ಸಿದ್ದರಾಮೇಶ್ವರ ಸಾಮಾಜಿಕ ಕ್ರಾಂತಿಯ ಹರಿಕಾರ: ಶಿರಹಟ್ಟಿ ತಹಸೀಲ್ದಾರ್ ರಾಘವೇಂದ್ರ ರಾವ್

KannadaprabhaNewsNetwork |  
Published : Jan 15, 2026, 02:30 AM IST
ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಅವರು ಶಿವಯೋಗಿ ಸಿದ್ದರಾಮೆಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ರಾಜ ಮತ್ತು ರಾಜಕೀಯದಿಂದ ದೂರ ಉಳಿದಿದ್ದ ಸಿದ್ದರಾಮೇಶ್ವರರು ಸೌಮ್ಯ ಸ್ವಭಾವ ಹೊಂದಿದ್ದರು. ಸ್ವಾಭಿಮಾನಿ ಆಗಿದ್ದರು.

ಶಿರಹಟ್ಟಿ: ಆಧ್ಯಾತ್ಮಿಕ ಚಿಂತನೆಗಳಿಂದ ಸಮ ಸಮಾಜವನ್ನು ಕಟ್ಟಲು ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಅಪಾರ. ಜಾತ್ಯತೀತ ಸಮಾಜ ನಿರ್ಮಾಣ, ಸಾಮೂಹಿಕ ವಿವಾಹ, ಅಂತರಜಾತಿ ವಿವಾಹ, ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅವರ ಕೊಡುಗೆ ಅನನ್ಯ ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದರು.ಬುಧವಾರ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ರಾಜ ಮತ್ತು ರಾಜಕೀಯದಿಂದ ದೂರ ಉಳಿದಿದ್ದ ಸಿದ್ದರಾಮೇಶ್ವರರು ಸೌಮ್ಯ ಸ್ವಭಾವ ಹೊಂದಿದ್ದರು. ಸ್ವಾಭಿಮಾನಿ ಆಗಿದ್ದರು. ಅವರ ಬಗ್ಗೆ ಕವಿ ರಾಘವಾಂಕ ಬರೆದಿದ್ದಾರೆ. ಆದರೆ, ಕೆಲವು ಹಿತಾಸಕ್ತಿಗಳು ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಿಲ್ಲ. ಹೀಗಾಗಿ ಸಿದ್ದರಾಮೇಶ್ವರರ ಬಗ್ಗೆ ಜನತೆಗೆ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.ವಚನಕಾರರ ಹಾದಿಯಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕ ದುಡಿಮೆ ಮತ್ತು ಸೇವೆ ಮೂಲಕ ಜನಮನ ತಲುಪಬೇಕು. ಶಿವಭಕ್ತರಾಗಿದ್ದ ಸಿದ್ದರಾಮೇಶ್ವರರು ಶ್ರಮಕ್ಕಿಂತ ಮಿಗಿಲಾದ ದೇವರಿಲ್ಲ. ಕಾಯಕದಲ್ಲಿ ಕೈಲಾಸ ಕಾಣಬೇಕೆಂದು ಕರೆ ನೀಡಿದ ಅವರು ಸಾಮಾಜಿಕ ಕ್ರಾಂತಿಯ ಹರಿಕಾರರು ಎಂದು ಅಭಿಪ್ರಾಯಪಟ್ಟರು.ಸಿದ್ದರಾಮೇಶ್ವರ ಅವರು ಕ್ರಿಶ ೧೨ನೇ ಶತಮಾನದ ಸುಪ್ರಸಿದ್ಧ ಶರಣರ ಪರಂಪರೆಯಲ್ಲಿ ಗುರುತಿಸಿಕೊಂಡವರು. ತನ್ನ ಸ್ವಂತ ಕಾಯಕದ ಮೂಲಕ ಅಪ್ರತಿಮ ಶರಣನಾಗಿ ರೂಪಗೊಂಡವರು. ಸಿದ್ದರಾಮೇಶ್ವರರು ವಚನಗಳನ್ನು ರಚಿಸಿರುವುದು ಮಾತ್ರವಲ್ಲದೆ ವಚನ ಸಂರಕ್ಷಣೆಯೂ ಮಾಡಿದ್ದಾರೆ. ಕೆರೆ, ಕಟ್ಟೆ ಕಟ್ಟಿಸಿ ಜನೋಪಯೋಗಿ ಕಾರ್ಯ ಕೈಗೊಂಡರು. ಶರಣತತ್ವದ ಪರಿಪಾಲಕರಾಗಿದ್ದರು ಎಂದರು.ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, ೧೨ನೇ ಶತಮಾನದ ರಾಜರ ಆಡಳಿತ ವ್ಯವಸ್ಥೆಯಲ್ಲಿ ಸಮ ಸಮಾಜವನ್ನು ಕಟ್ಟುವಲ್ಲಿ, ಸುಧಾರಿಸುವಲ್ಲಿ ಮತ್ತು ಕಾಯಕನಿಷ್ಠೆಯ ಬಗ್ಗೆ ಸಮಾಜಕ್ಕೆ ತಿಳಿಸುವಲ್ಲಿ ಸಿದ್ದರಾಮೆಶ್ವರರು ಪ್ರಮುಖರು. ಜಾತಿ ಭೇದಗಳನೆನ್ನದೇ ಎಲ್ಲರೂ ಸಮಾನರು ಎಂಬ ಸಂದೇಶವನ್ನು ನೀಡಿದರು ಎಂದರು.ಮುಖಂಡರಾದ ಹೊನ್ನಪ್ಪ ಶಿರಹಟ್ಟಿ, ರಾಜು ಶಿರಹಟ್ಟಿ, ನಾಗಪ್ಪ ವಡ್ಡರ, ಗಿರಿಜಾ ಪೂಜಾರ, ಎಚ್.ಜೆ. ಭಾವಿಕಟ್ಟಿ, ಬಸವರಾಹ ಕಾತ್ರಾಳ, ಸಂತೋಷ ಅಸ್ಕಿ, ವಿನೋದ ಪಾಟೀಲ, ನೋಂದಣಿ ಇಲಾಖೆ ಅಧಿಕಾರಿ ಶರಣಪ್ಪ ಪವಾರ, ಬಿ.ಎಸ್. ಕುರಡಗಿ, ಹನುಮೇಶ ಕೊಂಡಿಕೊಪ್ಪ, ಮಂಜುಳಾ ಆಕಳದ ಸೇರಿ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಸಗಿ ಶಾಲೆಗಿಂತ ಅಂಗನವಾಡಿಯಲ್ಲಿ ಉತ್ತಮ ಶಿಕ್ಷಣ
ಲಕ್ಷ್ಮೇಶ್ವರದಲ್ಲಿ ಸಂಭ್ರಮದ ಅಗಸ್ತ್ಯ ತೀರ್ಥ ಜಾತ್ರಾ ಮಹೋತ್ಸವ