
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಜ್ಞಾನಯೋಗಾಶ್ರಮದಲ್ಲಿ 2026 ಜನವರಿ 1 ಮತ್ತು 2ರಂದು ನಡೆಯಲಿರುವ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರ ಗುರುನಮನ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ಹಾಗೂ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಕಾರ್ಯಕ್ರಮಗಳಲ್ಲಿ ನಾಡಿನ ಅನೇಕ ಪೂಜ್ಯರು, ರಾಜ್ಯಪಾಲರು, ಮಂತ್ರಿಗಳು, ಗಣ್ಯರು, ಸದ್ಭಕ್ತರು ಭಾಗಿಯಾಗಲಿದ್ದಾರೆ. ಹಾಗಾಗೀ ಗುರುನಮನ ಮಹೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಿ ಗುರುದೇವರ ಕೃಪೆಗೆ ಪಾತ್ರರಾಗಬೇಕು ಎಂದರು. ಈ ವೇಳೆ ಪ್ರಮುಖರಾದ ಸಂ.ಗು.ಸಜ್ಜನ, ಮಲ್ಲಿಕಾರ್ಜುನ ಹಳ್ಳದ ಸೇರಿದಂತೆ ಹಲವು ಸ್ವಾಮೀಜಿಗಳು ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಆಶ್ರಮದಲ್ಲಿ ನಡೆಯುವ ಕಾರ್ಯಕ್ರಮಗಳು:ಡಿ.15ರಿಂದ ನಗರದ ಪ್ರಮುಖ ಬಡಾವಣೆಗಳಲ್ಲಿ ಜ್ಞಾನದಾಸೋಹ ಸತ್ಸಂಗ ಕಾರ್ಯಕ್ರಮಗಳು ನಡೆಯಲಿವೆ. ಡಿ.29ರಿಂದ ಜನವರಿ 1ರವರೆಗೆ ಪ್ರತಿದಿನ ಸಂಜೆ ಯುವ ಸಮಾವೇಶ, ಆಧ್ಯಾತ್ಮ ಮತ್ತು ಮಹಿಳೆ, ದಯಾ-ಧರ್ಮ, ನೇಗಿಲಯೋಗಿ ವಿಷಯಗಳ ಕುರಿತು ಜ್ಞಾನಯೋಗಾಶ್ರಮದಲ್ಲಿ ಗೋಷ್ಠಿಗಳು ನಡೆಯಲಿವೆ.
ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನ ಆಧಾರಿತ ಕನ್ನಡ ಹಾಗೂ ಹಿಂದಿ ಗ್ರಂಥಗಳ ಹಾಗೂ ಮರು ಮುದ್ರಣಗೊಂಡ ಸಮಗ್ರ ಸಂಪುಟಗಳ ಬಿಡುಗಡೆ ಕಾರ್ಯಕ್ರಮಗಳು ನಡೆಯಲಿವೆ. ಪೂಜ್ಯರ ಸಂಗ್ರಹಿಸಿದ ವಿಶೇಷ ಭಾವಚಿತ್ರಗಳ ಫೋಟೋ ಗ್ಯಾಲರಿ ಪ್ರದರ್ಶನದ ನಡೆಯಲಿದೆ. 2026 ಜನವರಿ 1ರಂದು ಸಂಜೆ ದೀಪೋತ್ಸವ ನೆವರೇರಲಿದೆ. ಜ.2ರಂದು ಬೆಳಗ್ಗೆ 6ಕ್ಕೆ ಜಪಯೋಗ, 7ಕ್ಕೆ ಗುರುದೇವರ ವಿಡಿಯೋ ಆಧಾರಿತ ಪ್ರವಚನ, 8ಕ್ಕೆ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಗದ್ದುಗೆಗೆ ಮಹಾಪೂಜೆ, ನಂತರ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿಗಳಿಗೆ ಗೀತನಮನ, ಹಾಗೂ ಸಾಮೂಹಿಕ ಪುಷ್ಪನಮನ ಕಾರ್ಯಕ್ರಮಗಳು ನಡೆಯಲಿವೆ.