ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಸ್ಟೇಷನ್ ರಸ್ತೆಯ ಭೋವಿ (ವಡ್ಡರ) ಸಮಾಜದಿಂದ ನಿರ್ಮಿಸಿದ ನೂತನ ಗಜಾನನ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಘ್ನಗಳ ನಿವಾರಕ ಗಣೇಶನ ಕುರಿತು ಆಶಿರ್ವಚನ ನೀಡಿದರು. ಬಳಿಕ ಮಾತನಾಡಿದ ಸಿದ್ದಸಿರಿ ಸೌಹಾರ್ದದ ನಿರ್ದೇಶಕ ರಾಮನಗೌಡ ಪಾಟೀಲ್ ಯತ್ನಾಳ, ಸ್ವಂತ ಮನೆ ಇಲ್ಲದ ಬಡವರು ಸರಕಾರಕ್ಕೆ ಅರ್ಜಿ ಸಲ್ಲಿಸುವದರ ಮೂಲಕ ಮನೆಗಳನ್ನು ಪಡಯಬೇಕು ಎಂದು ತಿಳಿಸಿದರು. ಮಹಾನಗರ ಪಾಲಿಕೆ ಉಪ ಮಹಾಪೌರ ದಿನೇಶ ಹಳ್ಳಿ, ಗಣೇಶ ದೇವಸ್ಥಾನ ನಿರ್ಮಾಣ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ, ನ್ಯಾಯವಾದಿ ಕೆ.ಎಫ್. ಅಂಕಲಗಿ ಮಾತನಾಡಿ ವಡ್ಡರ ಸಮಾಜದವರು ಸಂಘಟಿತರಾಗಿರುವದಕ್ಕೆ ಸಂತೋಷ ವ್ಯಕ್ತಪಡಿಸಿದರು. ಸಮಾಜದ ಮುಖಂಡರನ್ನು ಉದ್ಘಾಟನಾ ಸಮಾರಂಭಕ್ಕೆ ಅವಾನಿಸಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿಗಳು ಕಳಸಾರೋಹಣ ನೆರವೇರಿಸಿದರು. ಮುಖಂಡರಾದ ಬಸವರಾಜ ಗೊಳಸಂಗಿ, ಪ್ರಶಾಂತ ಲಾಳಸಂಗಿ, ಪ್ರಕಾಶ ನಾಯ್ಕೋಡಿ, ರಾಜು ಚಂದು ಕಾಳೆ, ದುರ್ಗಪ್ಪ ಪಡಗಾನೂರ, ಕೈಲಾಸ ಕಾಂಬಳೆ ಉಪಸ್ಥಿತರಿದ್ದರು. ಯಲ್ಲಪ್ಪ ಇರಕಲ್ ವಂದಿಸಿದರು.