ಸಮಾಜದ ಒಳತಿಗೆ ಶ್ರಮಿಸಿದ ಸಿದ್ಧರಾಮೇಶ್ವರರು

KannadaprabhaNewsNetwork | Published : Jan 15, 2025 12:49 AM

ಸಾರಾಂಶ

ಶರಣರ ತತ್ವಾದರ್ಶ ಅರಿತು ಜೀವನದಲ್ಲಿ ಅಳಡಿವಸಿಕೊಂಡಾಗ ಬದಲಾವಣೆ ಸಾಧ್ಯ.ಶರಣರ ವಚನಗಳಿಂದ ನಮ್ಮಲ್ಲಾಗುವ ಬದಲಾವಣೆಯೇ ಶರಣ ಪೂಜೆಯಾಗಿದೆ

ಗಜೇಂದ್ರಗಡ: ಜಾತಿ, ಮತ ಹಾಗೂ ಪಂಥಗಳೆನ್ನದೆ ಸಮಾಜದ ಒಳತಿಗಾಗಿ ಶ್ರಮಿಸುವುದರ ಜತೆಗೆ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸುವ ಪವಾಡ ಮಾಡಿದವರು ಶಿವಯೋಗಿ ಸಿದ್ದರಾಮೇಶ್ವರರು ಎಂದು ಪುರಸಭೆ ಸ್ಥಾಯಿ ಸಮಿತಿ ಚೇರಮನ್ ಮುದಿಯಪ್ಪ ಮುಧೋಳ ಹೇಳಿದರು.

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಮಂಗಳವಾರ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ನಿಮಿತ್ತ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪುಚ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಶರಣರ ತತ್ವಾದರ್ಶ ಅರಿತು ಜೀವನದಲ್ಲಿ ಅಳಡಿವಸಿಕೊಂಡಾಗ ಬದಲಾವಣೆ ಸಾಧ್ಯ.ಶರಣರ ವಚನಗಳಿಂದ ನಮ್ಮಲ್ಲಾಗುವ ಬದಲಾವಣೆಯೇ ಶರಣ ಪೂಜೆಯಾಗಿದೆ. ೧೨ನೇ ಶತಮಾನದಲ್ಲಿಯೇ ಕೆರೆ, ಕಾಲುವೆ ಹಾಗೂ ದೇವಸ್ಥಾನ ಕಟ್ಟಿಸುವ ಮೂಲಕ ಕರ್ಮ ಹಾಗೂ ಕಾಯಕದ ಮಹತ್ವ ಸಾರಿದ ಮಹಾಶರಣ ಸಿದ್ದರಾಮೇಶ್ವರರನ್ನು ೯೦೦ವರ್ಷಗಳ ಬಳಿಕ ನೆನೆಯುತ್ತಿರುವ ನಾವುಗಳು ಕರ್ಮ ಅರಿತು ಜೀವನ ನಡೆಸಿದರೆ ಜೀವನ ಸಾರ್ಥಕವಾಗಲಿದೆ ಎಂದರು.

ಸಾಹಿತಿ ಎಫ್.ಎಸ್. ಕರಿದುಗನವರ, ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಮಾತನಾಡಿ, ಸಕಲ ಜೀವಾತ್ಮಗಳಿಗೆ ಒಳಿತು ಬಯಸಿದ ಸಿದ್ದರಾಮೇಶ್ವರ ವಚನ ಜೀವನದಲ್ಲಿ ಅಳವಡಿಸಕೊಂಡು ನಾವೆಲ್ಲರೂ ದುಡಿಮೆ ಪೂಜಿಸಬೇಕು. ಸಿದ್ದರಾಮೇಶ್ವರರು ಪವಾಡ ಪುರಷರಾಗಿದ್ದರು. ಆದರೆ ಡಂಭಾಚಾರದ ಪವಾಡ ಸೃಷ್ಠಿಸಲಿಲ್ಲ, ಬದಲಾಗಿ ಸಮಾಜ ಕಾಯದತ್ತ ಸಾಗಿಸಲು ದಾರಿದೀಪ ಹಚ್ಚಿಕೊಟ್ಟವರು ಎಂದರು.

ಪಟ್ಟಣದ ಕುಷ್ಟಗಿ ರಸ್ತೆಯಲ್ಲಿನ ಶಿವಯೋಗಿ ಸಿದ್ಧರಾಮೇಶ್ವರ ವೃತ್ತದಲ್ಲಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು. ಇದಕ್ಕೂ ಮುನ್ನ ವೃತ್ತದಲ್ಲಿನ ಟೆಗ್ಗಿನ ತಳಿರು ಹಾಗೂ ಹೂವಿನ ಹಾರದಿಂದ ವೃತ್ತ ಅಲಂಕರಿಸಲಾಯಿತು. ಬಳಿಕ ವೃತ್ತದಲ್ಲಿ ಸಿದ್ಧರಾಮೇಶ್ವರ ಚಿತ್ರಕ್ಕೆ ಮುಖಂಡರು ಹೂ ಮಾಲೆ, ಜೈಕಾರ ಕೂಗಿದರು.

ಈ ವೇಳೆ ಮುಖಂಡರಾದ ಶರಣಪ್ಪ ಚಳಗೇರಿ, ದುರಗಪ್ಪ ಮುಧೋಳ, ಮುದಿಯಪ್ಪ ಮುಧೋಳ, ಷಣ್ಮುಖಪ್ಪ ಚಿಲ್‌ಝರಿ, ಬಸವರಾಜ ಬಂಕದ ಸೇರಿ ಇತರರು ಇದ್ದರು.

ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಮುಖಂಡರಾದ ದುರಗಪ್ಪ ಮುಧೋಳ, ರಾಮಣ್ಣ ನಿಡಗುಂದಿ, ತಿರುಪತಿ ಕಲ್ಲೊಡ್ಡರ, ಶರಣಪ್ಪ ಚಳಗೇರಿ, ದುರಗಪ್ಪ ಮುಧೋಳ, ಗಿಡ್ಡಪ್ಪ ಪೂಜಾರ, ಸಕ್ರಪ್ಪ ನಿಡಗುಂದಿ, ದುರಗಪ್ಪ ಕಲ್ಲೊಡ್ಡರ, ಕಳಕಪ್ಪ ಮನ್ನೇರಾಳ ಹಾಗೂ ಬಿ. ಮಲ್ಲಿಕಾರ್ಜುನಗೌಡ, ರಾಘವೇಂದ್ರ ಮಂತಾ ಸೇರಿ ಇತರರು ಇದ್ದರು.

Share this article