್ಳ ಕಾಕರ ತರಹ ಸುಮ್ಮನಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಗುಂಡ್ಲುಪೇಟೆಯ ಸುಲ್ತಾನ್ ಬತೇರಿ, ಎಚ್.ಡಿ. ಕೋಟೆಯಲ್ಲಿ ಏನು ಆಗ್ತಿದೆ. ಈ ಮೊದಲು ಕೇರಳದವರು ದಿನಸಿ ತೆಗೆದುಕೊಂಡು ಹೋಗೋಕೆ ಬರುತ್ತಿದ್ರು. ಈಗ ಗುಂಡ್ಲುಪೇಟೆ, ಎಚ್.ಡಿ. ಕೋಟೆ, ಹುಣಸೂರು, ಪಿರಿಯಾಪಟ್ಟಣಕ್ಕೆ ಬಂದು ನಿಮ್ಮ ತೋಟ ತೆಗೆದುಕೊಂಡು ಕೂತಿದ್ದಾರೆ. ಹೊಟೇಲುಗಳಲ್ಲಿ ಹೆಸರು ಬದಲಾವಣೆ ಮಾಡಿಕೊಂಡು ಕೂತಿದ್ದಾರೆ‌. ಇವತ್ತು ನಮ್ಮ ಹೆಸರನ್ನು ಅವರು ಇಟ್ಟುಕೊಂಡು ವ್ಯಾಪಾರ ಮಾಡ್ತಿದ್ದಾರೆ. ಹಿಂದೂ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇಸ್ಮಾಯಿಲ್ ಮುಬಾರಕ್ ಹೆಸರು ಬಿಟ್ಟು ಸ್ವಾಗತ್, ಬಿಕೆ ವಿಕೆ ಅಂತೆಲ್ಲ ಹೆಸರು ಇಟ್ಟುಕೊಂಡಿದ್ದಾರೆ‌. ಇವರಿಂದ ನಮ್ಮ ಸಂಸ್ಕೃತಿ ಉಳಿಯೋದಿಲ್ಲ. ಹಾಗಾಗಿ ಹೇಳಿದ್ದೇನೆ ಎಂದರು.

ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಬಿಟ್ಟು ನಮ್ಮ ನಾಡಿನ ಉಳಿವಿಗಾಗಿ ನಾವು ಹೋರಾಟ ಮಾಡಬೇಕು. ದೇಶ ಅಂತ ಬಂದಾಗ ಭಾರತ, ರಾಜ್ಯ ಅಂತ ಬಂದಾಗ ಕರ್ನಾಟಕ ಇದು ನನ್ನ ಬದ್ಧತೆ. ಕೇರಳದ ಹಿಂದೂಗಳು ಕೂಡ ಎಚ್ಚರಿಕೆಯಿಂದ ಇರಬೇಕು‌.

ಅಲ್ಲಿನ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಿ. ಹಿಂದೂಗಳಾಗಿ ಒಗ್ಗಟ್ಟಾಗಿರಿ ಎಂದು ಅವರು ಕರೆ ನೀಡಿದರು.

ತಮಿಳುನಾಡಿನ ಕಾರ್ತಿಕ ಬೆಟ್ಟದಲ್ಲಿ ದೀಪ ಹಚ್ಚಲು ತೊಂದರೆಯಾಗಿದ್ದು ಯಾರಿಂದ? ಅಲ್ಲಿನ ಮುಸ್ಲಿಮರಿಂದ, ಕನ್ವರ್ಟ್ ಆಗಿರೋ ಜೋಸೆಪ್ ವಿಜಯ್ ಬಂದಿರೋದಕ್ಕೆ ಈಗ ಅಲ್ಲಿನ ಮುರುಗ ದೇವರಿಗೆ ದೀಪ ಹಚ್ಚಲು ಆಗುತ್ತಿಲ್ಲ. ಇದು ನಮ್ಮ ರಾಜ್ಯದಲ್ಲಿ ಆಗಬಾರದು‌. ಹಾಗಾಗಿ ಈ ಮಾತನ್ನು ಹೇಳಿದ್ದೇನೆ‌ ಎಂದರು.

ಕನ್ನಡಿಗರ ನೆಲ ಜಲ ಆಕ್ರಮಣ ಆಗ್ತಿರೋದಕ್ಕೆ ನನ್ನ ವಿರೋಧವಿದೆ. ಕೊಡವರಿಗೆ ಕೇರಳದವರಿಂದ ಅಪಾಯವಿದೆ‌. ಕೇರಳದವರು ಕೊಡಗಿ‌ನಲ್ಲಿ ಜಾಸ್ತಿಯಾಗಿದ್ದಾರೆ‌ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ 21 ಕುಲಕಸುಬುಗಳ 50 ಕುಟುಂಬಗಳಿಗೆ ಸನ್ಮಾನ
ಸಮಾಜದಲ್ಲಿದ್ದ ಜಾತಿ ವ್ಯವಸ್ಥೆ ವಿರುದ್ಧ ಸಮರ ಸಾರಿದ ಸಂತ