ಹುಬ್ಬಳ್ಳಿ: ಸೋಚತಾ ಕುಚ್ ಹೈ, ಬೋಲ್ತಾ ಕುಚ್ ಹೈ, ಔರ್ ಕರ್ತಾ ಕುಚ್ ಹೈ,..!
ಅನ್ಯಾಯ ಮಾಡುವುದಿಲ್ಲ ಎಂದು ಹೇಳುತ್ತಲೇ ಹುಬ್ಬಳ್ಳಿ-ಧಾರವಾಡಕ್ಕೆ ಅನ್ಯಾಯ ಮಾಡಿದ್ದಾರೆ ಎಂಬುದನ್ನು ಅಗ್ನಿಪಥ್ ಚಿತ್ರದ ಡೈಲಾಗ್ ಹೇಳುವ ಮೂಲಕ ಟಾಂಗ್ ನೀಡಿದರು.
ಬಜೆಟ್‌ನಲ್ಲಿ ಹುಬ್ಬಳ್ಳಿ- ಧಾರವಾಡಕ್ಕೆ ಯಾವ ರೀತಿ ಅನ್ಯಾಯವಾಗಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, ಎಫ್‌ಎಂಸಿಜಿ ಕ್ಲಸ್ಟರ್‌ನಲ್ಲಿ ಕೈಗಾರಿಕೆ ತೆರೆಯಲು ಬರುವ ಕೈಗಾರಿಕೋದ್ಯಮಿಗಳಿಗೆ ಮೊದಲು ₹95 ಲಕ್ಷ ಎಕರೆಗೆ ಜಮೀನು ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ ಅದನ್ನೀಗ ಕಾಂಗ್ರೆಸ್ ಸರ್ಕಾರ ₹1.29 ಕೋಟಿಗೆ ಏರಿಸಿದೆ. ಇದರಿಂದ ಕೈಗಾರಿಕೋದ್ಯಮಿಗಳು ಬರಲು ಹಿಂಜರಿಯುತ್ತಿದ್ದಾರೆ. ಆದಕಾರಣ ಅದನ್ನು ಮೊದಲಿನಂತೆ ದರ ಇಳಿಸಿ ಉದ್ಯಮಿಗಳಿಗೆ ಜಮೀನು ನೀಡಬೇಕು. ಇದರಿಂದ ಅಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.ಹುಬ್ಬಳ್ಳಿಗೆ ರಿಜಿನಲ್ ಕ್ಯಾನ್ಸರ್ ಘಟಕ ತೆರೆಯಬೇಕೆಂದು ಬೆಳಗಾವಿ ಅಧಿವೇಶನದಲಲ್ಲಿ ಒತ್ತಾಯಿಸಿದ್ದೆ. ಅದಕ್ಕೆ ನೀವು ಕೂಡ ಧ್ವನಿ ಗೂಡಿಸಿದ್ದೀರಿ. ಹೀಗಾಗಿ ಹುಬ್ಬಳ್ಳಿ ಹಾಗೂ ಮಂಗಳೂರಿಗೆ ಕ್ಯಾನ್ಸರ್ ಘಟಕ ತೆರೆಯಬೇಕೆಂದು ಒತ್ತಾಯಿಸಿದರು.