ಜಿಎಂಯುನಲ್ಲಿ ಸಿದ್ದೇಶ್ವರ್‌ ಜನ್ಮದಿನ ಸಂಭ್ರಮ

KannadaprabhaNewsNetwork |  
Published : Jul 07, 2025, 11:48 PM IST
ಕ್ಯಾಪ್ಷನ7ಕೆಡಿವಿಜಿ37,38 ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದಲ್ಲಿಂದು ಮಾಜಿ ಕೇಂದ್ರ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಜನ್ಮದಿನವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು........ಕ್ಯಾಪ್ಷನ7ಕೆಡಿವಿಜಿ39 ದಾವಣಗೆರೆಯಲ್ಲಿಂದು ಮಾಜಿ ಕೇಂದ್ರ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಜನ್ಮದಿನದ ಪ್ರಯುಕ್ತ ಜಿಎಂಯು ಕ್ಯಾಂಪಸ್ ನಲ್ಲಿ ವಿವಿಧ ಹಣ್ಣುಗಳ ಸಸಿಗಳ ನೆಡಲಾಯಿತು. | Kannada Prabha

ಸಾರಾಂಶ

ನಗರದ ಜಿಎಂ ವಿಶ್ವವಿದ್ಯಾಲಯದಲ್ಲಿ ಸೋಮವಾರ ಮಾಜಿ ಕೇಂದ್ರ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಅವರ ಜನ್ಮದಿನವನ್ನು ಸಂಭ್ರಮದೊಂದಿಗೆ ಆಚರಣೆ ಮಾಡಲಾಯಿತು.

- ವಿವಿಧ ಹಣ್ಣುಗಳ ಸಸಿ ನೆಟ್ಟು ಪ್ರಕೃತಿ ಪ್ರೇಮ ಮೆರೆದ ಮಾಜಿ ಕೇಂದ್ರ ಸಚಿವ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ನಗರದ ಜಿಎಂ ವಿಶ್ವವಿದ್ಯಾಲಯದಲ್ಲಿ ಸೋಮವಾರ ಮಾಜಿ ಕೇಂದ್ರ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಅವರ ಜನ್ಮದಿನವನ್ನು ಸಂಭ್ರಮದೊಂದಿಗೆ ಆಚರಣೆ ಮಾಡಲಾಯಿತು.

ಜಿಎಂಐಟಿ ಮತ್ತು ಜಿಎಂ ವಿಶ್ವವಿದ್ಯಾಲಯದ ಪ್ರಾಂಶುಪಾಲರು, ಡೀನ್‌ಗಳು, ನಿರ್ದೇಶಕರು, ಅಧ್ಯಾಪಕರು, ಅಧ್ಯಾಪಕೇತರ ವರ್ಗದಿಂದ ಒಟ್ಟುಗೂಡಿ ಜಿ.ಎಂ. ಸಿದ್ದೇಶ್ವರ ಜನ್ಮದಿನದ ಪ್ರಯುಕ್ತ ಎವಿ ಕೊಠಡಿಯಲ್ಲಿ ಕೇಕ್ ಕತ್ತರಿಸಿ ಸಿಹಿ ವಿನಿಮಯ ಮೂಲಕ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಜಿ.ಎಂ.ಸಿದ್ದೇಶ್ವರ ಅವರು, ಜಿಎಂ ವಿಶ್ವವಿದ್ಯಾಲಯವನ್ನು ಕರ್ನಾಟಕದ ನಂಬರ್-1 ವಿ.ವಿ.ಯಾಗಿ ಹೊರಹೊಮ್ಮುವಂತಾಗಬೇಕು. ಇದಕ್ಕೆ ಜಿಎಂಯು ಅಧ್ಯಾಪಕರ ಬಳಗದ ಶ್ರಮ ಮತ್ತು ಜವಾಬ್ದಾರಿ ಮೇಲೆ ನಿಂತಿದ್ದು, ಈ ಸಾಧನೆಗೆ ಮುಂದಾಗುವಂತೆ ಪ್ರೋತ್ಸಾಹಿಸಿದರು.

