ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ: ಎಂ.ಲಕ್ಷ್ಮಣ್

KannadaprabhaNewsNetwork |  
Published : Aug 13, 2025, 12:30 AM IST
52 | Kannada Prabha

ಸಾರಾಂಶ

13 ಬಜೆಟ್ ಮಂಡಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದಾರೆ, ತಮ್ಮ ರಾಜಕೀಯ ಜೀವನದಲ್ಲಿ ಕಳಂಕರಹಿತರಾಗಿ ದುಡಿದಿದ್ದಾರೆ, ಅವರ ವಿರುದ್ಧ ಪಿತೂರಿ ನಡೆಸಿದ ಬಿಜೆಪಿ ಎಂಡಿಎ ಹಗರಣದಲ್ಲಿ ಅವರ ಕುಟುಂಬವನ್ನು ಗುರಿ ಮಾಡಿ ಅಪಪ್ರಚಾರ ನಡೆಸಿತ್ತು, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪಿತೂರಿ ನಡೆಸಿದ ಇಡಿ ಗೆ ಛಿಮಾರಿ ಹಾಕಿದೆ, ಸಿದ್ದರಾಮಯ್ಯ ರಾಜ್ಯದ ನಮ್ಮ ಪ್ರಶ್ನಾತೀತ ನಾಯಕ.

ಕನ್ನಡಪ್ರಭ ವಾರ್ತೆ ನಂಜನಗೂಡು

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ, ಬಡವರ, ಶೋಷಿತ ವರ್ಗಗಳ ಪರವಾದ ಧ್ವನಿಯಾಗಿ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ, ಅವರಿಗೆ ದೇವರು ಆಯಸ್ಸು, ಆರೋಗ್ಯ ನೀಡಲಿ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.

ತಾಲೂಕಿನ ತಾಂಡವಪುರದಲ್ಲಿ ಮಂಗಳವಾರ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ಬಟ್ಟೆ ವಿತರಣೆ ಮತ್ತು ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬವನ್ನು 40 ವರ್ಷಗಳಿಂದ ಅವರ ಒಡನಾಡಿಯಾಗಿರುವ ಬಿ.ಎಂ. ರಾಮು ಅವರ ನೇತೃತ್ವದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಆಚರಿಸಲಾಗುತ್ತಿದೆ, ಸಿದ್ದರಾಮಯ್ಯ ಅವರು ಚುನಾವಣೆ ಸಂದರ್ಭದಲ್ಲಿ ಜನರಿಗೆ ವಾಗ್ದಾನ ನೀಡಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದು ರಾಜ್ಯದಲ್ಲಿ ಬಡತನ ನಿವಾರಣೆಗೆ ಕಾರಣರಾಗಿದ್ದಾರೆ, 13 ಬಜೆಟ್ ಮಂಡಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದಾರೆ, ತಮ್ಮ ರಾಜಕೀಯ ಜೀವನದಲ್ಲಿ ಕಳಂಕರಹಿತರಾಗಿ ದುಡಿದಿದ್ದಾರೆ, ಅವರ ವಿರುದ್ಧ ಪಿತೂರಿ ನಡೆಸಿದ ಬಿಜೆಪಿ ಎಂಡಿಎ ಹಗರಣದಲ್ಲಿ ಅವರ ಕುಟುಂಬವನ್ನು ಗುರಿ ಮಾಡಿ ಅಪಪ್ರಚಾರ ನಡೆಸಿತ್ತು, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪಿತೂರಿ ನಡೆಸಿದ ಇಡಿ ಗೆ ಛಿಮಾರಿ ಹಾಕಿದೆ, ಸಿದ್ದರಾಮಯ್ಯ ರಾಜ್ಯದ ನಮ್ಮ ಪ್ರಶ್ನಾತೀತ ನಾಯಕ ಎಂದು ಹೇಳಿದರು.

ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು ಮಾತನಾಡಿ, ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಸ್ವತಃ ಬಡವರ ಭವಣೆ ಅರಿತಿದ್ದ ಅವರು ಬಡವರಿಗಾಗಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು, ಕ್ಷೇತ್ರ ವಿಗಂಡನೆಯ ಸಂದರ್ಭದಲ್ಲಿ ನಮ್ಮ ವರುಣ ಕ್ಷೇತ್ರದ ಅಭಿಮಾನಿಗಳು ಸಿದ್ದರಾಮಯ್ಯನವರ ಮನೆ ಮುಂದೆ ಧರಣಿ ನಡೆಸಿ ವರುಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವೊಲಿಸಿದರು. ಇಲ್ಲಿಂದಲೇ ಸ್ಪರ್ಧಿಸಿ ಗೆದ್ದು ಮುಖ್ಯಮಂತ್ರಿಯಾದರು, 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅವರ ನೇತೃತ್ವದಲ್ಲಿ ಚುನಾವಣೆ ನಡೆಸಿ ಸಿದ್ದರಾಮಯ್ಯ ಮೂರನೆ ಬಾರಿಗೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದರು.

