ಜ್ಞಾನ ಬಿತ್ತಿದ ಸಿದ್ದಪುರುಷ ಸಿದ್ದೇಶ್ವರ ಶ್ರೀ

KannadaprabhaNewsNetwork |  
Published : Oct 26, 2026, 04:00 AM IST
25ಸಿಡಿಎನ್01 ಚಡಚಣದ ಬಸ್‌ ನಿಲ್ದಾಣದ ಎದಿರು ನೂತನವಾಗಿ ನಿರ್ಮಿಸಲಾದ ಗಾಣಸಿರಿ ವೃತ್‌ ಉದ್ಘಾಟನೆಯನ್ನುವಿಧಾನ ಪರಿಷತ್‌ ಸದಸ್ಯ ಸುನೀಲ ಪಾಟೀಲ ಶನಿವಾರ ಉದ್ಘಾಟಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣ ಸಿದ್ದೇಶ್ವರ ಸ್ವಾಮೀಜಿಯವರು ತಮ್ಮ ಪ್ರವಚನದ ಮೂಲಕ ಜನಮಾನಸದಲ್ಲಿ ಜ್ಞಾನ ಬಿತ್ತಿದ ಸಿದ್ದಪುರುಷರು. ನಡೆ ನುಡಿ, ಸರಳತೆಯಿಂದ ಬದುಕುವುದನ್ನು ಸಮಾಜಕ್ಕೆ ಕಲಿಸಿಕೊಟ್ಟ ತತ್ತ್ವಜ್ಞಾನಿ. ಅವರು ತೆರೆದಿಟ್ಟ ಜೀವನದ ಮೂಲಕ ಇತರರ ಬದುಕಿಗೆ ದಾರಿದೀಪವಾದ ದಾರ್ಶನಿಕರು ಎಂದು ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟಲ ಹೇಳಿದರು.

ಕನ್ನಡಪ್ರಭ ವಾರ್ತೆ ಚಡಚಣ

ಸಿದ್ದೇಶ್ವರ ಸ್ವಾಮೀಜಿಯವರು ತಮ್ಮ ಪ್ರವಚನದ ಮೂಲಕ ಜನಮಾನಸದಲ್ಲಿ ಜ್ಞಾನ ಬಿತ್ತಿದ ಸಿದ್ದಪುರುಷರು. ನಡೆ ನುಡಿ, ಸರಳತೆಯಿಂದ ಬದುಕುವುದನ್ನು ಸಮಾಜಕ್ಕೆ ಕಲಿಸಿಕೊಟ್ಟ ತತ್ತ್ವಜ್ಞಾನಿ. ಅವರು ತೆರೆದಿಟ್ಟ ಜೀವನದ ಮೂಲಕ ಇತರರ ಬದುಕಿಗೆ ದಾರಿದೀಪವಾದ ದಾರ್ಶನಿಕರು ಎಂದು ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟಲ ಹೇಳಿದರು.

ಸ್ಥಳೀಯ ಬಸ್‌ ನಿಲ್ದಾಣದ ಎದುರು ನೂತನ ನಿರ್ಮಿಸಲಾದ ಗಾಣಸಿರಿ ವೃತ್ತ ಉದ್ಘಾಟಿಸಿ ಹಾಗೂ ಶ್ರೀದ್ಧೇಶ್ವರ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯ ನೀರಾವರಿ ಸೌಲಭ್ಯಕ್ಕೆ ಒತ್ತು ನೀಡುವಂತೆ ಸಿದ್ದೇಶ್ವರ ಶ್ರೀಗಳು ಜನಪ್ರತಿನಿಧಿಗಳಿಗೆ ಸದಾ ನೆನಪಿಸುತ್ತಿದ್ದುರು. ಅವರ ಆಶಯದಂತೆ ಸಚಿವ ಎಂ.ಬಿ.ಪಾಟೀಲರು ಸಮಗ್ರ ನೀರಾವರಿಗೆ ಒತ್ತು ನೀಡಿದ್ದಾರೆ ಎಂದರು.

ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಸರಳ ವ್ಯಕ್ತಿತ್ವ, ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುತ್ತಿದ್ದ ಸಿದ್ದೇಶ್ವರ ಸ್ವಾಮೀಜಿಗಳ ಬದುಕು ಎಲ್ಲರಿಗೂ ದಾರಿ ದೀಪವಾಗಿದೆ. ಜನರಿಂದ ನಡೆದಾಡುವ ದೇವರು ಎಂಬ ಅಭಿದಾನಕ್ಕೆ ಪಾತ್ರರಾದವರು. ಇಂದು ಅವರ ಪುಣ್ಯಸ್ಮರಣೆ ಆಚರಿಸುತ್ತಿರುವದು ನಮ್ಮ ಸೌಭಾಗ್ಯ ಎಂದು ಸ್ಮರಿಸಿದರು.

ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿದರು. ಕನಕನಾಳ ಶಾಖಾ ಮಠದ ಗಿರಿಜಾನಂದ ಸ್ವಾಮೀಜಿ, ಚಿಕ್ಕಲಗುಂಟಿಯ ಶರಣಾನಂದ ಸ್ವಾಮೀಜಿ, ಕನ್ನೇರಿಯ ಚಿದಾನಂದ ದೇವರು ಆಶಿರ್ವಚನ ನೀಡಿದರು. ಪಪಂ ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ, ಉಪಾಧ್ಯಕ್ಷ ಇಲಾಯಿ ನದಾಫ, ಚಡಚಣ ಮಂಡಳ ಬಿಜೆಪಿ ಅಧ್ಯಕ್ಷ ಕಾಂತುಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಭೀಮಾಶಂಕರ ಬಿರಾದಾರ, ಮುಖಂಡ ಸಂಜೀವ ಐಹೊಳ್ಳಿ, ಅಭಿನವ ಚವ್ಹಾಣ, ಬಾಬುಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಬಸುಗೌಡ ಬಿರಾದಾರ, ಶ್ರೀಶೈಲ ಅಂಜುಟಗಿ, ರವಿ ಉಮರಾಣಿ, ಶಿವಾನಂದ ಪಾಂಡ್ರೆ, ಶ್ರೀಮಂತ ಉಮರಾಣಿ, ರಾಜು ಸಾಹುಕಾರ ಬಗಲಿ, ಕಾರ್ಯಾಧ್ಯಕ್ಷ ರಮೇಶ ಜಿತ್ತಿ, ಕಾರ್ಯದರ್ಶಿ ಸಿದ್ದು ತೇಲಿ, ಖಜಾಂಚಿ ಗುರುರಾಜ ಸಜ್ಜನ, ಯುವ ಮೋರ್ಚಾ ಅಧ್ಯಕ್ಷ ನಂದು ಗಡಗೆ ಸೇರಿ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಆಗದಿರಲಿ
ಕಲೆ ಮನುಷ್ಯನ ಅಸ್ಮಿತೆಯ ಸೂಚಕ