ನರಗುಂದ: ರಾಜ್ಯದಲ್ಲಿ ಎರಡು ಅವಧಿಯಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಅಭಿವೃದ್ಧಿ ಮಾಡಿದ್ದಾರೆ. ಮೇಲಾಗಿ ಅವರು ಎಲ್ಲ ವರ್ಗದ ನಾಯಕರಾಗಿದ್ದರೆಂದು ಮಾಜಿ ಶಾಸಕ ಬಿ.ಆರ್. ಯಾವಗಲ್ಲ ತಿಳಿಸಿದರು.
ರಾಜ್ಯದಲ್ಲಿ ಹಿಂದುಳಿದ ರೈತ ಕುಟುಂಬದಿಂದ ಬಂದ ಸಿದ್ದರಾಮಯ್ಯನವರು ಕಡುಬಡತನದಲ್ಲಿ ಕಾನೂನು ಪದವಿ ಮುಗಿಸಿ ಆನಂತರ ರಾಜಕಾರಣಕ್ಕೆ ಬಂದು ಶಾಸಕರಾಗಿ, ಸಚಿವರಾಗಿ, ಹಲವಾರು ರೀತಿ ರಾಜ್ಯದಲ್ಲಿ ತಮ್ಮಗೆ ವಹಿಸಿದ ಖಾತೆಯನ್ನು ನಿಭಾಹಿಸಿ ಮುಂದೆ ಮುಖ್ಯಮಂತ್ರಿಗಳಾಗಿ ಯಾವುದೇ ಒಂದು ವರ್ಗಕ್ಕೆ ಸಿಮೀತ ಎನ್ನದೆ ಎಲ್ಲ ವರ್ಗದ ಜನರಗೆ ಹಲವಾರು ರೀತಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ ಕೀರ್ತಿ ಸಿಎಂ ಅವರಿಗೆ ಸಲ್ಲುತ್ತದೆ ಎಂದರು.
ಕರ್ನಾಟಕ ಕುರುಬ ಸಮಾಜದ ಅಧ್ಯಕ್ಷ ನೀಲಪ್ಪ ಗುಡದಣ್ಣವರ, ಕನಕದಾಸ ಕಲ್ಯಾಣ ಸಮಿತಿ ಅಧ್ಯಕ್ಷ ಫಕೀರಪ್ಪ ಸವದತ್ತಿ, ಬಾಬು ಹಿರೇಹೊಳಿ, ಸುನೀಲ ಕುಷ್ಟಗಿ, ಬೀರಪ್ಪ ದುಂಡಿ, ಅನೀಲ ಧರಿಯಣ್ಣವರ, ಎಚ್.ಬಿ. ಅಸೂಟಿ, ಎಸ್.ಐ. ಅಂಕಲಿ, ರಾಜು ಕಲಾಲ, ಸಾಬಣ್ಣ ಸವದತ್ತಿ, ಎಸ್.ಬಿ. ದಂಡಿನ, ಚಂದ್ರಶೇಖರ ದಂಡಿನ, ನೀಲಪ್ಪ ಮಾತರಂಗಿ, ದೇವಪ್ಪ ಹಟ್ಟಿ, ಪ್ರೊ. ಪಿ.ಎಸ್. ಅಣ್ಣಗೇರಿ, ಮಂಜು ಮೆಣಸಗಿ, ಬಸವರಾಜ ವಾಸನ, ಉಮೇಶ ಹಿರೇಹೊಳಿ, ಸುನೀಲ ಕಳಸಣ್ಣವರ, ವೆಂಕಣ್ಣ ಹೊನಕೇರಿ, ಪ್ರವೀಣ ಯಾಗವಗಲ್, ಮಲ್ಲಪ್ಪ ಗೋನಾಳ, ಡಿ.ಎಸ್. ಹಣಿಸಿ, ಪ್ರಭು ಭಾವಿಕಟ್ಟಿ ಇತರರು ಇದ್ದರು.