- ಮೋದಿ ಆಡಳಿತದಲ್ಲಿ ದೇಶ ಬಡವಾಗಿದೆಕನ್ನಡಪ್ರಭ ವಾರ್ತೆ ಕೊಪ್ಪಳ
ಕೊಪ್ಪಳದಲ್ಲಿ ಕಾಂಗ್ರೆಸ್ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಬೇಕು. ಅವರಂತಹ ಜನಪರ ವ್ಯಕ್ತಿ ಮತ್ತೊಬ್ಬರಿಲ್ಲ. ನಾನು ಸಿದ್ದರಾಮಯ್ಯ ಅವರು ಸಿಎಂ ಆಗಿರಬೇಕು ಎಂದುಕೊಂಡವನು, ನಾನೇನು ಮಂತ್ರಿಯಾಗಬೇಕು ಎಂದೇನಿಲ್ಲ. ಮಂತ್ರಿಯಾಗಿ ದುಡ್ಡು ಮಾಡುವ ಅಗತ್ಯವೂ ನನಗಿಲ್ಲ. ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಹುದ್ದೆಯನ್ನು ನಾನು ಕೇಳಿ ಪಡೆದಿಲ್ಲ, ಕೇಳಿದರೆ ಇಂದೇ ರಾಜೀನಾಮೆ ನೀಡುತ್ತೇನೆ ಎಂದರು.
ನಾನು ಮತ್ತು ಸಿದ್ದರಾಮಯ್ಯ ಏಕಕಾಲಕ್ಕೆ ರಾಜಕೀಯಕ್ಕೆ ಬಂದಿದ್ದು, ನಾವ್ಯಾರು ದುಡ್ಡು ಮಾಡಲು ರಾಜಕೀಯಕ್ಕೆ ಬಂದಿಲ್ಲ. ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇವೆ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶ ಬಡವಾಗಿದೆ. ಶ್ರೀಲಂಕಾ, ಬಾಂಗ್ಲಾದೇಶಕ್ಕಿಂತಲೂ ನಾವು ಬಡವರು, ಸುಮ್ಮನೇ ಪಾಕಿಸ್ಥಾನದ ಕುರಿತು ಮಾತನಾಡುತ್ತೇವೆ ಎಂದು ಕಿಡಿಕಾರಿದರು. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶ ದೀವಾಳಿಯಾಗುತ್ತಿದೆ. ₹ 1.38 ಲಕ್ಷ ಕೋಟಿ ರುಪಾಯಿ ಸಾಲ ಮಾಡಲಾಗಿದೆ. ಮೋದಿ ಬಂದ ಮೇಲೆ ದೇಶದಲ್ಲಿ ಒಂದು ಡ್ಯಾಮ್ ಕಟ್ಟಿಲ್ಲ, ಯಡಿಯೂರಪ್ಪ ಅವರು ರಾಜ್ಯದಲ್ಲಿ ಏನು ಮಾಡಿಲ್ಲ, ಆದರೆ, ಸಿಎಂ ಸಿದ್ದರಾಮಯ್ಯ ಅವರ ಕಾಲದಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.
ರಾಯರಡ್ಡಿಯೇ ರಾಜಶೇಖರ ಹಿಟ್ನಾಳರನ್ನು ಸೋಲಿಸುತ್ತಾರೆ ಎಂದು ಗಂಗಾವತಿ ಶಾಸಕ ಹೇಳಿದ್ದಾರೆ. ಹಾಗೆಲ್ಲ ಹುಚ್ಚು ಹುಚ್ಚಾಗಿ ಹೇಳಬಾರದು. ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 20 ಸಾವಿರ ಮತಗಳ ಅಂತರವನ್ನು ನೀಡುತ್ತೇವೆ ಎಂದು ಹೇಳಿದರು.
ಆದರೆ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರನಾಗಿ ಬಜೆಟ್‌ನಲ್ಲಿ ಗುಮಾಸ್ತನಂತೆ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಅವರು ಮಾಲೀಕರಂತೆ ಸಹಿ ಹಾಕಿದ್ದಾರೆ. ಅವರಾಗಿಯೇ ನನ್ನನ್ನು ಆರ್ಥಿಕ ಮಂತ್ರಿ ಮಾಡಿದರೆ ಆಗುತ್ತೇನೆ, ಹಾಗೊಂದು ವೇಳೆ ಅವಕಾಶ ಸಿಕ್ಕರೆ 65 ವರ್ಷ ಮೇಲ್ಪಟ್ಟವರಿಗೆ ಬಸ್ಸಿನ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಎಂದರು.