ಕನ್ನಡಪ್ರಭ ವಾರ್ತೆ ಇಂಡಿ
ತಾಲೂಕಿನ ಹೊರ್ತಿ ಗ್ರಾಮದಲ್ಲಿ ಶ್ರೀರೇವಣಸಿದ್ಧೇಶ್ವರ ಹಳೇ ದೇವಸ್ಥಾನದ, ದೇವಸ್ಥಾನದ ಆವರಣದಲ್ಲಿ ಭಾನುವಾರ ಸಿದ್ಧೇಶ್ವರ ಸ್ವಾಮೀಜಿಗಳ ನುಡಿನಮನ ಹಾಗೂ ಧ್ಯಾನ ಮಂದಿರ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ಮನುಕುಲಕ್ಕೆ ಸಿದ್ಧೇಶ್ವರ ಶ್ರೀಗಳ ತತ್ವಾದರ್ಶಗಳು ಆದರ್ಶಪ್ರಾಯವಾಗಿ, ಇಂತಹ ಮಹಾನ್ ಸಂತರನ್ನು ಸ್ಮರಿಸುವುದೇ ಶ್ರೇಷ್ಠ ಕಾಯಕ ಎಂದರು.
ಕಾತ್ರಾಳ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿ, ಸಿದ್ಧೇಶ್ವರ ಶ್ರೀಗಳು ಆಧ್ಯಾತ್ಮಿಕ ಪ್ರವಚನದ ಮೂಲಕ ಜನರನ್ನು ಸನ್ಮಾರ್ಗದ ದಾರಿ ತೋರಿದ ಮಹಾನ್ ಸಂತರಾಗಿದ್ದ ಅವರು ಇಡೀ ಮನುಕುಲಕ್ಕೆ ಸಿದ್ಧೇಶ್ವರ ಶ್ರೀಗಳ ತತ್ವಾದರ್ಶಗಳು ಆದರ್ಶಪ್ರಾಯವಾಗಿ ಇಂತಹ ಮಹಾನ್ ಸಂತರನ್ನು ಸ್ಮರಿಸುವುದೇ ಶ್ರೇಷ್ಠ ಕಾಯಕ ಎಂದರು.ಜಮಖಂಡಿ ಓಂಕಾರ ಆಶ್ರಮದ ಮಾತೋಶ್ರೀ ಪ್ರವಚನಕಾರೆ ಶ್ರೀದೇವಿ ತಾಯಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಜ್ಞಾನಾಮೃತದ ಮೂಲಕ ಇಡೀ ನಾಡಿಗೆ ಚಿರಪರಿಚಿತರಾದ ಸಿದ್ಧೇಶ್ವರ ಶ್ರೀಗಳ ಜೀವನ ಶೈಲಿ ಮಾದರಿಯಾಗಿದೆ. ಯಾವುದೇ ಆಸೆಗಳಿಗೆ ಬಲಿಯಾಗದೆ, ಅತ್ಯಂತ ಸರಳ ಜೀವನದಿಂದ ಅವರು ಹೆಸರಾಗಿದ್ದಾರೆ. ಲೌಕಿಕ ಲಾಲಸೆ ಬಿಡಬೇಕು ಎಂಬ ತತ್ವ ತಿಳಿಸಿದ್ದಾರೆ. ಶ್ರೀಗಳ ವಾಣಿ ಮನಕುಲಕ್ಕೆ ಶಾಂತಿಯ ಸಂದೇಶ ಸಾರುವ ಖಣಿಯಾಗಿದೆ. ಅವರ ಪ್ರತಿಯೊಂದು ವಿಚಾರಧಾರೆ ಮಾದರಿಯಾಗಿ ಎಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದು ತಿಳಿಸಿದರು.
ಈ ವೇಳೆ ನಿವೃತ್ತ ಪ್ರಾಚಾರ್ಯ ಬಸವರಾಜ ಸಾವಕಾರ, ಗುರುಲಿಂಗಪ್ಪ ಆರ್.ತೇಲಿ, ಸಂಸ್ಥೆಯ ನಿರ್ದೇಶಕ ಗುರಪ್ಪ ರೇ.ಪೂಜಾರಿ, ಶ್ರೀಮಂತ ಗಡ್ಡದ (ಪೂಜಾರಿ), ಕಾಂತಯ್ಯ ಹಿರೇಮಠ, ಹಣಮಂತ ಬಿ.ಕುಂಬಾರ, ಶಂಕ್ರೆಪ್ಪ ಚ.ಡೊಳ್ಳಿ, ಬಡೇಸಾಬ್ ಸಾರವಾಡ, ಶ್ರೀನಿವಾಸ ಕಂದಗಲ್, ಶ್ರೀಮಂತ ತಳವಾರ, ಏಗಪ್ಪಗೌಡ ಬಿರಾದಾರ, ಶರಣು ಡೊಣಗಿ, ಪವನ ಕುಲಕರ್ಣಿ, ಶರಣಬಸು ಎಂ.ಡೊಣಗಿ, ಬಸವರಾಜ ಜಂಬಗಿ ಭಾಗವಹಿಸಿದ್ದರು. ಬಸವರಾಜ ಸಾವಕಾರ ಸ್ವಾಗತಿಸಿದರು. ಬಸವರಾಜ ಜಂಬಗಿ ನಿರೂಪಿಸಿದರು. ದುಂಡಪ್ಪ ತಾಂಬೆ ವಂದಿಸಿದರು.