The caste system in society

- ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ರಮೇಶ ಪೆದ್ದೆಕನ್ನಡಪ್ರಭ ವಾರ್ತೆ ಕಮಲನಗರ

ಕನಕದಾಸರು ಕೇವಲ ಒಂದು ಜಾತಿಗೆ ಸೀಮಿತವಾದ ಭಕ್ತರಲ್ಲ, ಅವರು ಇಡೀ ಮನುಕುಲಕ್ಕೆ ಬೇಕಾದ ದಾರ್ಶನಿಕರು. 15-16ನೇ ಶತಮಾನದಲ್ಲೇ ಸಮಾಜ ದಲ್ಲಿದ್ದ ಜಾತಿ ವ್ಯವಸ್ಥೆ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಸಮರ ಸಾರಿದ ಮಹಾನ್ ಸಂತ ಎಂದು ತಹಶೀಲ್ದಾರ್ ರಮೇಶ ಪೆದ್ದೆ ಹೇಳಿದರು.

ಕಮಲನಗರ ಪಟ್ಟಣದ ತಹಸೀಲ್ ಕಛೇರಿಯ ಸಭಾಂಗಣದಲ್ಲಿ ಶುಕ್ರವಾರ 539ನೇ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಕನಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಮುಖಂಡ ರವಿಚಂದ್ರ ಮಾತನಾಡಿ, ಕನಕದಾಸರು ಕೀರ್ತನೆ ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಂಗೀತ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ''''''''ಮೋಹನತರಂಗಿಣಿ'''''''', ''''''''ನಳಚರಿತ್ರೆ'''''''', ''''''''ರಾಮಧಾನ್ಯ ಚರಿತೆ ಹಾಗೂ ಹರಿಭಕ್ತಿಸಾರ ದಂತಹ ಶ್ರೇಷ್ಠ ಕಾವ್ಯಕೃತಿಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.

ತಾಪಂ ಇಒ ಹಣಮಂತರಾಯ ಕೌಟಗೆ ಮಾತನಾಡಿ, ''''''''ದಾಸಶ್ರೇಷ್ಠ ಕನಕದಾಸರು ಸಮಾಜದಲ್ಲಿನ ಮೂಢನಂಬಿಕೆ, ಜಾತಿ ಪದ್ಧತಿ ಸೇರಿದಂತೆ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಮಹಾನ್ ದಾರ್ಶನಿಕರು. ಇವರ ಜೀವನ ತತ್ತ್ವಗಳು ಇಂದಿನ ಪೀಳಿಗೆಗೆ ಮಾದರಿ ಎಂದರು.

ಗ್ರಾಮದ ನರಸಿಂಗ ಮೇತ್ರೆ, ಜ್ಞಾನೇಶ್ವರ ಹಿಪ್ಪಳಗಾಂವ, ನರೇಶ ಹಿಪ್ಪಳಗಾಂವೆ, ಸತೀಷ ಭುರೆ, ಹಾಗೂ ತಹಶೀಲ ಕಚೇರಿ ಸಿಬ್ಬಂದಿ ವರ್ಗದವರು ಹಾಜರಿದ್ದರು.

--

ಚಿತ್ರ 27ಬಿಡಿಆರ್52:

ಕಮಲನಗರ ಪಟ್ಟಣದ ತಹಸೀಲ್‌ ಕಛೇರಿ ಸಭಾಂಗಣದಲ್ಲಿ ತಹಶೀಲ್ದಾರ್ ರಮೇಶ ಪೆದ್ದೆ ಅವರು ಕನಕದಾಸರ ಜಯಂತಿ ಕಾರ್ಯಕ್ರಮ ಜರುಗಿತು.