ಹಿಂದೂ ಧರ್ಮ, ಧರ್ಮಸ್ಥಳ ಬಗ್ಗೆ ಸಿದ್ದು ಸರ್ಕಾರಕ್ಕೆ ಅಸಡ್ಡೆ; ವನಹಳ್ಳಿ ವೇಣುಗೋಪಾಲ್

KannadaprabhaNewsNetwork |  
Published : Aug 26, 2025, 01:02 AM IST
ಬಿಜೆಪಿ  | Kannada Prabha

ಸಾರಾಂಶ

ಧರ್ಮಾತೀತವಾಗಿ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುತ್ತಿದ್ದು, ಕೆಲ ವ್ಯಕ್ತಿಗಳು ಹಿಂದೂಧರ್ಮ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಪಕೀರ್ತಿ ತರುವ ಉದ್ದೇಶದಿಂದ ಇಲ್ಲಸಲ್ಲದ ಅಪಪ್ರಚಾರ ಮತ್ತು ಷಡ್ಯಂತ್ರ ರೂಪಿಸುತ್ತಿದ್ದು, ಇವರಿಗೆ ವಿದೇಶಗಳಿಂದ ಹಣಕಾಸಿನ ನೆರವು ಲಭ್ಯವಾಗುತ್ತಿದೆ, ಇಂತಹವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ, ಷಡ್ಯಂತ್ರ, ಸುಳ್ಳು ಆರೋಪಗಳನ್ನು ಮಾಡುತ್ತಿರುವವರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ನಗರದ ಹರಿಹರೇಶ್ವರ ದೇವಸ್ಥಾನದಿಂದ ವಿವಿಧ ಹಿಂದೂ ಪರ ಸಂಘಟನೆಗಳು, ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ರ‍್ಯಾಲಿ ನಡೆಸಿದರು.

ನಗರದ ತಾಲೂಕು ಕಚೇರಿಯ ಬಳಿ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ, ಬಿಜೆಪಿ ಮುಖಂಡ ದೇವನಹಳ್ಳಿ ಗೋಪಿ ಮಾತನಾಡಿ, ಧರ್ಮಸ್ಥಳವು ಹಿಂದೂಗಳ ಪವಿತ್ರಸ್ಥಳಗಳಲ್ಲಿ ಒಂದಾಗಿದ್ದು, ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಶ್ರೀಕ್ಷೇತ್ರದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ ಮುಸುಕುಧಾರಿಯ ಬಗ್ಗೆ ತಿಳಿದಿದ್ದು, ಆತನ ಹಿಂದೆ ಇರುವ ೧೨ ಮಂದಿಯನ್ನು ಬಂಧಿಸಬೇಕು ಹಾಗೂ ಸಮೀರ್‌ನನ್ನು ಬಂಧಿಸಿ ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವುದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಹಿಂದೂ ಧರ್ಮದ ಬಗ್ಗೆ ಅಸಡ್ಡೆ ಭಾವನೆಯಿದೆ, ಸನಾತನ ಹಿಂದೂ ಧರ್ಮವನ್ನು ಹಾಳು ಮಾಡುವವರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳದಿರುವುದು ಹಾಗೂ ಮುಸುಕುಧಾರಿ ತಂದ ತಲೆ ಬುರಡೆ ಬಗ್ಗೆ ಮೊದಲು ತನಿಖೆ ನಡೆಸಬೇಕಿತ್ತಾದರೂ ಅದನ್ನು ನಡೆಸದೆ ಆತನ ಹೇಳಿಕೆಗಳ ಆಧಾರ ಮೇಲೆ ಎಸ್‌ಐಟಿ ರಚಿಸಿ ಆತ ಹೇಳಿದ ಸ್ಥಳಗಳನ್ನು ಶೋಧನೆಗೆ ಒಳಪಡಿಸುವುದರ ಮೂಲಕ ಧರ್ಮಸ್ಥಳ ಕ್ಷೇತ್ರಕ್ಕೆ ಅಪಮಾನ ಉಂಟು ಮಾಡಿದ್ದು ಸರಿಯಲ್ಲ. ಸಿಎಂ ಸಿದ್ಧರಾಮಯ್ಯರಿಗೆ ಶ್ರೀ ಮಂಜುನಾಥಸ್ವಾಮಿ ಒಳಿತು ಮಾಡುವುದಿಲ್ಲವೆಂದು ಕಿಡಿಕಾರಿ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ವ್ಯಕ್ತಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಜಣ್ಣ ಮಾತನಾಡಿ, ಧರ್ಮಸ್ಥಳ ಕ್ಷೇತ್ರಕ್ಕೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದ್ದು, ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಇದರ ಹಿಂದೆ ಹಲವು ಸಂಘ ಸಂಸ್ಥೆಗಳು, ವಿದೇಶಿಯರ ಕೈವಾಡವು ಇದ್ದು, ತಲೆಬುರಡೆ ತಂದ ಚಿನ್ನಯ್ಯ ಹಣದ ಆಸೆಗಾಗಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದು, ಈ ಷಡ್ಯಂತ್ರಕ್ಕೆ ಕಾರಣರಾಗಿರುವ ೧೨ ಮಂದಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡ ಅರುಣ್ ಬಾಬು ಮತ್ತು ಕುರುಟಹಳ್ಳಿ ಡಾಬಾ ಮಂಜುನಾಥ್ ಮಾತನಾಡಿ, ಹಿಂದೂ ಧರ್ಮ ಮತ್ತು ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ನಡೆಯುತ್ತಿದ್ದು, ಧರ್ಮಸ್ಥಳವು ಸರ್ಕಾರಕ್ಕೆ ಪರ್ಯಾಯವಾಗಿ ಜನ ಸಾಮಾನ್ಯರಿಗೆ ಹಲವು ಉಪಯೋಗಿತ ಕಾರ್ಯ ಮಾಡುತ್ತಿದ್ದು ಅದನ್ನು ಸಹಿಸಲಾದವರು ಈ ಕೃತ್ಯಗಳನ್ನು ಮಾಡುತ್ತಿದ್ದಾರೆಂದು ಗುಡುಗಿದರು.