ಪೌರಕಾರ್ಮಿಕರನ್ನು ಗೌರವಿಸಿ, ಬಟ್ಟೆ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಅಗತ್ಯ ಪರಿಕರಗಳನ್ನು ವಿತರಿಸಲಾಯಿತು, ನಂತರ ಅನ್ನಸಂತರ್ಪಣೆ ನಡೆಯಿತು.

ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಮುಖಂಡರಾದ ಬಿ.ಆರ್. ರಾಕೇಶ್, ಹುಚ್ಚೇಗೌಡ, ಬಿ.ಎಂ. ನಾಗರಾಜು, ಅರ್ಕೇಶ್, ನಾರಾಯಣ, ರವಿ, ಪುನೀತ್, ಶಂಕರ್, ಗ್ರಾಪಂ ಅಧ್ಯಕ್ಷ ಮಹದೇವು, ಗ್ರಾಪಂ ಸದಸ್ಯರಾದ ಗಿರೀಶ್, ಶಿವರಾಜು, ಟಿ.ಜೆ.ಮಹದೇವು, ಪ್ರಭುಸ್ವಾಮಿ, ವಿಶ್ವನಾಥ್, ಬಿ.ಬಿ. ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಆನಂದ, ಮಾಜಿ ಉಪಾಧ್ಯಕ್ಷ ಮಹದೇವು, ಬಂಚಳ್ಳಿಹುಂಡಿ ಮತ್ತು ತಾಂಡವಪುರ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.

ಸಾಮಾಜಿಕ ಚಟುವಟಿಕೆ ಮೂಲಕ ಸಿಎಂ ಸಿದ್ದರಾಮಯ್ಯ ಅರ್ಥಪೂರ್ಣ ಆಚರಣೆ

ಕನ್ನಡಪ್ರಭ ವಾರ್ತೆ ನಂಜನಗೂಡು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಸಾಮಾಜಿಕ ಚಟುವಟಿಕೆ ಮೂಲಕ ಅರ್ಥಪೂರ್ಣವಾಗಿ ಆಚರಣೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ದಕ್ಷಿಣಮೂರ್ತಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ ತೊರೆಮಾವು ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಅರ್ಥ ನಿಘಂಟು, ಪುಸ್ತಕ ಹಾಗೂ ಲೇಖನಿ ವಿತರಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರು ಈ ದೇಶ ಕಂಡ ಧೀಮಂತ ರಾಜಕಾರಣಿ, ಅವರ ಜನಪರ ಆಡಳಿತ ಇಡೀ ದೇಶದಲ್ಲಿ ಮಾದರಿಯಾಗಿದೆ, ಜೊತೆಗೆ ಪ್ರಧಾನಿ ಮೋದಿ ಅವರ ನಿದ್ದೆಗೆಡಿಸಿದೆ, ಬಡವರ ಪರವಾಗಿರುವ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಹುಟ್ಟುಹಬ್ಬವನ್ನು ವಿನೂತನವಾಗಿ ಸಾಮಾಜಿಕ ಚಟುವಟಿಕೆಗಳ ಮೂಲಕ ಆಚರಣೆ ನಡೆಸಲಾಗುತ್ತಿದೆ ಎಂದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು, ಬ್ರೆಡ್, ಬಿಸ್ಕೆಟ್ ವಿತರಿಸಲಾಯಿತು.

ಎಪಿಎಂಸಿ ಮಾಜಿ ಉಪಾಧ್ಯಕ್ಷ ಆರ್. ಮಹದೇವು, ಗ್ರಾಪಂ ಸದಸ್ಯರಾದ ಗಿರೀಶ್, ಪದ್ಮಪಾಣಿ, ಪ್ರಭುಸ್ವಾಮಿ, ಬೀರಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಅಭಿಷೇಕ್, ಡಿಸಿಸಿ ಸದಸ್ಯ ಪ್ರಭುಸ್ವಾಮಿ, ಧರ್ಮರಾಜ್, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗಿರೀಶ್, ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರು ಇದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