ದೇಶದ ಜನರೇ ತಂದೆ-ತಾಯಿ, ಬಂಧು-ಬಳಗ, ಸಹೋದರ-ಸಹೋದರಿಯರು ಎಂದು ತಿಳಿದು ಪ್ರಧಾನಿ ನರೇಂದ್ರ ಮೋದಿ ತಮ್ಮ ಜೀವನವನ್ನು ದೇಶದ ಏಳಿಗೆಗಾಗಿ ಮೂಡಿಪಾಗಿಟ್ಟಿದ್ದಾರೆ. ಭಾರತವನ್ನು ಅಂತರ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಹಾಗೂ ನಂಬರ್-1 ದೇಶವನ್ನಾಗಿಸುವ ನಿಟ್ಟಿನಲ್ಲಿ ಅವರ ಸಾಧನೆ ಹೋಲಿಕೆ ಮಾಡಿಕೊಂಡರೆ ನಾವು ಮಾಡುತ್ತಿರುವ ಸಮಾಜಮುಖಿ ಕಾರ್ಯ ಶೂನ್ಯವಾಗಿದೆ. ಅವರ ಈ ಸಾಧನೆಯೇ ನಮಗೆಲ್ಲ ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಜಿಎಂಯು ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಮಾತನಾಡಿ, ದೇಶದ ಸಂಪತ್ತೇ ಶಿಕ್ಷಣ. ಯುವ ಸಮೂಹಕ್ಕೆ ಶಿಕ್ಷಣದಿಂದ ಆತ್ಮಸ್ಥೈರ್ಯ ಹುಟ್ಟುತ್ತಿದೆ. ಹಾಗಾಗಿ, ದಾವಣಗೆರೆಯನ್ನು ಪ್ರತಿನಿಧಿಸಿ ಜಿಎಂ ವಿಶ್ವವಿದ್ಯಾಲಯದಿಂದ ಶೈಕ್ಷಣಿಕವಾಗಿ ಕೊಡುಗೆ ನೀಡಲು ನಾವೆಲ್ಲಾ ಶ್ರಮಿಸಬೇಕು ಎಂದು ಹೇಳಿದರು. ಜನ್ಮದಿನದ ಪ್ರಯುಕ್ತ ಸಿದ್ದೇಶ್ವರ ಅವರಿಂದ ಜಿಎಂಯು ಕ್ಯಾಂಪಸ್‌ನಲ್ಲಿ ವಿವಿಧ ಹಣ್ಣುಗಳ ಸಸಿಗಳ ನೆಟ್ಟು ಪ್ರಕೃತಿ ಪ್ರೇಮ ಮೆರೆಯಲಾಯಿತು.

ಈ ಸಂದರ್ಭ ಜಿಎಂಯು ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ, ಕುಲಸಚಿವ ಡಾ. ಬಿ.ಎಸ್. ಸುನೀಲ್ ಕುಮಾರ್, ಆಡಳಿತಾಧಿಕಾರಿಗಳಾದ ಡಾ. ವೈ.ಯು. ಸುಭಾಷ್, ಮಾಜಿ ಸಿಂಡಿಕೇಟ್ ಸದಸ್ಯ ಕೊಂಡಜ್ಜಿ ಜಯಪ್ರಕಾಶ್, ಜಿಎಂ ಸೌಹಾರ್ದ ಪತ್ತಿನ ಸಹಕಾರ ಸಂಘದ ಪ್ರಧಾನ ವ್ಯವಸ್ಥಾಪಕರಾದ ಎಸ್.ಎನ್. ಮಲಪ್ಪ, ಜಿ.ಎನ್.ರಾಜೀವ್ ಇತರರು ಇದ್ದರು.

- - -

-7ಕೆಡಿವಿಜಿ37: ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದಲ್ಲಿ ಸೋಮವಾರ ಮಾಜಿ ಕೇಂದ್ರ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಜನ್ಮದಿನವನ್ನು ಸಡಗರ- ಸಂಭ್ರಮದಿಂದ ಆಚರಿಸಲಾಯಿತು.

-7ಕೆಡಿವಿಜಿ39: ದಾವಣಗೆರೆಯಲ್ಲಿ ಸೋಮವಾರ ಮಾಜಿ ಕೇಂದ್ರ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಜನ್ಮದಿನದ ಪ್ರಯುಕ್ತ ಜಿಎಂಯು ಕ್ಯಾಂಪಸ್‌ನಲ್ಲಿ ವಿವಿಧ ಹಣ್ಣುಗಳ ಸಸಿಗಳ ನೆಡಲಾಯಿತು.

PREV