ಧರ್ಮಾತೀತವಾಗಿ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುತ್ತಿದ್ದು, ಕೆಲ ವ್ಯಕ್ತಿಗಳು ಹಿಂದೂಧರ್ಮ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಪಕೀರ್ತಿ ತರುವ ಉದ್ದೇಶದಿಂದ ಇಲ್ಲಸಲ್ಲದ ಅಪಪ್ರಚಾರ ಮತ್ತು ಷಡ್ಯಂತ್ರ ರೂಪಿಸುತ್ತಿದ್ದು, ಇವರಿಗೆ ವಿದೇಶಗಳಿಂದ ಹಣಕಾಸಿನ ನೆರವು ಲಭ್ಯವಾಗುತ್ತಿದೆ, ಇಂತಹವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.

ನಗರದ ಪ್ರಮುಖ ವೃತ್ತಗಳಾದ ಪಿಸಿಆರ್ ಕಾಂಪ್ಲೆಕ್ಸ್, ಚೇಳೂರು ವೃತ್ತ, ಬೆಂಗಳೂರು ವೃತ್ತದ ಮೂಲಕ ಹಾದು ಬಂದ ಪ್ರತಿಭಟನಾ ರ‍್ಯಾಲಿಯಲ್ಲಿ ಸನಾತನ ಧರ್ಮಕ್ಕೆ ಶ್ರೀರಾಮ, ಶ್ರೀಕೃಷ್ಣರಿಗೆ ಜೈಕಾರ ಮೊಳಗಿಸುತ್ತಾ ಹಾಗೂ ಷಡ್ಯಂತ್ರ ವಿರುದ್ಧ, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಾಗಿಬಂದರು.

ಧರ್ಮ ಮತ್ತು ಧರ್ಮಸ್ಥಳದ ಉಳಿವಿಗಾಗಿ ಪ್ರತಿಯೊಬ್ಬ ಹಿಂದೂ ಭಾಗವಹಿಸುವುದು ನಮ್ಮ ಕರ್ತವ್ಯವಾಗಿದೆಯೆಂದರು.

ನಂತರ ಗ್ರೇಡ್ -೨ ತಹಸೀಲ್ದಾರ್ ರವೀಶ್ ರಿಗೆ ಮನವಿ ಪತ್ರ ಸಲ್ಲಿಸಿದರು.

ಬಿಜೆಪಿ ಮುಖಂಡ ಅರುಣ್‌ಬಾಬು, ನಗರದ ಮಂಡಲ ಅಧ್ಯಕ್ಷ ಗೋವಿಂದರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ರಾಜಣ್ಣ, ಕೆ.ಎಂ.ರಾಜಶೇಖರರೆಡ್ಡಿ, ಪ್ರಧಾನ ಕಾರ್ಯದರ್ಶಿ ಗೋಕುಲ್ ಶ್ರೀನಿವಾಸ್, ಗಾಜಲಶಿವ, ಮಹಿಳಾ ಸಂಘದ ಅಧ್ಯಕ್ಷೆ, ಗ್ರಾಪಂ ಅಧ್ಯಕ್ಷೆ ಸುಮಿತ್ರಮ್ಮ, ನಗರ ಮಹಿಳಾ ಮೋರ್ಚಾ ಪಂಕಜಾ, ಪ್ರಧಾನ ಕಾರ್ಯದರ್ಶಿ ಶೃತಿ, ಶ್ವೇತಾ, ಮಾಜಿ ಗ್ರಾಮಾಂತರ ಅಧ್ಯಕ್ಷೆ ಭಾಗ್ಯಮ್ಮ, ಜಿಲ್ಲಾ ಎಸ್ಸಿ ಮೊರ್ಚಾ ದೇವರಾಜ್, ಕುರುಟಹಳ್ಳಿ ಡಾಬಾ ಮಂಜುನಾಥ್, ಕರಕಮಾಕಲಹಳ್ಳಿ ದೇವರಾಜ್, ನಿಕಟಪೂರ್ವ ನಗರ ಅಧ್ಯಕ್ಷ ಮಹೇಶ್ ಬೈ, ನಿಕಟಪೂರ್ವ ಗ್ರಾಮಾಂತರ ಮಂಡಲ ಅಧ್ಯಕ್ಷ ಶಿವಾರೆಡ್ಡಿ, ಪ್ರಕಾಶ್ ಗುಪ್ತಾ, ಭಾಗ್ಯಮ್ಮ, ಪಂಕಜಾ, ಶೃತಿ, ಶ್ವೇತಾ, ಗೌತಮಿ ಶಿವಣ್ಣ, ಅಶೋಕ್, ಸುರೇಶ್, ಕಾಳಿ, ಶಂಕರ, ಸುನೀಲ್, ಮಹೇಶ್ (ಬಾವ) ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