ರಂಭಾಪುರಿ ಪೀಠದ ಪೂಜಾ ಸಭಾಂಗಣದಲ್ಲಿ ಪಾರಾಯಣಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಜ್ಞಾನ ವಿಕಾಸಕ್ಕೆ ಸಾಧನೆ ಮತ್ತು ಪ್ರಯತ್ನ ಅಗತ್ಯ. ಜೀವ ಶಿವನಾಗಲು ಅಂಗ ಲಿಂಗವಾಗಲು ದೇಹ ದೇವಾಲಯವಾಗುವ ಜ್ಞಾನವನ್ನು ಸಿದ್ಧಾಂತ ಶಿಖಾಮಣಿ ಗ್ರಂಥದಿಂದ ತಿಳಿಯಲು ಸಾಧ್ಯ. ಆಧ್ಯಾತ್ಮ ಸಾಧಕರಿಗೆ ಸಿದ್ಧಾಂತ ಶಿಖಾಮಣಿ ಅಮೂಲ್ಯ ಕೊಡುಗೆ ಕೊಟ್ಟಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದ ಪೂಜಾ ಸಭಾಂಗಣದಲ್ಲಿ ಗುರುವಾರ ನಡೆದ ಸಿದ್ಧಾಂತ ಶಿಖಾಮಣಿ ಪಾರಾಯಣಕ್ಕೆ ಚಾಲನೆ ನೀಡಿದರು. ಸಿದ್ಧಾಂತ ಶಿಖಾಮಣಿ ಕೃತಿಯಲ್ಲಿ ಅಮೂಲ್ಯ ವಿಚಾರವನ್ನು ಶ್ರೀ ರೇಣುಕಾ ಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಬೋಧಿಸಿದ್ದಾರೆ. ಜಾತಿ ಮತ ಪಂಥ ಭೇದವಿಲ್ಲದೇ ಎಲ್ಲರೂ ಸಾಧನೆ ಮೂಲಕ ಸಾಕ್ಷಾತ್ಕಾರ ಪಡೆಯಲು ಸಾಧ್ಯವೆಂದು ನಿರೂಪಿಸಿದ್ದಾರೆ. ಸಂಸ್ಕಾರಯುಕ್ತ ಬದುಕಿಗೆ ಶಿವಾದ್ವೈತ ಸಿದ್ಧಾಂತದ ಅರಿವು ಆಚರಣೆ ಅಗತ್ಯ ಎಂದರು.
ಅಂಗಸ್ಥಲ ಮತ್ತು ಲಿಂಗಸ್ಥಲವೆಂದು ಎರಡು ಭಾಗ ವಿದ್ದು ಒಟ್ಟು ನೂರೊಂದು ಸ್ಥಲದ ಹಿರಿಮೆ ಒಳಗೊಂಡಿದೆ. ಇಂಥ ಅಮೂಲ್ಯ ಧರ್ಮ ಗ್ರಂಥದ ಪಾರಾಯಣ ಸುಮಾರು 250ಕ್ಕೂ ಹೆಚ್ಚು ಜನ ಮಹಿಳೆಯರು ಪಾಲ್ಗೊಂಡಿದ್ದು ಜಗದ್ಗುರುಗಳಿಗೆ ಸಂತೋಷ ತಂದಿದೆ ಎಂದರು. ಮಹಾರಾಷ್ಟ್ರದ ಗಿರಿಗಾಂವ, ಉಜ್ಜನ, ಶಿರಹಾಳು, ಅನಂತ ಪಾಳ ಶ್ರೀಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ೫೦ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗೆ ರಂಭಾಪುರಿ ಜಗದ್ಗುರು ಶುಭ ಹಾರೈಸಿದರು. ಮಹಿಳಾ ಮಂಡಲದ ಮುಖ್ಯಸ್ಥೆ ಕವಿತಾ ಹಿರೇಮಠ ಧಾರವಾಡ, ಬಳ್ಳಾರಿಯ ಅನುರಾಧ, ಬಂಕಾಪುರದ ಜ್ಯೋತಿ ಅರಳೆಲೆ ಮಠ, ಸುಮಂಗಲಾ ಶೆಟ್ಟರ್, ಶಿವಮೊಗ್ಗದ ರೇಖಾ ಸುಭಾಷ್ ಮತ್ತು ಶಾಂತಾ ನಾಯಕ ಸಿದ್ಧಾಂತ ಶಿಖಾಮಣಿ ಪಾರಾಯಣ ನಡೆಸಿಕೊಟ್ಟರು. ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿ, ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿ ಇದ್ದರು.೨೧ಬಿಹೆಚ್‌ಆರ್ ೧ಬಾಳೆಹೊನ್ನೂರಿನ ರಂಭಾಪುರಿ ಪೀಠದ ಪೂಜಾ ಸಭಾಂಗಣದಲ್ಲಿ ನಡೆದ ಸಿದ್ಧಾಂತ ಶಿಖಾಮಣಿ ಪಾರಾಯಣ ಕಾರ್ಯಕ್ರಮವನ್ನು ಶ್ರೀ ರಂಭಾಪುರಿ ಜಗದ್ಗುರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.